logo

500 kits for needy.. Remarkable achievement of Nammuru Barkur

29/04/2020 .Anand Kumar Barkur: 

Also read Nammuru Barkur shows the way by Archibald Furtado

Nammuru Barkuru, a Facebook page of Barkurians or residents of Barkur residing worldwide, have contributed food kits to 500 needy families of Barkur during this lockdown period.

Nammuru Barkuru is a Facebook group of Barkurians residing worldwide. In an initiative taken by Anand Kumar Barkur, Alwyn Andrade, Ganesh Shetty, Mala Santhosh Shetty, Ashwin Kamath and other the group members decided to provide food kits to the needy families of Barkur. Around 500 kits worth Rs 3.5 lac were distributed to the needy of the locality.

Speaking to the media representatives, Alwyn Andrade said, "There are more than 10,000 members in our Facebook group. Many of the members have contributed for this cause. We would be delivering these kits to the homes of the needy families. We have decided not to take any photographs of the kits distribution and respect the anonymity of the beneficiaries" he said.

The food kits included 10 kg rice, sugar, tea powder, rava, and other essential food items were prepared by the voluntary members of Nammuru Barkuru group.

Speaking on the occasion Fr Philip Neri Arranha, Parish Priest, St Peters Church Barkur said, "Asha workers, police personnel are working, risking their lives to spread awareness about the pandemic. May Almighty God bless them abundantly. Nammuru Barkuru group should share happiness as well as sorrows with everyone. The team should continue doing these type of noble work in the upcoming days also" he wished.

Sub Inspector of Brahmavar police station appreciated and advised stating, "In some cases while organizing such programmes, social distancing is not maintained, and it is appreciable to note that you have organized this programme adhering to the social distancing norms. The team has made all efforts to follow the rules and regulations. You must give information about outsiders visiting the place to the health workers."

ASHA workers, Electricians under electricity department and Chandru, a Civil Servant, were felicitated on the occasion for their selfless service.

President of Barkur gram panchayat Shaila D’Souza, Rajyotsava Awardee Shantharam Shetty Barkur, Superior of IHM convent, Sr Jasmith Crasta, Alwyn Andrade, Ganesh Shetty, Mallika Shetty, Anand Kumar Barkur, Savitha Furtado, John Picardo were among others in the team members present on the occasion.

Immediately after the function , the distribution of the kits to the beneficiaries was taken over by teams lead by Alwyn Andrade, Ganesh Shetty, Savitha Furtado, Sujatha Andrade, Sujatha A.Shetty, Mallika Shetty, Udaya Poojari, Anil Kumar, Sandip Amin Kooradi and Keeriprasad Korradi in their vehicles. 250 kits were distributed by the end of the day. John Picardo Barkur is serving the in charge of the Kits storage and proper distribution and maintaining  the records.  


ನಮ್ಮೂರು ಬಾರಕೂರು ಫೇಸ್ಬುಕ್ ಗ್ರೂಫ್  ಕೋವಿಡ್-19 ಲಾಕ್ ಡೌನ್ ಸಂಕಷ್ಟದಲ್ಲಿರುವವರ ಸಹಾಯಹಸ್ತ ಯೋಜನೆ ಕಿಟ್ ವಿತರಣಾ ಕಾರ್ಯಕ್ಕೆ ಇಂದು (29/04/2020) ಬೆಳಿಗ್ಗೆ  9 ಗಂಟೆಗೆ ಬಾರಕೂರು ಮೆರಿನೋಲ್ ಹೈಸ್ಕೂಲ್ ನಲ್ಲಿ  ಅತಿಥಿಗಳ ಸಮ್ಮುಖದಲ್ಲಿ  ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಬಾರಕೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರನ್ನು, ಬಾರಕೂರು ವಿಭಾಗದ ಮೆಸ್ಕಾಂ ಸಿಬ್ಬಂದಿಯವರನ್ನು, ಪೌರ ಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಾಮಾಜಿಕ ಅಂತರವನ್ನು ಕಾಪಾಡಿಕೊಂಡ ಈ ಸರಳ ಸಮಾರಂಭದಲ್ಲಿ  ಅತಿಥಿಗಳಾಗಿ ಬಾರಕೂರು  ಚರ್ಚ್ ಧರ್ಮಗುರುಗಳಾದ ರೆ. ಫಾ. ಫಿಲಿಪ್ ನೇರಿ ಆರಾನ್ಹ, ಬ್ರಹ್ಮಾವರ ಅರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿ.ರಾಘವೇಂದ್ರ, ಉದ್ಯಮಿ ಶ್ರೀ ಬಿ.ಶಾಂತರಾಮ ಶೆಟ್ಟಿ ಬಾರಕೂರು, ಬಾರಕೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಾ ಡಿಸೋಜ , ಮಾಧ್ಯಮ ಪ್ರತಿನಿಧಿಗಳು, ನಮ್ಮೂರು ಬಾರಕೂರು ಸದಸ್ಯರು, ಆಶಾ ಕಾರ್ಯಕರ್ತೆಯರು, ಮೆಸ್ಕಾಂ ಸಿಬ್ಬಂದಿ, ಪೌರ ಕಾರ್ಮಿಕರು ಉಪಸ್ಥಿತರಿದ್ದರು.ಅನಿವಾರ್ಯ ಕಾರಣಗಳಿಂದ ಮುಸ್ಲಿಂ ಮೌಲಿಗಳು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಕಿಟ್ ಗಳನ್ನು ಪರಿಶೀಲಿಸಿ ಮಾತನಾಡಿದ ಬ್ರಹ್ಮಾವರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿ.ರಾಘವೇಂದ್ರ ಅವರು ನಮ್ಮೂರು ಬಾರಕೂರು ಸದಸ್ಯರ ಒಗ್ಗಟ್ಟು, ಕಾರ್ಯ ವೈಖರಿಗೆ   ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಿಕ ಜಾಲತಾಣವನ್ನು ಹೀಗೂ ಸದುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ನಮ್ಮೂರು ಬಾರಕೂರು ಗ್ರೂಪ್ ಸಮಾಜಕ್ಕೆ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಕ್ಕೆ ಸದುಪಯೋಗ ವಾಗುವಂತ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಿ ಎಂದು ಶುಭ ಹಾರೈಸಿದರು.

ಉದ್ಯಮಿ ಶ್ರೀ ಬಿ ಶಾಂತರಾಮ ಶೆಟ್ಟಿ, ಶೈಲಾ ಡಿ ಸೋಜಾ,  ರೆ. ಫಾ. ಫಿಲಿಪ್ ನೇರಿ ಆರಾನ್ಹ, ಅವರು ಈ ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಕೇವಲ 4 ದಿನಗಳ ಅಂತರದಲ್ಲಿ  ಗ್ರೂಪ್  ಸದಸ್ಯರಿಂದ ಸುಮಾರು 3.5 ಲಕ್ಷ ರೂಪಾಯಿ ಧನಸಹಾಯವನ್ನು ಕ್ರೋಡೀಕರಿಸಿ 500 ಕಿಟ್ ಸಿದ್ದ ಪಡಿಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಜಾಲ ತಾಣವನ್ನು ಕೇವಲ ಮನೋರಂಜನೆಗೆ ಸೀಮಿತಗೊಳಿಸದೆ, ಇಂತ ಸಂದಿಗ್ದ ಪರಿಸ್ಥಿತಿಯಲ್ಲಿ ಸಮಾಜಕ್ಕೆ  ಏನಾದರು ನೆರವುಸಿಗಬೇಕೆಂಬ ಒಂದು ಸದ್ದುದ್ದೇಶ ಹೊಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಹಾಗೂ ಸರಕಾರದ ಆದೇಶದಂತೆ ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದನ್ನು ಆದಷ್ಟು  ಕಡಿಮೆ ಮಾಡಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸರಕಾರದ ಜೊತೆ ಕೈ ಜೋಡಿಸ ಬೇಕೆಂದು ವಿನಂತಿಸಿಕೊಂಡರು.

ಈ ಮೂಲಕ ನಮ್ಮೂರು ಬಾರಕೂರು ಗ್ರೂಪ್ ವಿಶ್ವ ಪ್ರಸಿದ್ದಿ ಪಡೆಯಲಿ ಎಂದು ಶುಭ ಹಾರೈಸಿದರು.

ಈಗಾಗಲೇ ಕಿಟ್ ಗಳನ್ನು ನಿರ್ದಿಷ್ಟ ಫಲಾನುಭವಿ ಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸದಸ್ಯರ ಸಹಕಾರ ದೊಂದಿಗೆ ಆರಂಭಿಸಿದ್ದು, ಒಂದೆರಡು ದಿನಗಳಲ್ಲಿ 500 ಕಿಟ್ ಗಳನ್ನು ಆಯ್ದ ಫಲಾನುಭವಿ ಗಳಿಗೆ ತಲುಪಿಸುವವ ವ್ಯವಸ್ಥೆ ಮಾಡಲಾಗುವುದು.

ಕಿಟ್ ಗಳನ್ನು ವಿತರಿಸಿಸಲು ವಾಹನಗಳ ನೆರವು ನೀಡಿದ ಸಂಘದ ಸದಸ್ಯರಿಗೆ ತುಂಬು ಹೃದಯದ ಕ್ರತಜ್ಞತೆಗಳು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಆಲ್ವಿನ್ ಆಂದ್ರಾದೆ ಮತ್ತು ಗಣೇಶ್ ಶೆಟ್ಟಿ  "ಈ ಚಿಕ್ಕ  ಚೊಕ್ಕ  ಸಭಾ ಕಾರ್ಯಕ್ರಮದ  ತಕ್ಷಣ  ಕಿಟ್  ವಿತರಣೆ ಪ್ರಾರಂಭವಾಯಿತು. ಜೋನ್  ಪಿಕಾರ್ಡೊ  ಇವರನ್ನು  ಕಿಟ್ ಗಳನ್ನು ಇಟ್ಟ  ಜಾಗದ  ಮೇಲ್ವಿಚಾರಕರಾಗಿ  ನೇಮಿಸಲಾಯಿತು.

ಅಲ್ಲಿಂದ  ಒಂದು  ಕಿಟ್  ಹೊರಗೆ ಹೋಗಬೇಕಾದರೂ  ಅವರು ಕೊಟ್ಟು ಅದರ  ವಿವರ  ಬರೆದಿಡುತ್ತಾರೆ. ಪುನಃ  ಕಿಟ್ ತೆಗೆದುಕೊಂಡು ಬರುವಾಗ ಮೊದಲು  ಯಾರಿಗೆಲ್ಲ  ಹಂಚಿದ್ದಾರೆ ಅವರ ಸಹಿ  ಮತ್ತು  ವಿವರದ  ಪಟ್ಟಿ  ಅವರಿಗೆ ನೀಡಬೇಕು. ನಂತರ  4 ಕಾರುಗಳಲ್ಲಿ  ಕಿಟ್  ವಿತರಣೆ ಪ್ರಾರಂಭವಾಯಿತು." ಎಂದು ವಿವರಿಸಿದರು.  

ಮುಂದುವರೆಸಿ "ಇಂದು  ಸಂಜೆ  ತನಕ  ಸುಮಾರು  250 ಕಿಟ್ ವಿತರಣೆ ಮಾಡಲಾಗಿದೆ. ನಾಳೆ  ಉಳಿದ ಕಿಟ್  ವಿತರಣೆ ಮುಗಿಯಲಿದೆ.

ಇಂದು ಹೆಚ್ಚಿನ ಮನೆಗಳಲ್ಲಿ   ಯಾವುದೇ ಮುನ್ಸೂಚನೆ  ಇಲ್ಲದೆ   ಕಿಟ್ ತೆಗೆದುಕೊಂಡು  ಅವರ  ಸಂತೋಷ  ಸಡಗರ  ನೋಡಿ ಕಣ್ಣು  ತುಂಬಿ  ಬಂತು. ನನ್ನ ಹೆಸರು ಯಾರೂ  ಕೊಟ್ಟದ್ದು...? ನಮಗೆ  ಕಷ್ಟ  ಇದ್ದದು  ನಿಮಗೆ ಹೇಗೆ  ತಿಳಿಯಿತು. ಹೀಗೇ ಬಹಳಷ್ಟು  ಖುಷಿ  ಪಟ್ಟರು. ಕಿಟ್  ಕೊಟ್ಟ  ಸಹಕರಿಸದ ಎಲ್ಲರಿಗೂ  ದೇವರು  ಹರಸಲಿ  ಅಂತ  ಮನ  ತುಂಬಿ ಹರಸಿದರು.

ಜನರ  ಮಾನವೀಯತೆ   ಇನ್ನೂ  ಜೀವಂತ  ಇದೆ  ಅನ್ನೋದಕ್ಕೆ ಒಂದೆರೆಡು  ಮನೆಯವರು  ನಮಗಿಂತ  ಅವರಿಗೆ  ಹೆಚ್ಚು  ಕಷ್ಟ ಇದೆ  ಅವರಿಗೆ  ಕೊಡಿ  ಅಂತ  ತಿಳಿಸಿದರು.

ನಾವು  ಉಡುಪಿ  ಜಿಲ್ಲೆಯವರು ಇಲ್ಲಿ  ಯಾರಿಗೂ  ಏನೂ  ಕಷ್ಟ ಇಲ್ಲ  ಅಂತ  ತಿಳಿದುಕೊಂಡಿದ್ದ ನಮಗೆ  ನಮ್ಮೂರಲ್ಲೂ  ಇಷ್ಟು ಕಷ್ಟದಲ್ಲಿ  ಇರುವವರು ಇದ್ದಾರಾ   ಅನಿಸಿತು.

ಏನೇ  ಆಗಲಿ ನಾವಿಂದು  ಮಾಡಿದ್ದು  ದೇವತಾ  ಕೆಲಸ ಅನ್ನೋ ಅಭಿಪ್ರಾಯ  ನಮಗೆ  ಬಂತು. ನಮ್ಮ ಈ   ಜನರ   ಖುಷಿ ಸಂತೋಷಕ್ಕೆ   ನಿಜಕ್ಕೂ  ಕಾರಣಿ ಕರ್ತರು  ನೀವು  ನಮ್ಮ ದಾನಿಗಳು. ನಿಮಗೆ  ಆ ದೇವರು  ಖಂಡಿತಾ  ಚೆನ್ನಾಗಿ  ಇಡುತ್ತಾನೆ ಅನ್ನೋದಕ್ಕೆ  ಇಂದು  ನಾವು  ಆ ಮುಖಗಳಲ್ಲಿ  ಕಂಡ  ನಗು,   ಆ ಕಣ್ಣುಗಳಲ್ಲಿ  ಕಂಡ  ಧನ್ಯತಾಭಾವವೇ  ಸಾಕ್ಷಿ" ಎಂದ ಇಬ್ಬರೂ ನಾಯಕರ ಕಣ್ಣುಗಳಲ್ಲಿ ಸಂತ್ರಪ್ತಿ ಕಂಡು ಬಂತು.

ಕಿಟ್ ವಿತರಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಆಲ್ವಿನ್ ಅಂದ್ರಾದೆ, ಗಣೇಶ್ ಬಿ.ಶೆಟ್ಟಿ, ಸವಿತಾ ಪುರ್ಟಾಡೊ, ಸುಜಾತ ಆಂದ್ರಾದೆ, ಸುಜಾತಾ ಎ. ಶೆಟ್ಟಿ, ಶ್ರೀಮತಿ ಮಲ್ಲಿಕಾ ಶೆಟ್ಟಿ, ಉದಯ ಪೂಜಾರಿ, ಅನಿಲ್ ಕುಮಾರ್, ಸಂದೀಪ್ ಅಮೀನ್ ಕೂರಾಡಿ, ಕೀರ್ತಿ ಪ್ರಸಾದ್ ಕೂರಾಡಿ ಹಾಗೂ ವಾಹನದ ನೆರವು ನೀಡಿದ ನಮ್ಮೂರು ಬಾರಕೂರಿನ  ಸರ್ವ ಸದಸ್ಯರಿಗೂ ಹಾಗೂ ಗೋದಾಮು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜೋನ್ ಪಿಕಾರ್ಡೊ ಅವರಿಗೂ ಹೃತ್ಪೂರ್ವಕ ಕೃತಜ್ಞತೆಗಳು .

Also read Nammuru Barkur shows the way by Archibald Furtado

Leave Your Comment