ಮಕ್ಕಳ ಕವನ
ಶೀರ್ಷಿಕೆ:: ಕ್ರಿಸ್ಮಸ್- ಸಾಂತಾಕ್ಲಾಸ್
    
    
ಸಾಂತಾಕ್ಲಾಸ್ ಬಂದನು ಉಡುಗೊರೆಯನ್ನು ತಂದನು
ಸಾಂತಾಕ್ಲಾಸ್ ಬಂದನು ಹರುಷವನ್ನು ತಂದನು!!ಪ!!
    
ಕೆಂಪು ಬಿಳಿ ದಪ್ಪದಂಗಿಯ ಧರಿಸುವನು
ಬಿಳಿಯ ಗಡ್ಡಧಾರಿಯು, ದಪ್ಪ ಮೂಗಿನವನು
ದೊಡ್ಡ ಕನ್ನಡಕ ಧರಿಸಿ ಹಿಡಿದ
ಕೈಯಲ್ಲೊಂದು ಊರುಗೋಲನು!!೧!!
    
ಬಗೆಬಗೆಯ ಸಿಹಿತಿಂಡಿಗಳ ಪೊಟ್ಟಣವನ್ನು
ನೀಡುವ ಜಾದುಗಾರನು
ಹಿಮಜಿಂಕೆಗಳ ಬಂಡಿ ಏರಿ
ಕೊರೆಯುವ ಹಿಮದಲಿ ಸಾಗುವನು!!೨!!
    
ಜಿಂಗಲ್ ಬೆಲ್ , ಐಸ್ ಬಾಲ್
ಮಕ್ಕಳ ನೆಚ್ಚಿನ ಆಟಿಕೆಗಳ ಕೊಡುವನು
ರಾತ್ರಿ ಬಂದು ಉಡುಗೊರೆಯ ನೀಡಿ
ಮುಂಜಾನೆ ಮಾಯವಾಗುವನು!!೩!!
    
ಮಕ್ಕಳ ಮುದ್ದಿನ ತಾತನು ಇವನು
ಸಂತ ನಿಕೋಲಸ್ ಎನ್ನುವರು,
ಕಡಲ ಯಾತ್ರಿಕರ ರಕ್ಷಕನು ಇವನು
ಅಂಟಾರ್ಕಟಿಕ್ ತೀರದಲಿ ನೆಲೆಸಿಹನು!!೪!!
    
ಕ್ರಿಸ್ಮಸ್ ಹಬ್ಬದ ಸಮಯದಲ್ಲಿ
ಹರುಷವ ನೂರ್ಮಡಿಗೊಳಿಸುವನು
ಏಸುವಿನ ಜನನದ ಖುಷಿಯನು
ಮನದಲ್ಲಿ ಹಾಗೆಯೇ ಉಳಿಸುವನು!!೫!!
-ಸಿಂಧು ಭಾರ್ಗವ ಬೆಂಗಳೂರು
