logo

Annual Festivities at Shri Someshwara Temple, Moodukeri, Barkur

Pics n Videos Anand Kumar Barkurಮಹತೋಭಾರ ಶ್ರೀ ಸೋಮೇಶ್ವರ ದೇವಸ್ಥಾನ ಮೂಡುಕೇರಿ ಬಾರ್ಕೂರು

ಶ್ರೀ ಕ್ಷೇತ್ರದಲ್ಲಿ ಇಂದು ವಾಡಿಕೆಯಂತೆ ಗಣಹೋಮ, ಪಂಚಾಮೃತ ಪೂರ್ವಕ ಶತರುದ್ರಾಭಿಷೇಕ, ನವಕಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಮಹಾರಂಗಪೂಜೆ, ಕೆರೆ ಉತ್ಸವ, ರಥೋತ್ಸವ, ಸಿಡಿಮದ್ದು, ಪ್ರದರ್ಶನ, ದೀಪೋತ್ಸವ ಸೇವೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಿರ್ವಿಘ್ನವಾಗಿ ನೆರವೇರಿತು.

ಶ್ರೀ ಸೋಮೇಶ್ವರ ಮಹಿಳಾ ವೇದಿಕೆ ಹಾಗೂ ಶ್ರೀ ಸೋಮೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸೇವೆ ಜರುಗಿತು.

ಸಾಂಸ್ಕ್ರತಿಕ ಕಾರ್ಯಕ್ರಮದ  ಅಂಗವಾಗಿ ರಾಜೇಶ್ ಶಾನ್ ಭಾಗ್ ಬಾರಕೂರು ಮತ್ತು ಸಹನಾ ನಾಯಕ್ ಕೊಕ್ಕರ್ಣೇ ಅವರೊಂದಿಗೆ ಆರೋಹಣ ಸಂಗೀತ ಸಂಸ್ಥೆ ಬಾರಕೂರಿನ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ಕಾರ್ಯ ಕ್ರಮ ಜರುಗಿತು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಸೀತಾ ರಾಮ ಶೆಟ್ಟಿ ಹಾಗೂ ಅಡಳಿತ ಮೊಕ್ತೇಸರರಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಅವರು ರಾಜೇಶ್ ಶಾನ್ ಬಾಗ್ ಹಾಗೂ ಸಹನಾ ನಾಯಕ್ ಕೊಕ್ಕರ್ಣೇ ಅವರನ್ನು ಅಭಿನಂದಿಸಿ ಗೌರವಿಸಿದರು.

ಮೇಲಿನ ಎಲ್ಲಾ ದೇವತಾ ಕಾರ್ಯಗಳಲ್ಲಿ ಭಕ್ತಾದಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Add comment