logo

ತವರೂರು ಬಾರ್ಕೂರು ಕವನ, -ರೆವೀನಾ

-ತವರೂರು ಬಾರ್ಕೂರು-


-ರೆವೀನಾ


ಆಹಾ! ಎಷ್ಟು ಸುಂದರ ನನ್ನ ತವರೂರು 

ಆ ಊರಿನ ಹೆಸರು ಬಾರ್ಕೂರು 

ಅದು ಶಿಲ್ಪಕಲೆಗಳ ತವರೂರು 

ದೇವಸ್ಥಾನಗಳು ಇರುವುವು ಮುನ್ನೂರು 

ನಡೆಯುವುದಿಲ್ಲಿ ಹಲವಾರು ಜಾತ್ರೆ 

ಒಮ್ಮೆ ಮಾಡಲು ಬನ್ನಿ ನಮ್ಮೂರ ಯಾತ್ರೆ 

ಜೈನ ಬಸದಿ ಸಿಂಹಾಸನ ಗುಡ್ಡೆ ಕೋಟೆ ಹಾಡಿ 

ಜೀವನದಲ್ಲಿ ಒಂದು ಬಾರಿ ನೋಡೇ ಬಿಡಿ 

ಮೊದಲಲ್ಲಿ ಕಾಣ ಸಿಗುವುದು ಗದ್ದೆ ಹಸಿರು 

ಮನ ಹೇಳುವುದು ಒಂದು ನಿಮಿಷ ಅಲ್ಲೇ ಕೂರು 

ಹರಿಯುತ್ತಿಹಳು ಲವಲವಿಕೆಯಿಂದ ಸೀತಾನದಿ 

ಅವಳೇ ಈ ಊರಿನವರ ಜೀವನದಿ 

ಸೇತುವೆ ಬಳಿ ಸೂರ್ಯಾಸ್ತ ನೋಡಲೆಷ್ಟು ಸೊಬಗು 

ಆ ಸುಂದರ ದೃಶ್ಯ ನೋಡುತ್ತಾ ಆಗುವುದು ಬೆರಗು 

ಊರ ಹೆಸರಿನಂತೆ ಜನರ ಗುಣನಡತೆ 

ಹೋದಲ್ಲೆಲ್ಲಾ ಹಚ್ಚುವರು ಪ್ರಖ್ಯಾತಿಯ ಹಣತೆ 

ಎಲ್ಲರನ್ನೂ ಪ್ರೀತಿಯಿಂದ ಕರೆಯುವರು ಬಾರೋ 

ಉಪಚರಿಸಿ ಹೇಳುವರು ಬಂದು ಕೂರು 

ತವರೂರ ಬಗ್ಗೆ ಎಷ್ಟು ಹೇಳಿದರೂ ಸಾಲದು 

ಆಗಾಗ ಅದನ್ನು ನೋಡದೇ ಮನಸ್ಸು ನಿಲ್ಲದು 

- ರೇವಿನಾ

Add comment