-Anand Kumar Barkur
Annual Festivities at Shri Brahmalinga Veerabhadra, Shri Durgaparameshwari Temple Barkur
ವಾರ್ಷಿಕೋತ್ಸವ ಸಂಭ್ರಮ ದಲ್ಲಿರುವ ಶ್ರೀ ಬ್ರಹ್ಮ ಲಿಂಗ ವೀರಭದ್ರ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು.
ವಾರ್ಷಿಕ ಕೆಂಡ ಸೇವೆಯ ಪ್ರಯುಕ್ತ ಇಂದು ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಮಟಪಾಡಿ ಇವರಿಂದ ಕುಣಿತದ ಭಜನೆ, ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಲಿಯವರಿಂದ ಕುಣಿತದ ಭಜನೆ ಸೇವೆ ಹಾಗೂ ದೇವಳದ ತಂತ್ರಿಗಳಾದ ವೇದಮೂರ್ತಿ ಎನ್.ರಮೇಶ್ ಭಟ್ ನಾಯರ್ ಬೆಟ್ಟು ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ನವಕ ಪ್ರಧಾನ, ನವಕುಂಭ ಕಲಶ ಸ್ಥಾಪನೆ ಹಾಗೂ ಅಧಿವಾಸ ಹೋಮ, ಕಲಶಾಭಿಷೇಕ, ಮಹಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಶ್ರೀ ಚಕ್ರ ಆರಾಧನೆ, ಪ್ರಸನ್ನ ಪೂಜೆ, ದೀಪ ನಮಸ್ಕಾರ ಪೂಜೆ ನೆರವೇರಿತು.
ಶ್ರೀ ಬಿ.ಶ್ರೀನಿವಾಸ್ ಶೆಟ್ಟಿಗಾರ್ (ಅಧ್ಯಕ್ಷರು, ಶ್ರೀ ವೀರೇಶ್ವರ ಸೇವಾ ಮತ್ತು ಅಭಿವೃದ್ಧಿ ಸಮಿತಿ), ಶ್ರೀ ಸಿ.ಪುರುಷೋತ್ತಮ (ಆಡಳಿತ ಮೊಕ್ತೇಸರರು) ಸಹ ಮೊಕ್ತೇಸರರು, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಬಳಗ, ಮಾಗಣೆಯ ಮುಖ್ಯಸ್ಥರು ಮಾತು ಊರಿನ ಹತ್ತು ಸಮಸ್ತರು, ಭಕ್ತಾಧಿಗಳು ಉಪಸ್ಥಿತರಿದ್ದರು.