ಶ್ರೀ ಸಿಂಹವಾಹಿನಿ ಬನ್ನಿ ಮಹಾಕಾಳಿ ದೇವಸ್ಥಾನ, ಸಿಂಹಾಸನ ಗುಡ್ಡೆ
ಪ್ರಸಿದ್ಧ ಬಾರಕೂರಿನ ಪ್ರಾಚೀನ ದೇವಾಲಯ ಹಾಗೂ ಪ್ರಧಾನ ದೇವಾಲಯ, ನವರಾತ್ರಿಯಲ್ಲಿ ಶ್ರೀ ಚಕ್ರ ಆರಾಧನೆಗಳು ನಡೆಯುವ ಏಕೈಕ ದೇಗುಲ ಶ್ರೀ ಸಿಂಹ ವಾಹಿನಿ ಬನ್ನಿ ಮಹಾಕಾಳಿ ದೇವಸ್ಥಾನ ಸಿಂಹಾಸನ ಗುಡ್ಡೆ ಬಾರಕೂರು.
ಉತ್ತರ ವಾಹಿನಿಯಾದ ಸೀತಾ ನದಿಯ ಬಲದಂಡೆಯಲ್ಲಿ ದೇವಸ್ಥಾನ ಇದೆ. ದೇವಸ್ಥಾನದ ಎಡ ಭಾಗದಲ್ಲಿ ಶಮೀ ವೃಕ್ಷ ಇದೆ ಪಾಂಡವರು ಅಜ್ಞಾತ ವಾಸದ ಸಮಯದಲ್ಲಿ ಶಮೀ ವೃಕ್ಷ ದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಇರಿಸಿದ್ದರು ಎಂಬ ಪ್ರತೀತಿ ಇದೆ..ಆ ಸಮಯದಲ್ಲಿ ಈಗಿನ ಬೆಣ್ಣೆಕುದ್ರು ವಿರಾಟ ನಗರವಾಗಿತ್ತು..ಇಲ್ಲೇ ಕೀಚಕನ ವದೆ ಮಾಡಲಾಗಿತ್ತು ಎಂಬ ಉಲ್ಲೇಖವಿದೆ. ದೇವಸ್ಥಾನದ ಸ್ವಲ್ಪ ಮುಂದಕ್ಕೆ ಎಡ ಭಾಗದಲ್ಲಿ ಅರಮನೆ ಹನುಮಂತ ದೇವರು ಹಾಗೂ ಬಲ ಭಾಗದಲ್ಲಿ ಬೇತಾಳೇಶ್ವರ, ಕಲ್ಲುಕುಟಿಗ, ಚೌಡೇಶ್ವರಿ,ಯಕ್ಷೇಶ್ವರ, ಅಗ್ನಿ ಭೈರವರು ಇದ್ದಾರೆ.
ಅಳಿಯ ಸಂತಾನ ಪ್ರವರ್ತಕನಾದ ಭೂತಾಳ ಪಾಂಡ್ಯನು ರಾಜ್ಯಭಾರ ಮಾಡಲು ಶಿವ ಗಣನಾದ ಕುಂಡೋಧರ ವಿಕ್ರಮಾದಿತ್ಯ ನು ಆಳಿದ ಧರ್ಮ ಸಿಂಹಾಸನವನ್ನು ತಂದು ಕೊಡುತ್ತಾನೆ.ಆತನು ಅದರ ಮೇಲೆ ಕುಳಿತು ರಾಜ್ಯಭಾರ ಮಾಡಿದನು ..ಆತನ ಕಾಲ ನಂತರ ಸ್ವರ್ಣಾಂಕಿತ ಶ್ರೀಚಕ್ರವನ್ನು ಸ್ಥಾಪಿಸಿದರು ಮತ್ತು ನವರಾತ್ರಿಯಲ್ಲಿ ದಶಮಿ ಪರ್ಯಂತ ಶ್ರೀ ಚಕ್ರ ವನ್ನು ಬರೆದು ಅದರ ಮೇಲೆ ವಿಕ್ರಮಾದಿತ್ಯ ಕರಾರ್ಚಿತ ಶಿವ ಲಿಂಗವನ್ನು ಇಟ್ಟು ಪೂಜೆ ಮಾಡುವುದು ಸಂಪ್ರದಾಯ. ಅಂದಿನಿಂದ ಇಂದಿನವರೆಗೂ ಪ್ರತ್ಯಕ್ಷವಾಗಿ ನವರಾತ್ರಿಯಲ್ಲಿ ಶ್ರೀ ಚಕ್ರ ಪೂಜೆ ಹಾಗೂ ನಿತ್ಯ ಪೂಜೆ ನಡೆಯುತ್ತದೆ.
ಯಾವುದೇ ಆದಾಯ ಮೂಲ ಇಲ್ಲದ ದೇವಸ್ಥಾನಕ್ಕೆ ಭಕ್ತಾಧಿಗಳು ತಮ್ಮಿಂದ ಆದ ಸಹಾಯವನ್ನು ನೀಡಿ ಸಹಕರಿಸ ಬೇಕು..ಸೇವೆಯನ್ನು ಕೊಟ್ಟವರ ಹೆಸರಿನಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಿ ಪ್ರಸಾದ ಕೊಡಲಾಗುತ್ತದೆ..
ಸಹಾಯ ಧನ ಸಲ್ಲಿಸುವ ವಿಳಾಸ:
ಶ್ರೀ ಸಿಂಹವಾಹಿನಿ ಬನ್ನಿ ಮಹಾಕಾಳಿ ದೇವಸ್ಥಾನ, ಸಿಂಹಾಸನ ಗುಡ್ಡೆ ಬಾರಕೂರು.576210.
S.B ಖಾತೆ ಸಿಂಡಿಕೇಟ್ ಬ್ಯಾಂಕ್ ಬಾರಕೂರು, ಖಾತೆ ನಂ: 01182200069951 ಕ್ಕೆ ಸಲ್ಲಿಸಬಹುದು.
ಸಂಪರ್ಕ ಸಂಖ್ಯೆ: 0820 - 2587615, 9481429052