logo

ಅಭಿವೃದ್ಧಿ ಪಥದಲ್ಲಿ ಬೆಣ್ಣೆಕುದ್ರು - ಹಂದಾಡಿ - ಪಾಂಡೇಶ್ವರ ಪರಿಸರ

-News n Pics : Alwyn Andrade

ಅಭಿವೃದ್ಧಿ ಪಥದಲ್ಲಿ ಬೆಣ್ಣೆಕುದ್ರು - ಹಂದಾಡಿ - ಪಾಂಡೇಶ್ವರ ಪರಿಸರ

ಕುಡಿಯುವ ನೀರು, ಉತ್ತಮ ರಸ್ತೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಮೂಡಹಡು ಬೆಣ್ಣೆಕುದ್ರು  ಪರಿಸರದ ಮೇಲೆ ಇದೀಗ ಕುಲಮಹಾಸ್ತ್ರೀ ಅಮ್ಮನವರ ಕೃಪೆ ಬಿದ್ದಂತ್ತಿದೆ.

ಏಕಾಏಕಿ ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಯಂತ್ರಗಳ ಹಾಗೂ ವಾಹನಗಳು ಓಡಾಡುತ್ತಿದ್ದು ಒಂದೆರೆಡು ವರ್ಷಗಳಲ್ಲಿ ಈ ಪ್ರದೇಶ ಸಂಪೂರ್ಣ ಅಭಿವೃದ್ಧಿಯತ್ತ ಸಾಗುವುದು ಕಣ್ಣಿಗೆ ಗೋಚರಿಸುತ್ತಿದೆ.

ಈಗಾಗಲೇ ಬೆಣ್ಣೆಕುದ್ರು ಬಾರ್ಕುರು ನಡುವೆ ಸಂಪರ್ಕಕ್ಕೆ ಇದ್ದ ಕಿರುಸೇತುವೆ ಬಳಿ ನೂತನವಾಗಿ  ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಅಗಲ ಕಿರಿದಾಗಿದ್ದ ಹಿಂದಿನ ಸೇತುವೆ ಸಂಚಾರಕ್ಕೂ ಹಾಗೂ ದೊಡ್ಡ ವಾಹನಗಳ ಸಾಗಾಟಕ್ಕೆ ಬಹಳಷ್ಟು ಕಿರಿ ಕಿರಿ ಅನಿಸುತಿತ್ತು.

ಅದರಲ್ಲೂ ಬಾರ್ಕುರಿಗೂ ಸಾಸ್ತಾನಕ್ಕೂ ನೇರ ಸಂಪರ್ಕ ರಸ್ತೆಯಾದ ಮೇಲೆ ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದ್ದು ಅದೀಗ ಸಾಕಾರಗೊಳ್ಳುವ ಮಹೂರ್ಥ ಕೂಡಿ ಬಂದಿದೆ.

ಮುಂದಿನ ಎರಡು ವರ್ಷಗಳಲ್ಲಿ ಬೆಣ್ಣೆಕುದ್ರು - ಪಾಂಡೇಶ್ವರ ಪರಿಸರದಲ್ಲಿ ಬಹಳಷ್ಟು ಅಭಿವೃದ್ಧಿಯಾಗುವ  ಸೂಚನೆಗಳಿದ್ದು ಅದರಲ್ಲಿ ಬಹುಮುಖ್ಯವಾಗಿ  ಪಾಂಡೇಶ್ವರ - ಬೆಣ್ಣೆಕುದ್ರು ಹಂದಾಡಿ ನಡುವ ಅತ್ಯಂತ ಸುವ್ಯವಸ್ಥಿತ ಡ್ಯಾಮ್ (ಉಪ್ಪು ನೀರಿನ ತಡೆ ಆಣೆಕಟ್ಟು ) ಹಾಗೂ ಪರಿಸರದಲ್ಲಿ ಸುಮಾರು 35 ಕಿಮೀ ಉದ್ದದ ತಡೆಗೋಡೆ, ಇಡೀ ಬೆಣ್ಣೆಕುದ್ರು ಗ್ರಾಮಕ್ಕೆ ರಿಂಗ್ ರೋಡ್, ಮೂಡಹಡು ಗ್ರಾಮದಿಂದ ಹಂದಾಡಿಗೆ ನೇರ ಸಂಪರ್ಕ ರಸ್ತೆ  ಮುಂತಾದ ಪ್ರಗತಿ ಕಾರ್ಯಗಳು ಈಗಾಗಲೇ ಅನುಮೋದನೆಗೊಂಡು ಪರಿಸರದಲ್ಲಿ ಅತ್ಯಂತ ವೇಗವಾಗಿ ಕಾಮಗಾರಿಗಳು ಪ್ರಾರಂಭಗೊಂಡಿವೆ.

ಸ್ಥಳೀಯ ಪರಿಸರದ ಜನರ ನೀರಿನ ಹಾಗೂ ಸಾಗಟದ ತೊಂದರೆಗಳು ಇದರಿಂದ ಮುಕ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ.

ಅದರಲ್ಲೂ ಪುಣ್ಯ ಕ್ಷೇತ್ರವಾಗಿ  ಹೆಸರುಗಳಿಸುರುವ ಬೆಣ್ಣೆಕುದ್ರು ದೇವಸ್ಥಾನ ಇನ್ನಷ್ಟು ಅಭಿವೃದ್ಧಿ ಹೊಂದಿ ಆಗಮಿಸುವ ಭಕ್ತರಿಗೂ ವಿಶೇಷ ಅನುಕೂಲಗಳು ತನ್ಮೂಲಕ ದೊರೆಯಲಿದೆ.

ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಈ ಪರಿಸರ ಮುಂದೊಮ್ಮೆ ಅತ್ಯಂತ ವಿಶಿಷ್ಟ ಪ್ರವಾಸೋದ್ಯಮ ತಾಣ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.....

Add comment