ದಿನಾಂಕ 24-08-2019 ರಂದು ಎಸ್. ಎಮ್. ಎಸ್. ಕಾಲೇಜ್ ಬ್ರಹ್ಮಾವರ ಮತ್ತು ಬಿ.ಡಿ ಶೆಟ್ಟಿ ಕಾಲೇಜ್ ಮಾಬುಕಳ ಇವರ ನೇತೃತ್ವದಲ್ಲಿ HDFC ಬ್ಯಾಂಕ್ ಉಡುಪಿ, ಲಯನ್ಸ್ & ಲಿಯೊ ಕ್ಲಬ್ ಬ್ರಹ್ಮಾವರ - ಬಾರ್ಕೂರು, ಹಿರಿಯ ನಾಗರಿಕರ ವೇದಿಕೆ ಬ್ರಹ್ಮಾವರ ಇವರ ಸಹಯೋಗದೊಂದಿಗೆ "ಗೋ ಗ್ರೀನ್ ಅರಿವು " ಕಾರ್ಯಕ್ರಮ ಸೈಕಲ್ ಜಾಥಾ ಹಾಗೂ ವನಮಹೋತ್ಸವದ ಮೂಲಕ ವಿನೂತನವಾಗಿ ಆಯೋಜಿಸಲಾಯಿತು. ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀಯುತ ಶ್ರೀಕಾಂತ್ ಕೆ. ಪಿ ಇವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಠಾಣೆಯ ಉಪ ನಿರೀಕ್ಷಕರಾದ ಶ್ರೀ ರಾಘವೇಂದ್ರ ಸಿ , HDFC ಬ್ಯಾಂಕ್ ನ ಪ್ರಬಂಧಕರಾದ ಶ್ರೀ ಪ್ರಸನ್ನ ಕುಮಾರ್ ಹಾಗೂ ಉಪ ಪ್ರಬಂಧಕರಾದ ಶ್ರೀ ಸುದೇಶ್, ಖ್ಯಾತ ಪರಿಸರವಾದಿ ವಿನಯಚಂದ್ರ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಯುತ ಆನಂದ ಗಾಣಿಗ ಹಾಗೂ ಕಾರ್ಯದರ್ಶಿಯಾದ ಸಂತೋಷ್ ಶೆಟ್ಟಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ, ಬಿ. ಡಿ. ಶೆಟ್ಟಿ ಕಾಲೇಜಿನ ಸ್ಥಳಿಯ ಸಂಚಾಲಕರು ರೋಟೆರಿಯನ್ ರತ್ನಾಕರ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಶ್ರೀ ಬಾಲಕೃಷ್ಣ ಶೆಟ್ಟಿ, OSCESಯ ಕಾಲೇಜು ವಿಭಾಗದ ಕಾರ್ಯದರ್ಶಿಯಾದ ಮಾರ್ಟನ್ ಡಿಸೋಜ ಹಾಗೂ ಖಜಾಂಚಿಯಾದ ಪಿಯುಸ್ ಅಲ್ಮೇಡಾ, ಎಸ್. ಎಮ್. ಎಸ್. ಕಾಲೇಜಿನ ಪ್ರಾಂಶುಪಾಲರಾದ ಟಿ.ಪಿ.ಬಾಬುರಾಜ್, ನ್ಯಾಕ್ ಸಂಯೋಜನಾಧಿಕಾರಿಯಾದ ಮಹೇಶ್ ಕುಮಾರ್ ಹಾಗೂ ಸಂಘಟಕರಾದ ವೆಂಕಟೇಶ್ ಭಟ್, ಅಶ್ವಿನ್ ಶೆಟ್ಟಿ, ಭರತ್ ರಾಜ್, ಪ್ರಶಾಂತ್ ದೇವಾಡಿಗ, ವಿಘ್ನೇಶ್ ಪಡಿಯಾರ್, ವಾದಿರಾಜ್, ಲಯನ್ಸ್ ಕ್ಲಬ್ ಹಾಗೂ ಹಿರಿಯ ನಾಗರಿಕ ವೇದಿಕೆಯ ಸದಸ್ಯರು, ಎಸ್.ಎಂ.ಎಸ್ ಕಾಲೇಜು ಮತ್ತು ಬಿ.ಡಿ. ಶೆಟ್ಟಿ ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸೈಕಲ್ ಜಾಥವು ಎಸ್.ಎಂ.ಎಸ್ ಕಾಲೇಜಿನಿಂದ ಪ್ರಾರಂಭಗೊಂಡು ಇಂದಿರಾನಗರ, ಹಿರಿಯ ನಾಗರಿಕ ಸಂಘ ಬ್ರಹ್ಮಾವರ ವಠಾರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಧೂಳಂಗಡಿ) ಹಂಗಾರಕಟ್ಟೆ, ಚಿತ್ತಾರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ,ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಠದಬೆಟ್ಟು, ಶ್ರೀಮಠ ಬಾಳೇಕುದ್ರು ಪರಿಸರದಲ್ಲಿ ಎಸ್. ಎಂ. ಎಸ್. ಕಾಲೇಜಿನ ಸುಮಾರು 40ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹಾಗೂ ಬಿ. ಡಿ. ಶೆಟ್ಟಿ ಕಾಲೇಜಿನ ಎನ್. ಎಸ್. ಎಸ್ ಘಟಕದ ಸ್ವಯಂಸೇವಕರು ಸೈಕಲ್ ನಲ್ಲಿ ಕ್ರಮಿಸಿ ಗಿಡ ನೆಡುವ ಮುಖಾಂತರ ಹಸಿರನ್ನು ಬೆಳೆಸಿ ಉಳಿಸುವ ಸಂದೇಶವನ್ನು ಸಾರಲಾಯಿತು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಎನ್.ಸಿ.ಸಿ. ಅಧಿಕಾರಿಯಾದ ಅಶ್ವಿನ್ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.