logo

Moulya Adiga bags first place in Nammuru BarkurMuddu Krishna Contest

-Alwyn Andrade

Moulya Adiga bags first place in Nammuru Barkuru FB group Muddu Krishna Contest

ನಮ್ಮೂರು ಬಾರ್ಕುರು ಫೇಸ್ಬುಕ್ ಗ್ರೂಪ್ ವತಿಯಿಂದ ನಡೆದ ಮುದ್ದು ಕೃಷ್ಣ ಸ್ಪರ್ಧೆಯ  ಫಲಿತಾಂಶ ಬಂದಿದೆ. ಈ ಸಲದ ಸ್ಪರ್ಧೆ ತುಂಬಾ ಕಠಿಣವಾಗಿತ್ತು.ಫೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ತೀರ್ಪುಗಾರರಿಗೆ ಫಲಿತಾಂಶ ನೀಡಲು ಬಹಳಷ್ಟು ಪರಿಶ್ರಮ ಪಡಬೇಕಾಯಿತು.

ಅಂತಿಮವಾಗಿ ಹಲವಾರು ಮಕ್ಕಳು ಸಮಾನ ಅಂಕ ಪಡೆದರು.

ಅವಾಗ ನಮಗೆ  ಇನ್ನೊಮ್ಮೆ ಅಂಕ ಹಾಕಿ ಅವರಲ್ಲಿ ಕೆಲವರನ್ನು ಆಯ್ಕೆ ಮಾಡುವುದೋ ಅಥವಾ ಬಹುಮಾನ ಹಂಚುವುದೋ ಎನ್ನುವ ಗೊಂದಲ ಉಂಟಾಯಿತು.

ಅಂತಿಮವಾಗಿ ಸಮಾನ ಅಂಕ ಪಡೆದ ಯಾವ ಮಕ್ಕಳಿಗೂ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಬಹುಮಾನ ಹಂಚುವ ನಿರ್ಧಾರ ಕೈಗೊಳ್ಳಲಾಯಿತು.

ಯಾರಿಗಾದರೂ ತಮ್ಮ ಮಗುವಿಗೆ ಹೇಗೆ ಅಂಕ ಬಿದ್ದಿದೆ ಅಂತ ನೋಡುವ ಕುತೂಹಲ ಇದ್ದಲ್ಲಿ  ತೀರ್ಪುಗಾರರ ಅಂಕ ಪಟ್ಟಿ  ಸ್ವದೇಶ ಆಯುರ್ವೇದ ಬಾರ್ಕುರು ಇಲ್ಲಿ ಲಭ್ಯ ಇರುತ್ತದೆ ಆಸಕ್ತರು ವೀಕ್ಷಿಸಬಹುದು.

ಅತ್ಯುತ್ತಮ ರೀತಿಯಲ್ಲಿ ಮೌಲ್ಯ ಮಾಪನ ಮಾಡಿದ  ತೀರ್ಪುಗಾರರಾದ ಅಮಿತ್ ತೆಕ್ಕಟ್ಟೆ, ಪೂರ್ಣಿಮಾ ಜನಾರ್ಧನ್ ಉಡುಪಿ ಹಾಗೂ ವೆಂಕಟೇಶ್ ಭಟ್  ಸಾಲಿಗ್ರಾಮ ಇವರಿಗೆ ಧನ್ಯವಾದಗಳು.

ಎಲ್ಲಾ ಬಹುಮಾನಗಳ ಪ್ರಾಯೋಜಕತ್ವ ನೀಡಿದ ನಮ್ಮ ಪ್ರೋತ್ಸಾಹಕರಿಗೂ ಧನ್ಯವಾದಗಳು.

ಹಾಗೆಯೇ ಸ್ಪರ್ಧೆಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡ ಎಲ್ಲಾ ಪೋಷಕರಿಗೂ ಹಾಗೂ ಲೈಕ್ಸ್ ಕಮೆಂಟ್ಸ್  ಹಾಕಿ ಪ್ರೋತ್ಸಾಹಿಸಿದ ಗ್ರೂಪಿನ ಎಲ್ಲಾ ಸದಸ್ಯರಿಗೂ ಧನ್ಯವಾದಗಳು.

Add comment