logo

MSS, Children's Literary Festival, you are invited.

You all are cordially invited for the 19th edition of Udupi District Level Children's Literary Convention, Makkala Sahithya Sammelana, jointly organized by Shanthivana Trust, Dharmasthala, Udupi Jilla Panchayath Education Department, barkuronline.com, Shri Ramakrishna Ashram,  Belagavi and Mangalore,  Swami Purushotthamanandaji Huttoora Samskrithika Parishath,  Barkur, Swami Vivekananda Samskrithika Kendra, Barkur and Kannada Sahithya Parishath,  Brahmavara Barkur,  on 8th February 2020,  at Shrimathi Rukmini Shedthi Memorial National Government First Grade College,  Barkur. 

ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ,  ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಬಾರಕೂರು ಆನ್ ಲೈನ್ ಡಾಟ್ ಕಾಮ್, ಶ್ರೀ ರಾಮಕೃಷ್ಣ ಆಶ್ರಮ ಬೆಳಗಾವಿ ಮತ್ತು ಮಂಗಳೂರು, ಸ್ವಾಮಿ ಪುರುಷೋತ್ತಮಾನಂದಜಿ ಹುಟ್ಟೂರ ಸಾಂಸ್ಕ್ರತಿಕ ಪರಿಷತ್ (ರಿ)ಬಾರಕೂರು, ಸ್ವಾಮಿ ವಿವೇಕಾನಂದರ ಸಾಂಸ್ಕ್ರತಿಕ ಕೇಂದ್ರ ಬಾರಕೂರು, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ-ಬಾರಕೂರು ವಲಯ ಇವರ ಸಹಯೋಗದಲ್ಲಿ, ಸ್ವಾಮಿ ವಿವೇಕಾನಂದರ 157ನೆಯ ಜಯಂತಿ ಪ್ರಯುಕ್ತ,  ಉಡುಪಿ ಜಿಲ್ಲಾ ಮಟ್ಟದ 19ನೇ ವರ್ಷದ, ಮಕ್ಕಳ ಸಾಹಿತ್ಯ ಸಮ್ಮೇಳನ ಇದೇ ಬರುವ ಫೆಬ್ರವರಿ 8 ಶನಿವಾರದಂದು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ಧರ್ಜೆ ಕಾಲೇಜಿನ ಕೋಟ ಶಿವರಾಮ ಕಾರಂತ ಸಾಹಿತ್ಯ ವೇದಿಕೆಯಲ್ಲಿ ಜರಗಲಿರುವುದು.

ಸಮ್ಮೇಳನದ ಅಧ್ಯಕ್ಷತೆ: ಕುಮಾರಿ ವರ್ಷ 9 ನೇ ತರಗತಿ ಪ್ರೌಢಶಾಲಾ ವಿಭಾಗ ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ.

ಸನ್ಮಾನ : ಮಧುಕರ್ ಎಸ್.(ಜಿಲ್ಲಾ ದೈಹಿಕ ಶಿಕಣಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ)

ಶ್ರೀ ಬಿ.ಸುಧಾಕರ್ ರಾವ್ (ನಿವೃತ್ತ ಮುಖ್ಯೋಪಾಧ್ಯಾಯ ರು ಬಾರಕೂರು)

ಅಭಿನಂದನೆ: ಆರೋನ್ ಮ್ಯಾಥ್ಯೂ ಪಾಯ್ಸ್ 

(ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕೆ.ಶಿವರುದ್ರಯ್ಯ ನಿರ್ದೇಶನದ  ರಾಮನ ಸವಾರಿ ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿ ತಾನು ಅಭಿನಯಿಸಿದ ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಟನೆಗಾಗಿ 2018-19 ನೇ ಸಾಲಿನ ಕರ್ನಾಟಕ ರಾಜ್ಯಮಟ್ಟದ ಶ್ರೇಷ್ಠ ಬಾಲ ನಟ ಪ್ರಶಸ್ತಿಯನ್ನು ಗೆದ್ದುಕೊಂಡ ಬಾರಕೂರಿನ ಬಾಲ ಪ್ರತಿಭೆ)

ಸರ್ವರಿಗೂ ಆದರದ ಸ್ವಾಗತ.

Leave Your Comment