logo

ರೀಟಾ ರೋಚ್ ಒಂದು ನೆನಪು

-Alwyn Andrade

*ರೀಟಾ ರೋಚ್ ಒಂದು ನೆನಪು*

ಕೃಷಿಯಲ್ಲಿಯೇ  ತಮ್ಮನ್ನು ತೊಡಗಿಸಿಕೊಂಡು  ಹಲವಾರು ಮಂದಿಗೆ ಕೆಲಸ ನೀಡಿ  ತನ್ನ  ಮನೆ ಕುಟುಂಬವನ್ನು ಚೆನ್ನಾಗಿ ನಡೆಸುವ ಜೊತೆಗೆ ಕಿಸ್ಮಸ್ ಸಂದರ್ಭದ  ಸಾಂಪ್ರದಾಯಿಕ ತಿನಿಸು ಕುಸ್ವಾರ್ ತಯಾರಿಕೆಯಲ್ಲಿ ಅತ್ಯಂತ ಪ್ರಸಿದ್ಧರಾದ ರೀಟಾ ರೋಚ್  ರವರ  ಬದುಕೇ ಒಂದು ಯಶೋಗಾಥೆ....

ನಮ್ಮ ಜಿಲ್ಲೆ ಮಾತ್ರವಲ್ಲದೇ  ಮುಂಬೈ ಬೆಂಗಳೂರು ಮತ್ತು ವಿದೇಶಗಳಲ್ಲೂ ಕೂಡ  ಕ್ರಿಸ್ಮಸ್ ಹಬ್ಬದ ಸಮಯದಲ್ಲಿ  ಇವರು ಮತ್ತು ಇವರ ತಂಡ ಸೇರಿ ಮಾಡುವ  ಕುಸ್ವಾರ್ ಗೆ ವೀಪರೀತ ಬೇಡಿಕೆ. ಅವರು ಮಾಡುವ ಹಪ್ಪಳಗಳ ರುಚಿಯೇ ಅದ್ಬುತ....

ನಾವು ಕಂಡು ಕೇಳರಿಯದ ಹಲವಾರು  ಹೊಸ ರುಚಿಗಳನ್ನು ನಮ್ಮೂರಿಗೆ ಪರಿಚಯಿಸಿದ್ದು ಕೂಡ ಅವರೇ...

ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಹಡು ಗ್ರಾಮದಲ್ಲಿ  ರೋಚ್ ರವರದ್ದು ಅತೀ ದೊಡ್ಡ ಕೃಷಿ ಕುಟುಂಬ...


ಆ ಮನೆಗೆ ಸೊಸೆಯಾಗಿ ಜ್ಯುಲಿಯಸ್  ರೋಚ್ ರವರ ಮಾಡದಿಯಾಗಿ  ಬಂದವರೇ ಈ  ರೀಟಾ ರೋಚ್....

ಈ ದಂಪತಿಗಳ ಕುಟುಂಬದಲ್ಲಿ  ಎಲ್ಲರೂ  ಬೇರೆ ಬೇರೆ ನಗರಗಳಲ್ಲಿ ಉನ್ನತ ಹುದ್ದೆ ಹಾಗೂ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಈ ರೋಚ್ ದಂಪತಿಗಳು ನೆಚ್ಚಿಕೊಂಡದ್ದು ಕೃಷಿಯನ್ನು....

ಸಂಪೂರ್ಣ ಕೃಷಿಯಲ್ಲಿಯೇ  ತಮ್ಮನ್ನು ತೊಡಗಿಸಿಕೊಂಡದ್ದು ಮಾತ್ರವಲ್ಲಾ  ಅದರಲ್ಲೇ ಸಂತ್ರಪ್ತಿ ಕಂಡವರು...

ರೀಟಾ ರೋಚ್ ರವರನ್ನು ಹತ್ತಿರದಿಂದ ಬಲ್ಲವರಿಗೆ  ಹಾಗೂ ಸುತ್ತಮುತ್ತಲಿನವರಿಗೆ ಗೊತ್ತು ಅವರಿಗೆ  ಅಡುಗೆ ಮಾಡುವುದರಲ್ಲಿ ಹೈನುಗಾರಿಕೆಯಲ್ಲಿ ಹಾಗೂ  ಕೃಷಿಯಲ್ಲಿ ವೀಪರೀತ ಆಸಕ್ತಿ...

ಅದಕ್ಕಿಂತ ಮಿಗಿಲಾಗಿ  ತಾನು ಅಡುಗೆ ಮಾಡಿದ್ದನ್ನು ಇತರರಿಗೆ ಬಡಿಸುವ ಹಾಗೂ ತಾನು ಬೆಳೆದ ಹಣ್ಣು ಹಂಪಲುಗಳನ್ನು ಇತರರಿಗೆ ಹಂಚುವುದೆಂದರೇ ಅವರಿಗೆ ಪರಮಾನಂದ...

ಅವರ  ಪಕ್ಕದ ಮನೆಯವನಾಗಿ  ಅವರನ್ನು  ಅತ್ಯಂತ ಹತ್ತಿರದಿಂದ ಬಲ್ಲವರು  ಹಾಗೂ ತಿಂಡಿ ತೀರ್ಥ ಹಾಗೂ ಹಣ್ಣು ಹಂಪಲುಗಳ ರುಚಿಯನ್ನು ಬಲ್ಲವರು ನಾವು...

ಅವರಿಗೆ  ಒಂದು ನಿಮಿಷವೂ ಕೂಡ ಮಾತನಾಡದೇ ಮೌನವಾಗಿ ಇರಲೇ ತಿಳಿದಿರಲಿಲ್ಲ..

ಎದುರಿಗೆ ಯಾರೂ ಇಲ್ಲದಿದ್ದರೆ ತಾನು ಸಾಕಿದ ಪ್ರಾಣಿಗಳೊಂದಿಗಾದರೂ ಅವರಿಗೆ ಮಾತನಾಡುತ್ತಾ ಇರಬೇಕು....

ಅವರಿಗೆ ಬಡವ ಶ್ರೀಮಂತರೇಂಬ ಭೇದ ಭಾವ ತಿಳಿದಿರಲಿಲ್ಲ...

ಎಲ್ಲರಲ್ಲೂ ಆತ್ಮೀಯವಾಗಿ ಮಾತನಾಡುವುದು, ತಾನು ತಯಾರಿಸಿದ್ದು ಬಡಿಸುವುದು ಅವರಿಗೆ ಅಭ್ಯಾಸ...

ಅವರ ಮನೆಯ ಕೆಲಸಕ್ಕೆ ಹೋಗುವವರಿಗೆ ಒಳ್ಳೊಳ್ಳೆ ತಿಂಡಿ ಮಾಡಿ ಅವರೆಲ್ಲರ ಹೊಟ್ಟೆ  ತುಂಬಿಸಿದರೇ ಅವರಿಗೆ ಏನೋ ಆನಂದ...

ಅಕ್ಕ ಪಕ್ಕದ ಮನೆಗಳಲ್ಲಿ  ಶುಭಕಾರ್ಯ ನಡೆದರೇ ರೀಟಾ ರೋಚ ರದ್ದೇ ನೇತೃತ್ವ....

ತಮ್ಮ ಮನೆ ಪಾತ್ರೆ ಪಗಡಿಯಿಂದ ಹಿಡಿದು ಎಲ್ಲ ಕೆಲಸಕ್ಕೆ ಸಹಾಯ ಮಾಡುವುದೆಂದರೆ ಅವರಿಗೆ ತುಂಬಾ ಖುಷಿ...

ಯಾರ ಬಳಿ ಯಾವುದೇ ವಿಚಾರಕ್ಕೆ  ಸಣ್ಣ ಪುಟ್ಟ ಜಗಳಗಳಾದರೇ ಕೇವಲ ಒಂದು ದಿನದ ಒಳಗೆ ತಾವೇ ಮೊದಲಾಗಿ ಮಾತನಾಡಿಸಿ ಎಲ್ಲಾ ಭಿನ್ನಾಭಿಪ್ರಾಯ ಮರೆಸುವ ಅದ್ಬುತ ವ್ಯಕ್ತಿತ್ವ....

ರೀಟಾ ರೋಚ್ ಇನ್ನಿಲ್ಲ ಎನ್ನುವುದು ಸ್ಥಳೀಯರಿಗೆ ಇನ್ನೂ ಕೂಡ ಅರಗಿಸಿಕೊಳ್ಳಲಾಗದ ಸತ್ಯ...

ಸದಾ ಆ ಪರಿಸರದಲ್ಲಿ ಅವರ ಸ್ವರ ಕೇಳುತ್ತಾ ಇದ್ದವರಿಗೆ ಈಗ ಅದೇನೋ ಶೂನ್ಯ...

ದಾರಿಯಲ್ಲಿ ಯಾರೇ ಹೋದರು ಕರೆದು ಮಾತನಾಡಿಸುತ್ತಾ ಇದ್ದ ಅವರ ಮನೆಯ ಮುಂದೆ ಹೋಗಲು ಈಗ ಅದೇನೋ ತಳಮಳ...

ಅವರ ಅಂತಿಮ ದರ್ಶನ ಮಾಡಲಾಗದೆ ಅದೆಷ್ಟೋ ಗ್ರಾಮಸ್ಥರು ಮನೆಯಲ್ಲೇ ಕಣ್ಣೀರಾಗಿದ್ದಾರೆ....

ಅವರ ಅಗಲುವಿಕೆ ಸ್ಥಳೀಯರಿಗೆ ಸಹಿಸಲಾಗದ ನೋವು ನೀಡಿದೆ...

ಎಲ್ಲಾ ಗ್ರಾಮಸ್ಥರ ಪರವಾಗಿ ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಬೇಡುತ್ತಿದ್ದೇವೆ.....

ಅವರ ನೆನಪು ಎಂದಿಗೂ ಎಲ್ಲರ ಮನದಲ್ಲಿ ಹಸಿರಾಗಿರುವುದು ಖಂಡಿತ...

ಅವರ ಕುಟುಂಬ ವರ್ಗಕ್ಕೂ ಈ ಅಗಲುವಿಕೆಯ  ನೋವು ಸಹಿಸುವ  ಶಕ್ತಿ ಆ ಪರಮಾತ್ಮ ನೀಡಲಿ  ಎನ್ನುವ ಪ್ರಾರ್ಥನೆಯೊಂದಿಗೆ...

*-ಆಲ್ವಿನ್ ಅಂದ್ರಾದೆ..*

Add comment