logo

ಅಪ್ಪ-ಅಮ್ಮ ಅನಾಥಾಲಯ; ಉಚಿತ ಸೇವೆ

ವೃದ್ಧರ ರಕ್ಷಣೆ; ನೆಲೆ ಕಲ್ಪಿಸಿದ ಅಪ್ಪ-ಅಮ್ಮ ಅನಾಥಾಲಯ; ಉಚಿತ ಸೇವೆ

ಬಾರ್ಕೂರು ರಂಗನಕೆರೆ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ದರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಬ್ರಹ್ಮಾವರ ‘ಅಪ್ಪ-ಅಮ್ಮ’ ಅನಾಥಾಲಯದಲ್ಲಿ ಸುರಕ್ಷಿತ ನೆಲೆ ಕಲ್ಪಿಸಿದ್ದಾರೆ. ಆಶ್ರಮ ಸಂಚಾಲಕ ಪ್ರಶಾಂತ ಪೂಜಾರಿ ಕೂರಾಡಿ ಅವರು, ವೃದ್ಧರಿಗೆ ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದ್ದಾರೆ. ಮಾನಸಿಕವಾಗಿ ನೊಂದಿರುವ ಅಚ್ಚುತ ನಾಯ್ಕ(70ವ) ಇವರು ಮಂದಾರ್ತಿಯ ನಿವಾಸಿಯೆಂದು ಹೇಳಿಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಶಶಿ ಶೆಟ್ಟಿ,ಗಣೇಶ್ ಪೂಜಾರಿ,ವಿನಯ ಪೂಜಾರಿ, ಶರತ್ ಪೂಜಾರಿ ಪಾಲ್ಗೊಂಡಿದ್ದರು. 

ಗಿರಿಜಾ ಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ.)ಕೂರಾಡಿ ಇದರ ವತಿಯಿಂದ ಉಚಿತ  ಅಪ್ಪ ಅಮ್ಮ ಅನಾಥಾಲಯ 1-11-2018 ರಂದು ಬ್ರಹ್ಮಾವರದ ಆಕಾಶವಾಣಿಯ ಸಮೀಪ ಪ್ರಾರಂಭವಾಗಿರುತ್ತದೆ. ಇದರ ಉದ್ಘಾಟನಾ ಸಮಾರಂಭವು 1-3-2019 ರಂದು ನಡೆದಿದ್ದು, ಇಂದು ಹಲವಾರು ಅನಾಥರು ಹಾಗೂ ನಿರ್ಗತಿಕರು ಇಲ್ಲಿ ಆಶ್ರಯ ಪಡೆದಿರುತ್ತಾರೆ.

ಈ ಟ್ರಸ್ಟ್  ಪ್ರಶಾಂತ್ ಪೂಜಾರಿ ಕೂರಾಡಿಯವರ ಕನಸಿನ ಕೂಸು. 32ರ ಹರೆಯದ ಪ್ರಶಾಂತ್, ಇಂಜಿನಿಯರಿಂಗ್ ಡಿಪ್ಲೋಮಾ ಪಡೆದು ಕೆಲವು ವರ್ಷಗಳ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ದುಡಿದವರು. ಕಾಲೇಜು ದಿನಗಳಲ್ಲೇ ಬಸ್ ಸ್ಟ್ಯಾಂಡ್ ಹಾಗೂ ಇನ್ನಿತರ ಕಡೆಗಳಲ್ಲಿ ನಿರ್ಗತಿಕರನ್ನ ಕಂಡು ಕರಗುತ್ತಿದ್ದ ಅವರ ಮನಸ್ಸಿಗೆ ಅವರಿಗಾಗಿ ಏನಾದರೂ ಮಾಡುವ ಕನಸಿದ್ದು 1೦ ವರ್ಷ ಗಲ್ಫ್ ರಾಷ್ಟ್ರಗಳಲ್ಲಿ ಕಳೆದ ನಂತರ ಹುಟ್ಟೂರು ಕೂರಾಡಿಯಲ್ಲಿ ಗಿರಿಜಾ ಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ.) ಸ್ಥಾಪಿಸುವ ಮೂಲಕ ಈ ಕನಸಿಗೆ ನಾಂದಿ ಹಾಡಿದ್ದಾರೆ. ಸುಮಾರು15 ಮಂದಿ ಅಸಹಾಯಕ ಮಂದಿ ಈಗಾಗಲೇ ಇಲ್ಲಿ ವಾಸವಾಗಿದ್ದು ಇವರಿಗೆ ಪೌಷ್ಟಿಕ ಆಹಾರ, ವೈದ್ಯಕೀಯ ಸೇವೆ, ದಿನಪತ್ರಿಕೆ ಇತರ ವ್ಯವಸ್ಥೆ ಮಾಡಲಾಗಿದೆ. ವಾರಸುದಾರರ ಪತ್ತೆಯಾದವರನ್ನ ಅವರ ಮನೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಈ ಅಸಹಾಯಕರನ್ನ ತಂದೆ ತಯಿಗಳಂತೆ ನೋಡಿಕೊಳ್ಳುವ ಇವರ ಕಳಕಳಿಯಿಂದ ಇದಕ್ಕೆ ಅಮ್ಮ ಅಪ್ಪ ಅನಾಥಾಲಯ ಎಂದು ಹೆಸರಿಡಲಾಗಿದೆ. 

ಗಿರಿಜಾ ಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ.)ಕೂರಾಡಿ, ಈಗಾಗಲೇ ಅಂಬ್ಯುಲೆನ್ಸ್ ಸೇವೆಯ ವ್ಯವಸ್ಥೆ ಮಾಡಿದ್ದು ಕೂರಾಡಿಯಲ್ಲಿ ಒಂದು ಬಸ್ಸು ತಂಗುದಾಣವನ್ನು ಸಹ ಕಟ್ಟಿಸಿದೆ.

ಈ ಆಶ್ರಮದ ಅಭಿವೃದ್ಧಿಗೆ ನವಂಬರ್ 1, 2018ರಿಂದ 'ಹ್ಯುಮ್ಯಾನಿಟಿ' ಟ್ರಸ್ಟ್ ಸಹಿತ ಹಲವಾರು ದಾನಿಗಳು ತನು, ಮನ, ಧನ ಸಹಾಯ ನೀಡಿ ನೆರವು ನೀಡಿರುತ್ತಾರೆ. ಆಶ್ರಮಕ್ಕೆ ದೇಣಿಗೆ ಅಥವಾ ಧನ ಸಹಾಯ ನೀಡಲು ಇಚ್ಚಿಸುವವರು ನೇರವಾಗಿ ಆಶ್ರಮಕ್ಕೆ ಬೇಟಿ ನೀಡಿ ಅಥವಾ ಸಿಂಡಿಕೆಟ್ ಬ್ಯಾಂಕ್ ನ ಖಾತೆ ಸಂ.02103070000145, IFSC CODE:SYNB0000210 ಸಂಖ್ಯೆಗೆ ಜಮಾ ಮಾಡಬಹುದಾಗಿದೆ. 

ಪ್ರಶಾಂತ್ ಪೂಜಾರಿ ಕೂರಾಡಿ, ಮುಖ್ಯಸ್ಥರು, ಅಪ್ಪ- ಅಮ್ಮ ಅನಾಥಾಶ್ರಮ, ಬ್ರಹ್ಮಾವರ...9164765898,9986111989


Add comment