logo

Hanehalli Village goes under Sealdown

-Anand Kumar Barkur

Hanehalli Village goes under Seal down

Entire Hanehalli , under the jurisdiction of Hanehalli Grama Panchayath is sealed down as per the instructions of DC, Udupi District. 

Due to the Covid situation and increasing cases in the district, DC has ordered to Sealdown the villages where more than 50 cases have been reported. 

Villagers are advised to follow the Sealdown norms and requested to contact Grama Panchayath Members and Panchayath office in case of emergency.


*13ನೇ ಹನೆಹಳ್ಳಿ ಗ್ರಾಮಪಂಚಾಯತ್*

*ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು*

*ಪ್ರಕಟಣೆ*

*ಮಾನ್ಯ ಜಿಲ್ಲಾಧಿಕಾರಿ ಗಳ ಆದೇಶದಂತೆ ಹನೆಹಳ್ಳಿ ಗ್ರಾಮವನ್ನು ;ದಿನಾಂಕ 2-06-2021ರಿಂದ 6-06-2021-ರ ವರೆಗೆ ಕೋವಿಡ್ -19 ಪ್ರಯುಕ್ತ ಮುಂದಿನ 5 ದಿನಗಳ ಕಾಲ ಸಂಪೂರ್ಣ( ಸೀಲ್ ಡೌನ್ ) ಮಾಡಲಾಗಿದ್ದು,ಜನ ಸಂಚಾರ ವಾಹನ ಸಂಚಾರ ನಿಷೇಧಿಸಲಾಗಿದೆ*

*ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮೂಡುತೋಟ ಹಾಗೂ ಕೂರಾಡಿ ಹಾಲು ಸಂಗ್ರಹಣಾ ಘಟಕಗಳಿಗೆ ದಿನಂಪ್ರತಿ ಹಾಲು ಸರಭರಾಜು ಮಾಡುವ ಗ್ರಾಮಸ್ಥರನ್ನು ಗ್ರಾಮದ ಹಿತ ದ್ರಷ್ಟಿಯಿಂದ  ಬಾರಕೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳು,ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ಇಂದು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಯಿತು*

*ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳನ್ನು ನಿಲುಗಡೆ ಮಾಡಲಾಗಿದ್ದು*

*ಕೂರಾಡಿ ಕಿರುಸೇತುವೆ ಮೂಲಕ ಸಾಗುವ ಮುಖ್ಯ ರಸ್ತೆ ಹಾಗೂ ನೀಲಾವರ ಸೇತುವೆ ಮೂಲಕ ನೀಲಾವರವನ್ನು  ಸಂಪರ್ಕಿಸುವ ರಸ್ತೆಯನ್ನು ಕೂಡ ನಿಲುಗಡೆ ಮಾಡಿರುವುದರಿಂದ ವಾಹನ ಸವಾರರು ಮಂದಾರ್ತಿ ಮುಖ್ಯ ರಸ್ತೆಯನ್ನು ಅನುಸರಿಸ ಬೇಕಾಗಿ 13ನೇ ಹನೆಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ವಿನಂತಿಸಲಾಗಿದೆ*

*ಈ ಸಂದರ್ಭದಲ್ಲಿ ಹನೆಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ,ಕಾರ್ಯದರ್ಶಿ ಉಮೇಶ್ ಕಲ್ಯಾಣ ಪುರ ಗ್ರಾಮಲೆಕ್ಕಿಗರಾದ ಶ್ರೀಭೀಮರಾಜ್ ಹೊರಹಟ್ಟಿ , ಬ್ರಹ್ಮಾವರ ಆರಕ್ಷಕ ಠಾಣಾಸಿಬ್ಬಂದಿ ವರ್ಗ ,ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ,ಹನೆಹಳ್ಳಿ ಟಾಸ್ಕ್ ಪೋರ್ಸ್ ಸದಸ್ಯರು,ಹಾಗೂ ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು*

Leave Your Comment