News n Pics Alwyn Andrade, Barkur
ಸಿಂಗಿಂಗ್ ಸ್ಟಾರ್ 2019
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಂಡೇಶ್ವರ ಸಾಸ್ತಾನ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಸಿಂಗಿಂಗ್ ಸ್ಟಾರ್ 2019 ಸಂಗೀತ ರಿಯಾಲಿಟಿ ಸ್ಪರ್ಧೆಯ ಫೈನಲ್ ನಿನ್ನೆ ನಡೆಯಿತು.
ಪ್ರಥಮ ಬಹುಮಾನ ಗ್ರೀಷ್ಮಾ ಕಟೀಲ್ ಪಡೆದರು. ದ್ವಿತೀಯ ಬಹುಮಾನ ಭವ್ಯಶ್ರೀ ಬಾರಕೂರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇಕ್ಷಕರೇ ಆಯ್ಕೆ ಮಾಡಿದ ಜನಮೆಚ್ಚಿದ ಗಾಯಕಿ ಪ್ರಶಸ್ತಿಯನ್ನು ಅನ್ವಿತಾ ಜಿ. ಮೂರ್ತಿ ಉಡುಪಿ.ಇವರು ಪಡೆದರು.
ಈ ಸ್ಪರ್ಧೆಯಲ್ಲಿ ಆಗಮಿಸಿದ ಪ್ರೇಕ್ಷಕರಿಗಾಗಿ ಸಿನಿ ಕ್ವಿಝ್ ಮೂಲಕ ಹಲವಾರು ಬಹುಮಾನಗಳು ಹಾಗೂ ಇಬ್ಬರು ಅದೃಷ್ಟಶಾಲಿ ಪ್ರೇಕ್ಷಕರಿಗೆ ವಿಶೇಷ ಬೆಳ್ಳಿ ನಾಣ್ಯಗಳನ್ನ ನೀಡಲಾಯಿತು.
ತೀರ್ಪುಗಾರರಾಗಿ ರಾಜ್ಯಮಟ್ಟದ ತೀರ್ಪುಗಾರರಾಗಿ ಪ್ರಸಿದ್ದರಾಗಿರುವ ಸಂಗೀತ ನಿರ್ದೇಶಕರಾಗಿರುವ ಯಶವಂತ್ ಎಂ. ಜಿ. ಹಾಗೂ ಭಾಸ್ಕರ್ ಆಚಾರ್ಯ ಬಸ್ರೂರು ಇವರು ಆಗಮಿಸಿ ತಮ್ಮ ಅತ್ಯುತ್ತಮ ವಿಶ್ಲೇಷಣೆ ಹಾಗೂ ತೀರ್ಪುಗಾರಿಕೆಯಿಂದ ಸ್ಪರ್ಧೆಗೆ ವಿಶೇಷ ಆಕರ್ಷಣೆ ನೀಡಿದರು.
ನೆರೆದ ಪ್ರೇಕ್ಷಕರು ಪ್ರತಿಯೊಂದು ಗಾಯಕರನ್ನು ಕೊನೆಯ ತನಕ ಹುರುದುಬಿಸಿದರು. ಸಂಗೀತ ಸ್ಪರ್ಧೆಯ ಉದ್ದಕ್ಕೂ ಒನ್ಸ್ ಮೋರ್ ಉದ್ಘಾರ ಪದೇ ಪದೇ ಕೇಳಿ ಬಂತು.
ಪ್ರೇಕ್ಷಕರ ಹುಮ್ಮಸ್ಸು ಪ್ರೋತ್ಸಾಹ ಕಂಡು ಸ್ಪರ್ಧಿಗಳು ಗದ್ಗದಿತರಾದ ಪ್ರಸಂಗಗಳು ನಡೆಯಿತು.ಎಲ್ಲರ ಪೋತ್ಸಾಹ ಸಹಕಾರದಿಂದ ಸಿಂಗಿಂಗ್ ಸ್ಟಾರ್ 2019 ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ಮೂಡಿಬಂತು. ವಿಜೇತರಿಗೆ ಅಭಿನಂದನೆಗಳು.
ಸಿಂಗಿಂಗ್ ಸ್ಟಾರ್ 2019
ಅನ್ವಿತಾ ಜಿ. ಮೂರ್ತಿ ಉಡುಪಿ ಇವರ ಹಾಡಿನ ಮೋಡಿಗೆ ಮಾರುಹೋದ ಪ್ರೇಕ್ಷಕರು
ಸಿಂಗಿಂಗ್ ಸ್ಟಾರ್ 2019 ಸ್ಪರ್ಧೆಗೆ ಆಗಮಿಸಿದ ಪ್ರೇಕ್ಷಕರು ಸಕತ್ ಫಿದಾ ಆಗಿದ್ದ ಜನಸ್ತೋಮ ಅನ್ವಿತಾ ಹಾಡುವಾಗ ಸ್ವಯಂ ಪ್ರೇರಿತರಾಗಿ ಮೊಬೈಲ್ ಫ್ಲ್ಯಾಶ್ ಲೈಟ್ ಬೆಳಗಿಸಿ ಪ್ರೋತ್ಸಾಹಿಸುತ್ತಾ ಚಪ್ಪಾಳೆ ಸಿಳ್ಳೆ ಹಾಕಿದರು. ಜನರ ಭಾರಿ ಪ್ರೋತ್ಸಾಹ ಕರತಾಡನ ಹಾಗೂ ಬೆಂಬಲ ನೋಡಿ ಗದ್ಗದಿತಳಾಗಿ ಕಣ್ಣೀರಿಟ್ಟ ಅನ್ವಿತಾ, ಜನ ಮೆಚ್ಚಿದ ಗಾಯಕಿಯಾಗಿ ಜನರ ವೋಟಿಂಗ್ ಮೂಲಕ ಆಯ್ಕೆಯಾದರು.
ಕಾರ್ಯಕ್ರಮ ಸಂಪೂರ್ಣ ಮುಗಿದು ಬಹುಮಾನ ವಿತರಣೆ ಆದ ನಂತರವೂ ಕೂಡ ಒನ್ಸ್ ಮೋರ್ ಒನ್ಸ್ ಮೋರ್ ಎಂದು ಒತ್ತಾಯಿಸಿದ ಅಭಿಮಾನಿಗಳು ಅನ್ವಿತಾರಿಂದ ಇನ್ನೊಂದು ಹಾಡು ಹಾಡಿಸಿದರು.
ಈ ಘಟನೆಯ ಒಂದು ಚಿಕ್ಕ ವಿಡಿಯೋ ಝಲಕ್ ನಿಮಗಾಗಿ...