logo

Kasim Saheb Barkur elected as the president of Jamiyathullah Falah, Udupi

ಉಡುಪಿ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಕಾಸಿಮ್ ಬಾರಕೂರು


ಉಡುಪಿ : ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ನೂತನ ಅಧ್ಯಕ್ಷರಾಗಿ ಕಾಸಿಮ್ ಬಾರಕೂರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಘಟಕದ ಕಚೇರಿಯಲ್ಲಿ ಖತೀಬ್ ಅಬ್ದುಲ್ ರಶೀದ್ ಅಧ್ಯಕ್ಷತೆ ಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಉಪಾಧ್ಯಕ್ಷರುಗಳಾಗಿ ಹಾಜಿ ಅಬ್ದುಲ್ಲಾ ಪರ್ಕಳ, ಕೆ.ಸಲಾವುದ್ದೀನ್ ಸಾಹೇಬ್, ಕಾರ್ಯದರ್ಶಿಯಾಗಿ ಸಮೀರ್, ಜೊತೆ ಕಾರ್ಯದರ್ಶಿಯಾಗಿ ನಝೀರ್ ಸಾಹೇಬ್ ನೇಜಾರ್, ಕೋಶಾಧಿಕಾರಿಯಾಗಿ ಹಸೇನಾರ್ ಅಬ್ದುಲ್ಲಾ ಪರ್ಕಳ, ಸಂಘಟನಾ ಕಾರ್ಯ ದರ್ಶಿಯಾಗಿ ನಾಸೀರ್ ಯಾಕೂಬ್, ಪತ್ರಿಕಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮೌಲಾ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಶೀರ್ ಶೇಕ್, ರಿಯಾರh ಅಹ್ಮದ್ ಕುಕ್ಕಿಕಟ್ಟೆ, ಶಹಜಹಾನ್ ತೋನ್ಸೆ, ಖತೀಬ್ ಅಬ್ದುಲ್ ರಶೀದ್, ಹುಸೇನ್ ಬಾರಕೂರು, ಅನ್ವರ್ ಸಾಹೇಬ್, ಮುಹಮ್ಮದ್ ಹನೀಫ್, ಹಸನ್ ಸಾಹೇಬ್, ಮುಹಮ್ಮದ್ ಹುಸೇನ್, ಅಬ್ದುಲ್ ಅಝೀರh ಉದ್ಯಾವರ, ಝಕರಿಯಾ ನೇಜಾರು, ವಿ.ಎಸ್.ಉಮರ್, ಮುಬೀನ್ ಹೈದರ್ ಅವರನ್ನು ಆಯ್ಕೆ ಮಾಡಲಾಯಿತು.

ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಮೀರ್ ಮಂಡಿಸಿದರು. ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಬ್ರಹ್ಮಾವರ ಘಟಕದ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕೇಂದ್ರ ಸಮಿತಿ ಕಚೇರಿಯ ವ್ಯವಸ್ಥಾಪಕ ಆದಮ್ ಬ್ಯಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

Add comment