logo

Aaron Pais Barkur bags Best Child Artist Award for Ramana Savari

Aaron Pais Barkur bags Best Child Artist Award for Ramana Savari

Aaron Pais, 5 year old Son of Sapna and Stroiney Pais, Barkur bagged the prestigious Best Child Actor award from the Government of Karnataka. His debut movie, Ramana Savari adjudged as the Second Best Movie.

Aaron Pais,  made his debut into Kannada Filmdom with the movie "Ramana Savari". Produced by Sudha Creations, this movie is directed by K. Shivarudraiah.

K Shivarudraiah is an award winning Indian film Director, who has worked predominantly in Kannada movie industry, started his career with the movie Maleya Makkalu. Shivarudraiah's previous film to hit the theatres was Daatu in the year 2009. Latest movie which K. Shivarudraiah has directed is Maarikondavaru. He won many accolades awards including Baba Saheb Ambedkar Prashasthi and Karnataka Rajyothsava Prashasthi. 

The film Ramana Savari is based on the story by K Sadashiva and has screenplay and dialogues by acclaimed director Girish Kasaravalli. 

Today CM Shri Yadiyurappa announced the awards for the Kannada Films for the year 2018, in a program organised by the News and Public Relations Department. The selection committee presided over by Film Director B.M. Giriraj , had Journalist  Basavaraj and A.R.Prakash, Joint Director of the News and Public Relations Department as it's members.

Sudha Creations, as the Producer of  Second Best Film Ramana Savari will receive cash award of Rs.75000 and a 100 gram Silver medal. Director K.Shivarudrayya will also receive the same.

Aaron as the Best Child Actor will receive Rs.20000 and a 100 gram Silver medal.


2018 ನೇ ಸಾಲಿನ ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ


ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಆರೇನ್ ಪಾಯ್ಸ್ ಬಾರಕೂರು ಅವರಿಗೆ ಅಭಿನಂದನೆಗಳು.

ಬಾರಕೂರು  ಸ್ಟ್ಯಾನಿ  ಪಾಯ್ಸ್  ಅವರ ಮೊಮ್ಮಗ  ಹಾಗೂ ಸ್ಟ್ರಾಯ್ನಿ ಪಾಯ್ಸ್  ಹಾಗೂ ಸ್ವಪ್ನಾ ಪಾಯ್ಸ್ ಅವರ ಪುತ್ರ ಆರೇನ್ ಪಾಯ್ಸ್ ರಾಮನ ಸವಾರಿ ಚಿತ್ರದ ನಟನೆಗಾಗಿ 2018ನೇ ಸಾಲಿನ  ಶ್ರೇಷ್ಟ ಬಾಲ ನಟ ಪ್ರಶಸ್ತಿ ಗೆ ಭಾಜನರಾಗಿದ್ದಾರೆ ಜೊತೆಗೆ ಈ  ಚಿತ್ರ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡಾ ಪಡೆದುಕೊಂಡಿದೆ...

ರಾಮನ ಸವಾರಿ 

ಒಂದು ಸುಂದರವಾದ ಕಥೆಯನ್ನು ಸಿನಿಮಾ ಮಾಡಿ ಜನಗಳ ಬಳಿಗೆ

ನೀಡ್ತಾ ಇದ್ದಾರೆ ನಿರ್ಮಾಪಕರಾದ ಸ್ಟ್ರಾಯ್ನಿ  ಜೋಸೆಫ್ ಪಾಯಿಸ್ ಮತ್ತು ನಿರ್ದೇಶಕರಾದ ಕೆ.ಶಿವರುದ್ರಯ್ಯ. ಕೆ.ಶಿವರುದ್ರಯ್ಯ ಹಾಗೂ ಗಿರೀಶ್ ಕಾಸರವಳ್ಳಿಆಧಾರಿತ ಚಿತ್ರಕಥೆ ಇದಾಗಿದೆ.

ಸಂಭಾಷಣೆ ಗಿರೀಶ್ ಕಾಸರವಳ್ಳಿ

ಕಥೆ ಕೆ.ಸದಾಶಿವ

ಕಥೆ ಈ ರೀತಿ

ಅದು ಮಲೆನಾಡ ನಡುವಿನ ಹಳ್ಳಿ .ಅದರ ಹಸಿರು ಹಿನ್ನೆಲೆಯಲ್ಲಿ ಬಿಚ್ಚಿ ಹಾಸಿದ ಬೆಳಕಿನ ಹಾಳೆಯಂತೆ ತಿಳಿ ಹಳ್ಳವೊಂದು ತೆವಳುತಿತ್ತು ಮಗ್ಗುಲಲ್ಲೇ ಒಂದು ಬೆಟ್ಟ ಉದ್ದ ಚಡ್ಡಿ ದೊಗಲೆ ಅಂಗಿ ತೊಟ್ಟ ಪುಟ್ಟ ಹುಡುಗ ರಾಮ ಪ್ರಕೃತಿಯೊಡನೆ ಚಿನ್ನಾಟವಾಡುತ್ತ ನಡುನಡುವೆ ತನ್ನ ಜೇಬಿನಿಂದ ಮೌತ್ ಆರ್ಗನ್ ತೆಗೆದು ನುಡಿಸುತ್ತಾ ಆ ಬೆಟ್ಟದ ಬದಿಯ ಬಂಡೆಯೊಂದರ ಮೇಲೆ ಕುಳಿತು ಆಟವಾಡುತ್ತಿದ್ದಾಗಲೇ ಆತನಿಗಿಂತ ಮೂರ್ನಾಲ್ಕು ವರ್ಷ ಹಿರಿಯನಾದ ಆತನ ಗೆಳೆಯ ಅಪ್ಪು ( ಆಯುಷ್ ಜೆ.ಶೆಟ್ಟಿ) ಅವನನ್ನು ಹುಡುಕಿಕೊಂಡು ಅಲ್ಲಿಗೆ ಬರುತ್ತಾನೆ ಅಪ್ಪುವಿನ ಕೈಲೊಂದು ದುರ್ಬೀನು ಇಬ್ಬರೂ ಪರಸ್ಪರ ಕಿತ್ತಾಡುತ್ತಾ ಕಿರಿಚಾಡುತ್ತಾ ಬಚ್ಚಿಟ್ಟು ಮುಚ್ಚಿಟ್ಟು ಕೊಳ್ಳುತ್ತಾ ಕಾಡು ಕಣಿವೆಗಳಲ್ಲಿ ಮೈಮರೆತು ಕುಣಿದಾಡುತ್ತಾರೆ.

ಅಷ್ಟರಲ್ಲಿ ದೂರದ ಊರ ದಾರಿಯಲ್ಲಿ ಪುಗ್ಗಿ ಮಾರುವವ ಬಣ್ಣಬಣ್ಣದ ಗುಳ್ಳೆ ಪೀಪಿ ಹೊತ್ತು ತರುತ್ತಿರುವುದು ಕಾಣಿಸಿ ಅತ್ತ ಓಡುತ್ತಾರೆ ರಾಮ ಗುಳ್ಳೇ ಪೀಪಿ ಕೊಳ್ಳುತ್ತಾನೆ. ನಡುವೆ ಅಪ್ಪು ರಾಮನಿಗೆ ಗುಳ್ಳೆಪೀಪಿಗೆ ಕಪ್ಪು ದಾರ ಕಟ್ಟಿ ಜಾದು ಮಾಡುವ ವಿಸ್ಮಯ ತೋರಿಸುತ್ತಾನೆ.ರಾಮ ಮನೆಗೆ ಬಂದವನೇ ತನ್ನಜ್ಜಿಗೆ ಅಪ್ಪು ತನಗೆ ಮಾಡಿ ತೋರಿಸಿದ ಜಾದೂ ತೋರಿಸುತ್ತಿದ್ದಾಗ ಪಾತ್ರೆ ತೊಳೆದು ತಂದ ಅವನಮ್ಮ ಕಪ್ಪು ದಾರವನ್ನು ಹಾಯುತಾ ದಾರ ತುಂಡಾಗಿ ರಾಮನ ಗುಳ್ಳೆಪೀಪಿ ದೀಪಕ್ಕೆ ತಾಕಿ ಒಡೆದು ಇಡೀ ಮನೆ ರಾಮನ ಅಳುವಿನ ಕೇಂದ್ರವಾಗುತ್ತದೆ.

ರಾಮನನ್ನು ಸಂತೈಸಲು ಅವನಮ್ಮ ಅಜ್ಜನಿಗೆ ರಾಮನನ್ನು ಸಂತೆಗೆ ಕರೆದೊಯ್ದು ಗುಳ್ಳೆಪೀಪಿ ಕೊಡಿಸಲು ಹೇಳಿದಾಗ ಅಜ್ಜ ಪುರುಸೋತ್ತಿಲ್ಲ ವೆಂದು ನಿರಾಕರಿಸುತ್ತಾನೆ.ಈ ನಡುವೆ ಮಾತಿಗೆ ಮಾತು ಬೆಳೆದು ರಾಮನ ಅಜ್ಜ ಕ್ಷುಲ್ಲಕ ಕಾರಣಕ್ಕಾಗಿ ಗಂಡನ ಮನೆ ಬಿಟ್ಟು ಬಂದು ತವರಿನಲ್ಲಿ ಕೂತ ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಾಯಿ-ಮಗಳ ಪರವಾಗಿ ನಿಂತು ವಾದಿಸುತ್ತಾಳೆ. ಜಗಳ ತಾರಕಕ್ಕೇರಿದಾಗ ತನ್ನಿಂದ ಜಗಳವಾಗುತ್ತದೆ ಎಂಬ ಮುಗ್ಧ ಕಲ್ಪನೆಯಲ್ಲಿ ರಾಮ ತನಗೆ ಗುಳ್ಳೆಪೀಪಿ ಬೇಡವೆನ್ನುತ್ತಾನೆ.ಆತನ ಸೂಕ್ಷ್ಮ ನಡತೆಗೆ ಕರುಳು ಚುರುಕ್ಕೆನಿಸಿ ಅಜ್ಜ ರಾಮನನ್ನು ಸಂತೆಗೆ ಕರೆದೊಯ್ಯಲು ಒಪ್ಪುತ್ತಾರೆ.

ರಾಮನಿಗೆ ಅಪ್ಪು ಜೊತೆಯಾಗುತ್ತಾನೆ. ಕಮ್ತಿಯ ಕಾರಿನಲ್ಲಿ ಪೇಟೆಗೆ ಕರೆತಂದ ಅಜ್ಜ ಖರ್ಚಿಗೆ ಕಾಸು ಕೊಟ್ಟು ಮಕ್ಕಳಿಬ್ಬರನ್ನು ಸಂತೆಯ ಬೀದಿಯಲ್ಲಿ  ಬಿಟ್ಟು ತನ್ನ ಕೆಲಸಕ್ಕೆ ತಾನು ತೆರಳಿದಾಗ ಹುಡುಗರಿಬ್ಬರೂ ಪರಮಾನಂದದಲ್ಲಿ ಸಂತೆಯುದ್ದಕ್ಕೂ ನಡೆದಾಡುತ್ತಾರೆ. ನೋಡಿ ಕಂಡದ್ದನ್ನು ಕೊಂಡು ಆಡಿ ಕುಣಿದು ಕುಪ್ಪಳಿಸಿ ಸಂತೋಷದಲ್ಲಿ ಮೈ ಮರೆಯುತ್ತಾರೆ.

ಬಾಲಕರ ಮುಗ್ಧ ಕುತೂಹಲ ಗರಿಗೆದರಿ ಹಾರುತ್ತಿದ್ದ ಸಮಯದಲ್ಲಿ ಒಂದು ಸೂಕ್ಷ್ಮ ಘಟನೆ ನಡೆಯುತ್ತದೆ.ತನ್ನ ಗೆಳೆಯ ತನ್ನ ಗೆಳೆಯ ಚಂದ್ರಪ್ಪ ನೊಂದಿಗೆ ಸಂತೆಗೆ ಬಂದಿದ್ದ ರಾಮನ ಅಪ್ಪ ಶಿವರಾಮ ಆತನನ್ನು ನೋಡುತ್ತಾನೆ ಆತನನ್ನು ಮಾತನಾಡಿಸಲು ಚಡಪಡಿಸುತ್ತಾ ಹಿಂಬಾಲಿಸುತ್ತಾನೆ.

ಆತನ ಚಟುವಟಿಕೆ ತುಂಟತನಗಳನ್ನು ಕಂಡುಕುಶಿ ಗೊಳ್ಳುತ್ತಾನೆ. ಕೊನೆಗೂ ಆತನನ್ನು ಕಾಣುವುದರಲ್ಲಿ ಯಶಸ್ವಿಯಾಗಿ ಆತನಿಗೆ ಗೊಂಬೆ ಕೊಡಿಸುತ್ತಾನೆ.

ರಾಮ ಯಾರೆಂದು ಕೇಳಿದ್ದಕ್ಕೆ ನಿನ್ನಪ್ಪಯ್ಯ ಎನ್ನುತ್ತಾನೆ.ಆ ತರ ರಾಮನ ಅಜ್ಜಯ್ಯ ಅಲ್ಲಿ ಬಂದಿದ್ದರಿಂದ ರಾಮನನ್ನು ಬಿಟ್ಟು ದೂರ ಹೋಗುತ್ತಾನೆ.

ಶಿವರಾಮ ಮನೆಗೆ ಹಿಂದಿರುಗಿದರೂ ಆತನಿಗೆ ರಾಮನದೆ ಕನವರಿಕೆ ಮನೆಯಲ್ಲಿದ್ದ ಆತನ ಅಕ್ಕ ಭಾಗೀರಥಿಗೆ ಆತನ ಚಡಪಡಿಕೆ ಅರ್ಥವಾಗುತ್ತದೆ. ಹೋಗಿ ಪಾರ್ವತಿಯನ್ನು ಕರೆ ತರಲು ಹೇಳುತ್ತಾಳೆ. ತಾನು ಹೋದರೆ ತನ್ನನ್ನು ಅವಮಾನಿಸಿಬಹುದೆಂದು ಶಿವರಾಮ ಹಿಂಜರಿಯುತ್ತಾನೆ. 

ಸಣ್ಣಸಣ್ಣ ಸ್ವಪ್ರತಿಷ್ಠೆ ಗಳಿಂದ ಸಂಸಾರ ಒಡೆದು ಚೂರಾದ ಕುರಿತು ಹೇಳಿದ ಭಾಗೀರಥಿ ಹಿಂದಿನದೆಲ್ಲ ಮರೆತು ಮತ್ತೇ ಒಂದುಗೂಡಿಸುವ ಉದ್ದೇಶದಿಂದ ಪಾರ್ವತಿಯನ್ನು ಕರೆತರಲು ತಾನೆ ಹೊರಡುತ್ತಾನೆ.

ಆದರೆ ಅಲ್ಲಿ ಪಾರ್ವತಿ ಮತ್ತು ಆಕೆಯ ತಾಯಿ ಭಾಗೀರತಿಯ ಮಾತಿಗೆ ಸೊಪ್ಪು ಹಾಕುವುದಿಲ್ಲ ಪಾರ್ವತಿಯ ತಂದೆ ಮಂಜಯ್ಯ ಮಗಳಿಗೆ ಬುದ್ಧಿ ಹೇಳಿದರೂ ಹೆಂಗಸರಿಬ್ಬರ ಆರ್ಭಟದಲ್ಲಿ ಅವರ ಧ್ವನಿ ಮುಳುಗುತ್ತದೆ.ರಾಮ ಇವೆಲ್ಲಕ್ಕೂ ಸಾಕ್ಷಿಯಾಗಿ ಎದುರೇ ಇರುತ್ತಾನೆ.

ತನಗಾಗಿ ಇವೆಲ್ಲ ಆಗುತ್ತಿದೆ ಎಂಬ ಮುಗ್ಧ ಭಾವದಲ್ಲಿ ಆತನ ಸೂಕ್ಷ್ಮ ಮನಸ್ಸು ಮುದುಡುತ್ತದೆ.ಇತ್ತ ಶಿವರಾಮನೂ ನಿರಾಶ ನಾಗುತ್ತಾನೆ. ಮಗನನ್ನು ಬಿಟ್ಟಿರಲಾಗದೆ ಚಡಪಡಿಸುತ್ತಾನೆ.

ಈ ನಡುವೆ ರಾಮ ಮತ್ತಷ್ಟು ಸೂಕ್ಷ್ಮವಾಗುತ್ತಾನೆ.

ಓದಿನಲ್ಲಿ ಚುರುಕಾಗಿದ್ದ ಆತನಿಗೆ ಶಾಲೆ ಬೇಸರವಾಗುತ್ತದೆ ಮನೆಯಲ್ಲಿ ನಿತ್ಯ ನಡೆಯುವ ಜಗಳ ಉದ್ವಿಗ್ನತೆ ಅವನನ್ನು ನಿರಂತರ ಕಾಡುತ್ತದೆ.

ಅಂದು ಸಂತೆಗೆ ಹೊರಟ ಅಪ್ಪುವಿನ ಮನೆಯಾಳಿನ ಜೊತೆ ಶಾಲೆ ತಪ್ಪಿಸಿ ರಾಮ ಮತ್ತು ಅಪ್ಪು ಕೂಡ ಸಂತೆಗೆ ಹೋಗಿಬಿಡುತ್ತಾರೆ. ಅಂದೂ ಚಂದ್ರಪ್ಪ ನೊಂದಿಗೆ ಸಂತೆಗೆ ಬಂದಿದ್ದ ಶಿವರಾಮ  ಮಗನನ್ನು ನೋಡಿ ಪುಳಕಿತನಾಗುತ್ತಾನೆ.

ಹೇಗಾದರೂ ಮಾಡಿ ಆತನನ್ನು ಕರದೊಯ್ಯಲೆಳಸಿ  ಕುದುರೆಯ ಅಮಿಷವೊಡ್ಡಿ ಆತನನ್ನು ಕುದುರೆ ಗಾಡಿಯಲ್ಲಿ ಕೂರಿಸಿಕೊಂಡು ಹೊರಟುಬಿಡುತ್ತಾರೆ.

ಇತ್ತ ವಿಷಯ ತಿಳಿದ ಮಂಜಯ್ಯ ಕಮ್ತಿವರನ್ನೂ ಕರೆದುಕೊಂಡು ಕಾರಿನಲ್ಲಿ ಬಂದು ಕುದುರೆಗಾಡಿ ಅಡ್ಡ ಹಾಕುತ್ತಾರೆ. 

ಅಳಿಯ-ಮಾವ ಪರಸ್ಪರ ಕಿತ್ತಾಡಿ ಕೈಕೈ ಮಿಲಾಯಿಸುವ ಹಂತದಲ್ಲಿ ಕಮ್ತಿಯವರು ನ್ಯಾಯ ಪಂಚಾಯತಿಗೆ ಮುಂದಾಗುತ್ತಾರೆ. ಪಂಚಾಯಿತಿಯಲ್ಲಿ ಕಮ್ತಿಯವರು ಮಗುವೆಂದರೆ ಅದಕ್ಕೊಂದು ಮನಸ್ಸು ಹೃದಯ ಇರುತ್ತದೆ ಅದೊಂದು ನಿರ್ಜೀವ ಗೊಂಬೆಯಲ್ಲ ನಿಮಗೆ ಬೇಕಾದಂತೆ ಅದರೊಂದಿಗೆ ಆಟವಾಡಿ ಅದರ ಮನಸ್ಸು ಹೃದಯ ಮುದುಡಿಸಬೇಡಿ. ಎಂದು ಗದರಿಸಿ ಗಂಡ-ಹೆಂಡಿರನ್ಬು ಒಂದುಗೂಡಿಸುತ್ತಾರೆ. 

ರಾಮ ಅಪ್ಪ-ಅಮ್ಮಂದಿರೊಡನೆ ಅಜ್ಜನ ಹಳ್ಳಿಯನ್ನು ತೊರೆದು ತನ್ನ ಮನೆಗೆ ಹೊರಡುತ್ತಾನೆ.ರಾಮ ಆಗಸದಲ್ಲಿ ಬೆಳ್ಳಕ್ಕಿ ಹಾರುವುದನ್ನು 

ತನಗೆ ತನ್ನ ಗೆಳೆಯ ಅಪ್ಪು ಕೊಟ್ಟ ದುರ್ಬೀನಿನಲ್ಲಿ ನೋಡಿ ಸಂತೋಷ ಪಡುತ್ತಾನೆ.

ತಾರಗಣ

ಮಾಸ್ಟರ್ ಆರೋನ್,ಆಯುಷ್.ಜೆ.ಶೆಟ್ಟಿ, ರಾಜೇಶ್ ನಟರಂಗ, ಸೋನು ಗೌಡ, ಭಾರ್ಗವಿ ನಾರಾಯಣ್, ಸುಧಾ ಬೆಳವಾಡಿ, ಅಹನ ಸ್ತುತಿ, ಕೆ.ಶಿವರುದ್ರಯ್ಯ, ಶ್ರೀಂಗೇರಿ ರಾಮಣ್ಣ, ವಿಜಯ ಕುಮಾರ್, ಗುಂಡುರಾಜ್ ಮುರಳಿ, ಕಾರ್ತಿಕ್ ಥಿಫಾರಿ

ಬೆಳ್ಳಕ್ಕಿ ಬೆಳ್ಳಕ್ಕಿ ಹಾಡಂತು ಸೂಪರ್ ಆಗಿ ವಿಜಯ ಪ್ರಕಾಶ್ ಅವರ ಕಂಠದಲ್ಲಿ ಮೂಡಿಬಂದಿದ್ದು ಇದು ಶಾಲಾ ಕಾಲೇಜುಕಾರ್ಯಕ್ರಮಗಳಿಗೆ ಮಕ್ಕಳಿಗೆ ಹೇಳಿಸಿದಂತ ಹಾಡು. ಜತೆಗೆ ಗಾಯಕರಾಗಿಅನುರಾಧ ಭಟ್,  ಚಿಂತನ್ ಸ್ವರ ನೀಡಿದ್ದಾರೆ.

ಸಂಗೀತ ನಿರ್ದೇಶಕ: ಕೆ.ಕಲ್ಯಾಣ್

ನಮ್ಮ ಮಜಾಭಾರತದ ಕಲಾವಿದಹಾಗೂ ನಮ್ಮೆಲ್ಲರ ಪ್ರೀತಿಯ ಆಯುಷ್ ಜೆ.ಶೆಟ್ಟಿ ತನಗೆ ನೀಡಿದ ಒಂದು ಪಾತ್ರವನ್ನು ಉತ್ತಮವಾಗಿ ಮಾಡಿದ್ದುರಾಮನ ಗೆಳೆಯನಾಗಿ ಅಪ್ಪು ಹೆಸರಲ್ಲಿ ಒಪ್ಪುವಂತ ಪಾತ್ರ ಮಾಡಿದ್ದಾರೆ.

Add comment