logo

ಕೃಷ್ಣಂ ವಂದೇ ಜಗದ್ಗುರು

ಭಗವದ್ಗೀತೆಯಲ್ಲಿ ವಿಧಿ - ನಿಷೇಧಗಳೇ ತುಂಬಿವೆ.ವಿಧಿ ಎಂದರೆ ಏನನ್ನು ಮಾಡಬೇಕು, ನಿಷೇಧವೆಂದರೆ ಏನನ್ನು ಮಾಡಬಾರದೆಂದು. , ಕೃಷ್ಣ ಇವೆರಡನ್ನ ಭಗವದ್ಗೀತೆಯ ಮೂಲಕ ಜಗತ್ತಿಗೆ ಸಾರಿದ. ಹಾಗಾಗಿ ಆತನನ್ನ ಗುರುವೆಂದು ಸಂಬೋಧಿಸುವುದು.ಇದನ್ನೇ ಬೈಬಲ್ ಮತ್ತು ಕುರಾನ್ ಗಳು ಹೇಳೋದು.

ತನ್ನ ಕಂದಮ್ಮನನ್ನ ಅಂತ ಕೃಷ್ಣನನ್ನಾಗಿ ಅಲಂಕರಿಸಿ ಚೆಂದ ನೋಡುತ್ತಿರೋ ಇವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ನನ್ನ ಗೆಳೆಯರಾದ ಜೋಯಲ್ ಶಮನ್ ಡಿ'ಸೋಜರವರ ತಂಗಿ ಹಾಗು ಭಾವ. ಭಾರತ_ಸರ್ವಧರ್ಮದಲ್ಲಿ ಭಾವೈಕ್ಯತೆಯುಳ್ಳ ಸೌಹಾರ್ದತೆಗೆ ಹೆಸರಾದ ದೇಶ ಎಂಬುದನ್ನು ಮತ್ತೊಮ್ಮೆ ನನಗೆ ನೆನಪಾಗಿಸಿದೆ ಇವರ ಈ ಆತ್ಮೀಯ ಆಚರಣೆ.

ಸ್ವತಃ ಕೃಷ್ಣನೇ ಧರೆಗಿಳಿದು ಬಂದಂತೆ ಕಾಣುವ ಮುಗ್ದ ಮಗುವಿನ ಸ್ನಿಗ್ಧ ಸೌಂದರ್ಯ ಕಣ್ಣರಳಿಸುವಂತೆ ಮಾಡುತ್ತೆ. ನಾವೆಲ್ಲರೂ ಅಣ್ಣ-ತಮ್ಮಂದಿರು ನಾವೆಲ್ಲ ಒಂದೇ ಕುಟುಂಬದವರು ಎಂಬುದನ್ನ ಸಾರಿ ಹೆಳುತ್ತೆ. ಜೋಯಲ್ ಅವರು ನಮ್ಮ ಚಿತ್ರದ ಕ್ಯಾಮರಮ್ಯಾನ್ ಆಗಿ ಅವರು ಮಾಡಿರುವ ಕೆಲಸಕ್ಕಿಂತಲೂ ಹೆಚ್ಚಾಗಿ ಅವರ ಹಾಗೂ ಅವರ ಕುಟುಂಬದ ಈ ನಡೆ ನನ್ನಲ್ಲಿ ಅವರ ಮೇಲಿನ‌ ಗೌರವವನ್ನ ಮತ್ತಷ್ಟು ಹೆಚ್ಚಿಸಿದೆ‌ ನಮದೆಲ್ಲರದೂ ಒಂದೇ ಜಾತಿ, ಅದು ಮಾನವ ಜಾತಿ.

Happy Janmasthami
Pic by.- Joel Shaman DSouza

By Sharath Kumar Udupi

Add comment