logo

Muddu Krishna Photo Contest by Nammuru Barkuru FB Group

ನಮ್ಮೂರು ಬಾರ್ಕೂರು  (Facebook Group)

ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ

ಮುದ್ದುಕೃಷ್ಣ ಫೋಟೋ ಸ್ಪರ್ಧೆ

ಪ್ರಥಮ ಬಹುಮಾನ:

ರೂ 2000/-

ದ್ವಿತೀಯ ಬಹುಮಾನ:

ರೂ 1000/- 

ತೃತೀಯ ಬಹುಮಾನ  

ರೂ. 500/-

(ಮೇಲಿನ ಬಹುಮಾನಗಳ ಪ್ರಾಯೋಜಕರು: ಸವಿತಾ ಫುರ್ಟಾಡೋ,  ಹೇಮಂತ್ ಶ್ರೀಯಾನ್,  ಹರೀಶ್ ಆಚಾರ್ಯ)

5 ಸಮಾಧಾನಕರ ಬಹುಮಾನಗಳು

(ಪ್ರಾಯೋಜಕರು:ಸ್ವದೇಶಿ  ಔಷಧಾಲಯ,   ಬಾರ್ಕೂರು)

ಸ್ಪರ್ಧೆಯ  ನಿಯಮಗಳು  

1. ಒಂದು ತಿಂಗಳಿಂದ  6 ವರ್ಷಗಳ ಒಳಗಿನ ಮಕ್ಕಳ  ಇತ್ತೀಚಿನ ಕೃಷ್ಣನ  ವೇಷ ಧರಿಸಿ ತೆಗೆದ  ಫೋಟೋವನ್ನು  ಪೋಷಕರೇ ನಮ್ಮೂರು ಬಾರ್ಕೂರು  ಫೇಸ್ ಬುಕ್ ಗ್ರೂಪಿನಲ್ಲಿ  ಅಪ್ಲೋಡ್ ಮಾಡಬೇಕು.

2. ಒಬ್ಬರು  ಕಡ್ಡಾಯವಾಗಿ  ಒಂದು   ಫೋಟೋವನ್ನು  ಮಾತ್ರ  ಅಪ್ಲೋಡ್ ಮಾಡಬಹುದು.

3. ಅಪ್ಲೋಡ್ ಮಾಡಿದ ನಂತರ ಅದಕ್ಕೆ ಬಂದ ಲೈಕ್ಸ್ ಆಧಾರದಲ್ಲಿ ಪ್ರಥಮ,  ದ್ವಿತೀಯ,  ತೃತೀಯ ಮತ್ತು 5 ಸಮಾಧಾನಕರ ಬಹುಮಾನಗಳನ್ನು ಘೋಷಣೆ ಮಾಡಲಾಗುವುದು.

4. ಈ ಸ್ಪರ್ಧೆಗೆ ಯಾವುದೇ  ತೀರ್ಪುಗಾರರಿಲ್ಲ.

ನಮ್ಮೂರು ಬಾರ್ಕುರು ಗ್ರೂಪಿನ ಎಲ್ಲಾ ಸದಸ್ಯರು ಈ  ಸ್ಪರ್ಧೆಯ ತೀರ್ಪುಗಾರರು.

ನೀವು  ಕೊಟ್ಟ  ಲೈಕ್ಸ್ ಆಧಾರದಲ್ಲೇ ಈ  ಬಹುಮಾನ ನೀಡಲಾಗುವುದು.ಆದ್ದರಿಂದ  ನಮ್ಮೂರು  ಬಾರಕೂರು  ಗ್ರೂಪಿನ ಸದಸ್ಯರು ನಿಮಗಿಷ್ಟವಾದ ಫೋಟೋಗಳಿಗೆ  like ಕೊಟ್ಟು ಸಹಕರಿಸಬೇಕಾಗಿ  ವಿನಂತಿ.

5. ನಮ್ಮೂರು  ಬಾರ್ಕೂರು  ಗ್ರೂಪಿನಲ್ಲಿ ಬಂದ  ಲೈಕ್ಸ್ ಗಳನ್ನು   ಮಾತ್ರ  ಪರಿಗಣನೆಗೆ  ತೆಗೆದುಕೊಳ್ಳಲಾಗುವುದು.

6. ಫೋಟೋಗಳನ್ನು 06 -08 - 2020 ನೇ  ಗುರುವಾರದಿಂದ  ಫೇಸ್ಬುಕ್ ನಲ್ಲಿ  ಅಪ್ಲೋಡ್ ಮಾಡಬಹುದು.(5 ನೇ ತಾರೀಕು ರಾತ್ರಿ  12 ಗಂಟೆಯ ನಂತರ )

7. ದಿನಾಂಕ  11- 08 - 2020 ನೇ  ಮಂಗಳವಾರ ಸಂಜೆ  6 ಗಂಟೆಯ ತನಕ  ಬಂದ ಲೈಕ್ಸ್ ಗಳನ್ನು  ಮಾತ್ರ  ಗಣನೆಗೆ ತೆಗೆದುಕೊಂಡು  ಬಹುಮಾನ  ಘೋಷಿಸಲಾಗುವುದು.

8. ನಮ್ಮೂರು ಬಾರ್ಕೂರು  ಗ್ರೂಪಿನ ಸದಸ್ಯರು  ಈಗ  ಪ್ರಸ್ತುತ ಯಾವುದೇ  ಊರಿನಲ್ಲಿ  ಇದ್ದರೂ  ಕೂಡ  ಈ  ಸ್ಪರ್ಧೆಯಲ್ಲಿ ಭಾಗವಹಿಸಲು  ಅರ್ಹರು.

9. ಈ  ಸ್ಪರ್ಧೆಯಲ್ಲಿ  ಅಡ್ಮಿನ್ ಗಳ  ತೀರ್ಮಾನವೇ ಅಂತಿಮ.

ಗ್ರೂಪಿನ ಸದಸ್ಯರು ಮುದ್ದು ಕೃಷ್ಣರ  ಫೋಟೋಗಳಿಗೆ   like ಕೊಡುವುದರ ಮೂಲಕ  ಸ್ಪರ್ಧೆಯ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿ.

ವಿವರಗಳಿಗೆ : ಆಲ್ವಿನ್ ಆಂದ್ರಾದೆ +919448252468

ಆನಂದ್ ಕುಮಾರ್ ಬಾರ್ಕೂರು +919845894461

ಗಣೇಶ್ ಶೆಟ್ಟಿ,  ಬಾರ್ಕೂರು +919845003741

ಇವರನ್ನು  ಸಂಪರ್ಕಿಸಿ.

1 comments

Add comment