logo

MHPS shines in Hobali Sports


News n Pics Alwyn 

ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ಮತ್ತು ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ ಸಾಸ್ತಾನ ಇವರ ಸಂಯುಕ್ತ ಆಶ್ರಯದಲ್ಲಿ 19/09/2019 ರಂದು ಪಾಂಡೇಶ್ವರ ಶಾಲಾ ಕ್ರೀಡಾಂಗಣದಲ್ಲಿ   ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಬಹಳ ಯಶಸ್ವಿಯಾಗಿ ನಡೆಯಿತು.

ಬಹಳಷ್ಟು ವ್ಯವಸ್ಥಿತವಾಗಿ ನಡೆಸಲ್ಪಟ್ಟ ಈ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಚಾಂಪಿಯನ್ ಆಗಿ ಆತಿಥೇಯ ಪಾಂಡೇಶ್ವರ ಶಾಲೆಯ ವಿದ್ಯಾರ್ಥಿ ಶಶಾಂಕ್ ಹಾಗೂ ಬಾಲಕಿಯರ ವಿಭಾಗದಲ್ಲಿ ಮೇರಿನೋಲ್ ಬಾರಕೂರಿನ ಪ್ರಗತಿ ಚಾಂಪಿಯನ್ ಆಗಿ ಮೂಡಿ ಬಂದರು.

ಟೀಮ್ ಚಾಂಪಿಯನ್ ಶಿಪ್ ಸರಕಾರಿ ಪ್ರಾಥಮಿಕ ಶಾಲೆ ಮಣೂರು ಪಡೆಯಿತು..

ಈ ಕ್ರೀಡಾಕೂಟದಲ್ಲಿ ಬಾರಕೂರು ಮೆರಿನೋಲ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಪ್ರತಿಮ ಸಾಧನೆ ಮೂಡಿಬಂತು.

ಬಾರಕೂರು ಮೆರಿನೋಲ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಪ್ರಗತಿ ಅವರು ಎತ್ತರ ಜಿಗಿತ ,ಉದ್ದ ಜಿಗಿತ,ಹಾಗೂ 100 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಕೂಟದ ವೈಯುಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ..

ಇತರ ವಿದ್ಯಾರ್ಥಿಗಳ ಸಾಧನೆ

ವಿಶಾಲ್ : ಚಕ್ರ ಎಸೆತ ಪ್ರಥಮ, ಗುಂಡು ಎಸೆತ ಪ್ರಥಮ

ವಿಘ್ನೇಶ್ :ಎತ್ತರ ಜಿಗಿತ ಪ್ರಥಮ , ಉದ್ದ ಜಿಗಿತ ತೃತೀಯ

ಶ್ರೀ ರಕ್ಷಾ : ಎತ್ತರ ಜಿಗಿತ ತೃತೀಯ , ಉದ್ದ ಜಿಗಿತ ದ್ವಿತೀಯ

ಎಲ್ಲಾ ಪದಕ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಈ ಮಟ್ಟಕ್ಕೆ ಗುರಿ ತಲುಪವಲ್ಲಿ ಸತತ ಪರಿಶ್ರಮ ಪಡುತ್ತಿರುವ ತರಬೇತುದಾರರಾದ ಶ್ರೀ ಸುರೇಶ್ ಕುಂದರ್ ಅವರಿಗೆ ಅಭಿನಂದನೆಗಳು.

ಮುಂದಿನ ದಿನಗಳಲ್ಲಿ ಇವರ ತರಬೇತಿಯಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇವೆ.

Leave Your Comment