logo

Invitation for Makara Sankranthi at Shri Panchalingeshwara Temple

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು 

ಮಕರ ಸಂಕ್ರಾಂತಿ ಉತ್ಸವದ ಕರೆಯೋಲೆ.

ಶ್ರೀ ದೇವರ ಸನಿಧಿಯಲ್ಲಿ ವಾಡಿಕೆಯಂತೆ ಜರುಗುವ ಮಕರ ಸಂಕ್ರಾಂತಿ ಉತ್ಸವ 15-01-2020 ಬುಧವಾರದಂದು ಜರಗಲಿರುವುದು.

ಕಾರ್ಯಕ್ರಮಗಳು:

ಪ್ರಾತಃ ಕಾಲ 6 ಗಂಟೆಗೆ ಧನು ಪೂಜೆ

ಪೂರ್ವಾಹ್ನ 9.30 ರಿಂದ ಶ್ರೀ ದೇವರಿಗೆ ಪಂಚಾಮೃತ ಪೂರ್ವಕ ಶತರುದ್ರಾಭಿಷೇಕ.

ಮಹಾಪೂಜೆ, ಬಲಿ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ

ಶತರುದ್ರಾಭಿಷೇಕ ಸೇವಾ ಕರ್ತರು: ಶ್ರೀ ಕರುಣಾಕರ ಶೆಟ್ಟಿ ದಂಪತಿಗಳು ಹನೆಹಳ್ಳಿ ನಡುಮನೆ ಬಾರಕೂರು

ಅನ್ನ ಸಂತರ್ಪಣೆ ಸೇವಾ ಕರ್ತರು: ದಿ: ಮುರಳೀಧರ ಅಡಿಗ ಇವರ ಮಕ್ಕಳು ಸಂತೆಗುಡ್ಡೆ ಬಾರಕೂರು, ಮತ್ತು ಶ್ರೀ ಕರುಣಾಕರ ಶೆಟ್ಟಿ ನಡುಮನೆ ಬಾರಕೂರು.

ಮಧ್ಯಾಹ್ನ11ಗಂಟೆಯಿಂದ ಲಲಿತಸಹಸ್ರನಾಮ ಪಠಣ

(ಶ್ರೀ ಭುವನೇಶ್ವರಿ ಲಲಿತ ಸಹಸ್ರ ನಾಮ ಬಳಗದವರಿಂದ )

ಸಂಜೆ 4 ಗಂಟೆಯಿಂದ ಭಜನೆ ಸೇವೆ..

ಸಂಜೆ 5.30 ರಿಂದ ಸ್ಯಾಕ್ಸೋಫೋನ್ ವಾದನ: ಶ್ರೀ ಭಾಸ್ಕರ ದೇವಾಡಿಗ ಬಾರಕೂರು

ಸಂಜೆ 6.30 ಕ್ಕೆ ಸಾಯಂಕಾಲ ಪೂಜೆ, ಶ್ರೀ ಪಂಚಲಿಂಗೇಶ್ವರ ದೇವರ ನಗರೋತ್ಸವ.

ರಾತ್ರಿ 8.30 ಕ್ಕೆ ರಂಗ ಪೂಜೆ, ಬಲಿ, ಪ್ರಸಾದ ವಿತರಣೆ

ರಂಗಪೂಜೆಯ ಸೇವಾ ಕರ್ತರು: ನಾಯರ ಬೆಟ್ಟು ದಿ: ಮಂಜುನಾಥ ಉಂಗ್ರಪಳ್ಳಿಯವರ ಮಕ್ಕಳು.

ಸರ್ವರಿಗೂ ಆದರದ ಸ್ವಾಗತ ಬಯಸುವ

ಆಡಳಿತ ಮಂಡಳಿ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋಟೆಕೇರಿ ಬಾರಕೂರು

Add comment