logo

Shrikanth Achar shines in traditional jewellery

ಪಾರಂಪರಿಕ ಆಭರಣ ತಯಾರಿಕೆಯಲ್ಲಿ ಬಹಳ ಪ್ರಸಿದ್ದಿ ಪಡೆದಿರುವ ಶ್ರೀಕಾಂತ್ ಆಚಾರ್ ಕಲ್ಚಪ್ರ ಬಾರಕೂರು ಇವರ ನೇತೃತ್ವದಲ್ಲಿ ರಚನೆಗೊಂಡ ಸ್ವರ್ಣ ಪಾದುಕೆ. ಶಾಖಾ ಮಠ ಕಜ್ಕೆಯ 37ನೇ ಚಾತುರ್ಮಾಸ ವ್ರತಾನುಷ್ಠಾನದಲ್ಲಿರುವ ಶ್ರೀ ಶ್ರೀ   ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಗಳವರಿಗೆ ಸೆಪ್ಟೆಂಬರ್ 12 ರಂದು ಪೂರ್ವಾಹ್ನ  10. 30 ಕ್ಕೆ ಸ್ವರ್ಣ ಪಾದುಕೆ ಸಮರ್ಪಣೆಗೊಳ್ಳಲಿದೆ..

ಬಹಳ ಆಕರ್ಷಕವಾಗಿ ಸುಂದರ ಕುಸುರಿ ಕೆಲಸದಿಂದ ಈ ಸ್ವರ್ಣ ಪಾದುಕೆಯನ್ನು ನಿರ್ಮಿಸಿದ ಶ್ರೀಕಾಂತ್ ಆಚಾರ್  ಅವರಿಗೆ ಅಭಿನಂದನೆಗಳು.

ಶ್ರೀಕಾಂತ್ ಆಚಾರ್ ಅವರು ಈಗಾಗಲೇ ಬಾರಕೂರು ಹಾಗೂ ಸುತ್ತಮುತ್ತಲಿನ ಅನೇಕ ದೇವಸ್ಥಾನಗಳ ಮೂರ್ತಿ, ಪ್ರಭಾವಳಿ ಇನ್ನಿತರ ಪರಿಕರಗಳನ್ನು ನಿರ್ಮಿಸಿ ಜನಮೆಚ್ಚಿಗೆ ಪಡೆದಿದ್ದಾರೆ..ಪ್ರಸ್ತುತ ಬ್ರಹ್ಮಾವರದಲ್ಲಿ ಶ್ರೀ ನಿಧಿ ಹೆರಿಟೇಜ್ ಪಾರಂಪರಿಕ ಅಭರಣ ಭಂಡಾರವನ್ನು ಮುನ್ನೆಡುಸುತ್ತಿದ್ದಾರೆ ..ಶುಭವಾಗಲಿ ಶ್ರೀಕಾಂತ್ ಆಚಾರ್ ಬಾರಕೂರು...

Leave Your Comment