ಬ್ರಹ್ಮಾವರ ವಲಯದ ಹಿಂದಿ ಶಿಕ್ಷಕರಿಗೆ ಒಂದು ದಿನದ ತರಬೇತಿ ಶಿಬಿರ, ನಿರೀಕ್ಷೆ 2020 ಇದೇ ಆಗಸ್ಟ್ 30ರಂದು ಮೆರಿನೋಲ್ ಪ್ರೌಢ ಶಾಲೆಯಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಓ.ಆರ್. ಪ್ರಕಾಶ್ ವಿದ್ಯಾರ್ಥಿಗಳಿಗೆ ಹಿಂದಿ ಮಾತನಾಡಲು ಕಲಿಸಬೇಕಾದ ಅನಿವಾರ್ಯತೆಯತ್ತ ಗಮನ ಸೆಳೆದು ಶಿಕ್ಷಕರು ತರಗತಿಯಲ್ಲಿ ಹೆಚ್ಚು ಹೆಚ್ಚು ಹಿಂದಿ ಮಾತನಾಡುವುದರೊಂದಿಗೆ ವಿದ್ಯಾರ್ಥಿಗಳು ಹಿಂದಿ ಮಾತನಾಡುವಂತೆ ಪ್ರೇರೇಪಿಸುವಂತೆ ಕಿವಿಮಾತು ನುಡಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರ ವಲಯದಲ್ಲಿ ಎಸ್. ಎಸ್. ಎಲ್.ಸಿ. ಫಲಿತಾಂಶದಲ್ಲಿ ವಿಶೇಷ ಸಾಧನೆ ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗುವಂತೆ ಪ್ರಯತ್ನಿಸಿರಿ ಎಂದು ಪ್ರೇರೇಪಣೆ ನೀಡಿದರು. ಕಾರ್ಯಾಗಾರದ ಸಂಯೋಜಕರಾದ ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿನ ಪ್ರಾಂಶುಪಾಲರಾದ ಶ್ರೀಯುತ ಬಿ.ಟಿ. ನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರೌಢ ಶಾಲೆಗಳಲ್ಲಿ ಹಿಂದಿಯು ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಶ್ರೀಯುತ ದಿನಕರ ಶೆಟ್ಟಿ, ಅಧ್ಯಾಪಕರು, ಶ್ರೀನಿಕೇತನಾ ಪ್ರೌಢ ಶಾಲೆ, ಮಠಪಾಡಿ, ಮಾತನಾಡಿ ಹಿಂದಿಯ ಮಹತ್ವವನ್ನು ತಿಳಿಸಿದರು. ಮೆರಿನೋಲ್ ಪ್ರೌಢ ಶಾಲೆಯ ಸಂಚಾಲಕಿ ಸಿ. ಸಿಲ್ವೇಸ್ಟ್ರೀನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲರಿಗೂ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ದಿನಕರ ಶೆಟ್ಟಿ, ಅಧ್ಯಾಪಕರು, ಶ್ರೀನಿಕೇತನಾ ಪ್ರೌಢಶಾಲೆ, ಮಠಪಾಡಿ, ವೆಂಕಟೇಶ್ ಎಚ್. ಟಿ., ಅಧ್ಯಾಪಕರು, ಟಿ. ಎಂ.ಎ. ಪೈ ಪ್ರೌಢಶಾಲೆ, ಕಲ್ಯಾಣಪುರ, ಮತ್ತು ಅಶೋಕ ಸೋಮಯಾಜಿ, ಅಧ್ಯಾಪಕರು, ಸರಕಾರಿ ಪ್ರೌಢಶಾಲೆ, ಮೂಡುಗಿಳಿಯಾರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಯುತ ರಮಾನಂದ ರಾವ್ ಸ್ವಾಗತಿಸಿದರು. ಹಿಂದಿ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಜಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಾಗಾರದಲ್ಲಿ ಬ್ರಹ್ಮಾವರ ವಲಯದ 48 ಪ್ರೌಢಶಾಲೆಗಳ ಹಿಂದಿ ಅಧ್ಯಾಪಕರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಚಿತ್ರ : ಡೋಲ್ಫಿ ಡಿ'ಸೋಜ, ಬಾರ್ಕುರು.