logo

Deepak Shetty and Pradeep Shetty help 30 needy families

-Anand Kumar Barkur

Deepak Shetty Barkur, (Bangalore)  and C.A. Pradeep Shetty, Barkur (Mumbai) joined numerous associations and donors and arranged to distribute 30 kits of essential supplies to the 30  needy middle class families of Hanehalli Panchyath, identified by former Panchayath President Ramanand Shetty. 


The kits were distributed to the beneficiaries at the residence of Ramananda Shetty in the presence of Hanehalli Panchayath PDO Arundhathi Yesumane, Secretary Umesh Kallianpur, Ramanand Shetty, Santhosh Poojari Navagrama, and Panchayth Staff Raghavendra and Anil Kumar. 

ಕೊರೊನಾ ಲಾಕ್ ಡೌನ್ ವಿಸ್ತರಣೆ ಯಿಂದ ಸಮರ್ಪಕವಾದ ಉದ್ಯೋಗವಿಲ್ಲದೆ ಸಂಕಸ್ಟದಲ್ಲಿರುವ  ಹನೆಹಳ್ಳಿ ಪಂಚಾಯತ್ ವ್ಯಾಪ್ತಿಯ ಸುಮಾರು 30 ಆಯ್ದ ಬಡ ಕುಟುಂಬಗಳಿಗೆ ಹನೆಹಳ್ಳಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಮಾನಂದ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ಸದಸ್ಯರಾದ ಪ್ರಸ್ತುತ  ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ದೀಪಕ್ ಶೆಟ್ಟಿ ಉದ್ದಾಲ್ ಗುಡ್ಡೆ ಬಾರಕೂರು, ಹಾಗೂ ಸಿ. ಎ. ಪ್ರದೀಪ್ ಶೆಟ್ಟಿ (ಮುಂಬೈ) ಬಾರಕೂರು ಇವರು ಜಂಟಿಯಾಗಿ ನೀಡಿದ 30 ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಆಯ್ದ 30 ಕುಟುಂಬಗಳಿಗೆ ಶ್ರೀಯುತ ರಮಾನಂದ್ ಶೆಟ್ಟಿಯವರ ನಿವಾಸದಲ್ಲಿ ವಿತರಿಸಲಾಯಿತು.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡ ಈ ಸರಳ ಸಮಾರಂಭದಲ್ಲಿ ಹನೆಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಆರುಂಧತಿ ಏಸುಮನೆ, ಕಾರ್ಯದರ್ಶಿ ಶ್ರೀ ಉಮೇಶ್ ಕಲ್ಯಾಣ್ ಪುರ್, ಶ್ರೀಯುತ ರಮಾನಂದ್ ಶೆಟ್ಟಿ, ಸಂತೋಷ್ ಪೂಜಾರಿ ನವಗ್ರಾಮ, ಪಂಚಾಯತ್ ಸಿಬ್ಬಂದಿ ಗಳಾದ ರಾಘವೇಂದ್ರ, ಅನಿಲ್ ಕುಮಾರ್ ಉಪಸ್ಥಿತರಿದ್ದರು..

ಮಾನವೀಯ ನೆಲೆಯಲ್ಲಿ ಸಕಾಲಿಕ ನೆರವು ನೀಡಿದ ಶ್ರೀ ದೀಪಕ್ ಶೆಟ್ಟಿ, ಸಿ.ಎ. ಪ್ರದೀಪ್ ಶೆಟ್ಟಿ ಹಾಗೂ ಅದನ್ನು ಸಮರ್ಪಕವಾಗಿ ವಿತರಿಸಿದ ರಮಾನಂದ್ ಶೆಟ್ಟಿ, ಹಾಗೂ ಹನೆಹಳ್ಳಿ ಪಂಚಾಯತ್ ಆಡಳಿತ ವರ್ಗಕ್ಕೆ ಧನ್ಯವಾದಗಳು.

Add comment