logo

Special prayers at Kulamhasthree Temple, Bennekudru

-Anand Kumar Barkur 

ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರ್ಕೂರು, ಮೊಗವೀರ ಸಂಯುಕ್ತ ಸಭಾ, ಮೊಗವೀರ ಗ್ರಾಮ ಸಭಾ, ಮೊಗವೀರ ಮಹಿಳಾ ಸಂಘ, ಮೊಗವೀರ ಯುವಕ ಸಂಘ ಬೆಣ್ಣೆಕುದ್ರು-ಬಾರ್ಕೂರು ಇವರ ಸಹ ಭಾಗಿತ್ವದಲ್ಲಿ ಸಮಸ್ತ ಮೊಗವೀರ ಸಮಾಜ ಬಾಂಧವರ ಪರವಾಗಿ ಶ್ರೀಕುಲಮಹಾಸ್ತ್ರೀ ಅಮ್ಮನವರು ನೆಲೆಸಿರುವ ಬೆಣ್ಣೆಕುದ್ರು ಸೀತಾ ನದಿಯ ತಟದಲ್ಲಿ ಮತ್ಸ್ಯೋಭಿವ್ರದ್ಧಿ ಹಾಗೂ ಪ್ರಕೃತಿ ವಿಕೋಪ ನಿವಾರಣೆಗಾಗಿ ಪ್ರಾರ್ಥಿಸಿ ಕ್ಷೀರಾಭಿಶೇಕ ಮಾಡಿ, ಸಮುದ್ರ ಪೂಜೆ  ಸಲ್ಲಿಸಿ ಭಾಗೀನ  ಸಮರ್ಪಿಸಲಾಯಿತು.

ಶ್ರೀಕ್ಷೇತ್ರದ ಅರ್ಚಕರಾದ ಶ್ರೀ ಶಿವಾನಂದ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ  ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಶ್ರೀ ಭಾಸ್ಕರ್ ಕೋಟ್ಯಾನ್ ಬೆಣ್ಣೆಕುದ್ರು, ಬೆಣ್ಣೆಕುದ್ರು -ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಎಸ್.ಅಮೀನ್, ಸದಸ್ಯರಾದ ಶ್ರೀ ಕೃಷ್ಣ  ಮೈಂದನ್, ಶ್ರೀ ಉಮೇಶ್ ಅಮೀನ್, ಶ್ರೀ ಭಾಸ್ಕರ್ ಶ್ರೀಯಾನ್, ಬೆಣ್ಣೆಕುದ್ರು -ಬಾರ್ಕೂರು ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ರಾದ ಶ್ರೀ ಶೇಖರ್ ಬಿ., ಬೆಣ್ಣೆಕುದ್ರು-ಬಾರ್ಕೂರು ಮೊಗವೀರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಂತಿ, ಬೆಣ್ಣೆಕುದ್ರು-ಬಾರ್ಕೂರು ಮೊಗವೀರ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಹರ್ಷ ಅಮೀನ್,  ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Add comment