logo

Results of Short Poems contest on the occasion of Vishwa Kundapra Kannada Day

-Anand Kumar Barkur: 

ಜುಲೈ 20 ಸೋಮವಾರ ಆಟಿ ಅಮಾವಾಸ್ಯೆ ಯಂದು ಜರುಗುವ ವಿಶ್ವ ಕುಂದಾಪ್ರ ಕನ್ನಡ ದಿನದ ಪ್ರಯುಕ್ತ ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ವತಿಯಿಂದ ಗ್ರೂಪಿನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕುಂದಾಪ್ರ ಕನ್ನಡ *ಹನಿಗವನ* ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರಕಿದ್ದು ಹಲವಾರು ಮಂದಿ ಸದಸ್ಯರು ತಾವೇ ರಚಿಸಿದ ಹನಿಗವನಗಳನ್ನು ಕಳುಹಿಸಿರುತ್ತಾರೆ..ಅವುಗಳಲ್ಲಿ ಆಯ್ದ ಮೂರು ಉತ್ತಮ ಹನಿಗವನಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನಗಳನ್ನು ನೀಡಲಾಗಿದೆ.

ಪ್ರಥಮ ಬಹುಮಾನ ಶ್ರೀಮತಿ ವಾಣಿ ಶೆಟ್ಟಿ, ದ್ವಿತೀಯ ಬಹುಮಾನ ಶ್ರೀ ರಾಘವೇಂದ್ರ ಶೆಟ್ಟಿ ಬೈಲುಮನೆ ಹಾಗೂ ತೃತೀಯ ಬಹುಮಾನ ವನ್ನು ಶ್ರೀಮತಿ ತುಳಸೀ ಭಟ್(ಸಿಂಧು ಭಾರ್ಗವ್) ಅವರು ಪಡೆದಿರುತ್ತಾರೆ.

ಬಹುಮಾನದ ಪ್ರಾಯೋಜಕರು: ಸ್ವದೇಶಿ ಆಯುರ್ವೇದ ಬಾರಕೂರು(ಪ್ರೊ: ಶ್ರೀ ಗಣೇಶ್ ಶೆಟ್ಟಿ.ಬಿ.)

ವಿಜೇತರಿಗೆ ಅಭಿನಂದನೆಗಳು ಹಾಗೂ ಹನಿಗವನಗಳನ್ನು ಕಳುಹಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.

ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆ 2020:

ವಿಶ್ವ ಕುಂದಾಪ್ರ ಕನ್ನಡ ದಿನ, ಆಸಾಡಿ ಅಮಾಸಿ ಜುಲೈ 20 ಸೋಮವಾರ.

ಪ್ರಥಮ: ವಾಣಿ ಶೆಟ್ಟಿ

1.ನಿನ್ ನೆನ್ಪೇ ಆಪ್ಕ್ ಆಗ ಅಂದಳಿ ದೇವ್ರ್ ಹತ್ರ ಬೇಡ್ಕಂತಾ‌ ಇದ್ದಿದಿ.

ಪಟ್ಟ ನಿನ್ ನೆನಪ್ ಆಯ್ತ್ ಕಾಣ್,

ಎಂಥ ಬೇಡ್ಕಂತಿದ್ದಿ ಅಂದಳಿಯೇ‌ ನೆನ್ಪ್ ಹೋಯ್ತ್!


2. ಅಜ್ಜರ್ ಕಾಡ್ ಆಸ್ಪತ್ರಿಯಂಗ್ ಹೆಣ ಕೊಯ್ಯು ರಂಗಣ್ಣಾ

ನನ್ ಎದಿ ಕೊಯ್ಯುವತಿಗ್ ಚೂರ್ ನಿಧಾನ

ಒಳಗೆ

ನಮ್ ಗಂಡಿದ್ ಮಸ್ತ್ ಹಂಬ್ಲಿತ್!


3.ಎಲ್ಲೋ ಸೊರದ್ ಜಿರಾಪತಿ ಮಳಿಗ್ ಇಲ್ ನಮ್ ಬದಿ ಹೊಳಿ ಕೆಂಪಾತ್ತಲಾ

ಹಾಂಗೇ

ಎಲ್ಲೋ ಇಪ್ ನಿನ್ ನೆನಪಾಯ್ ನನ್ ಕಣ್ಣೂ ಇಲ್ ಕೆಂಪಾಯ್ತ್ ಬಲ್ಯಾ!


4. ಆವತ್ತೊಂದಿನ ಕಡ್ಲ್ ಬದಿ ತಿರ್ಗುವತಿಗ್ ಅಲಿಗಳನ್ ಕೇಂಡಿ

ಅವ ಎಂಥಕ್ ನಂಗ್ ಸಿಕ್ಲ ಅಂದಳಿ

ಅವ್ ಮಾತಾಡ್ದಿದ್ದನ್ ಕಂಡ್ ಸುಮ್ನೆ ಬಂದಿ

ಆರೆ ಅವ್ ಇವತ್ತಿಗೂ ಭೋರ್ಗುಡ್ತಿದ್ದೋ ಅಲ್!

-ವಾಣಿ ಶೆಟ್ಟಿ


ದ್ವಿತೀಯ: ಬೈಲ್ಮನಿ ಗಂಡ್ (ರಾಘವೇಂದ್ರ ಶೆಟ್ಟಿ ಬೈಲುಮನೆ )


ಕೋಳಿಮರಿ ಕಣ್ಣ್" ಕಂಡಂಗಿದ್ದ್ ಅವ್ಳ್ ಕಣ್ಣ್

"ಮಳ್ಲೆಡಿ"ಕಂಡಂಗಿದ್ದ್ ಕಣ್ಣ್ ರೆಪ್ಪಿ 

"ಹಲ್ಸಿನಣ್ಣ್ ಸೊಳಿ" ಕಂಡಂಗಿದ್ದ್ ಮೂಗಿನ್ ಸೊಳಿ 

"ಮುರಿನಣ್ಣ್ "ಹಾಕಿ ತೇಪದ್ದ್ ತುಟಿ

"ಸ್ಟೀಲ್ ಚಮ್ಚದ್" ಕಂಡಂಗೆ ಪಳ- ಪಳ ಹೊಳು ಅವ್ಳ್ ಹಲ್ಲ್

ಕಲ್ಸಿ ಇಟ್ಟ್ ಚಪ್ಪತಿ ಹಿಟ್ಟ್ ಕಂಡಂಗಿದ್ದ್ ಅವ್ಳ್ ಕೆನ್ನಿ    

ಅವ್ಳೇ ನನ್ನ್ ಒಣ್ಕಟಿ ಹೆಣ್ಣ್

ನೀವ್ಯಾರೂ ಹಾಕ್ಬೆಡಿ ಕಣ್ಣ್ 

-ಬೈಲ್ಮನಿ ಗಂಡ್ 


ತೃತೀಯ: ಶ್ರೀಮತಿ ತುಳಸೀ ಭಟ್ (ಸಿಂಧು ಭಾರ್ಗವ್)

ಶೀರ್ಷಿಕೆ: ಕುಪ್ಳ


ಅವ ಹಶಿ ಹಶಿ ಕಳ್ಳ

ಬೆಳ್ಗಿನ್ ಜಾಮಕೇ ಮನಿ ಕಣ್ಣಕ್ 

ಬಪ್ಪು ಕೆಂಪ್ ಕಣ್ಣಿನ್ ಕುಪ್ಳ

ನನ್ನೇ ಕದ್ ಕದ್ ಕಾಂಬುದ್

ಹಲ್ ಕಿಸ್ಕಂಡ್ ನಗಾಡುದ್

ಮನ್ಸೊಳಗ್ ಏಗಳ್ ಬಂದ ಅಂದೇ ಗೊತ್ತಾಯ್ಲ

ಪಿರಾಣವೇ ಬೆಚ್ಕಂಡಿದಾ!!

ಇನ್, ದೂರ ಮಾಡುಕ್ ಆತಿಲ್ಲ!!

-ಸಿಂಧು ಭಾರ್ಗವ್, ಬೆಂಗಳೂರು,(ಬಾರಕೂರು) 



Add comment