-Anand Kumar Barkur
ದೇಗುಲಗಳ ಬೀಡು ಬಾರಕೂರಿನ ಪುರಾತನ ದೇವಸ್ಥಾನಗಳಲ್ಲಿ ಬಾರಕೂರು ಶೆಡಿಗುಡ್ಡೆ ಸಮೀಪ ಇರುವ ಪಡ ಸಾಲೆ ವಿಶ್ವನಾಥ ದೇವಸ್ಥಾನವೂ ಒಂದು.
ಕಾರಣಾಂತರಗಳಿಂದ ಯಾವುದೇ ಹೆಚ್ಚಿನ ಪ್ರಚಾರ ಇಲ್ಲದೇ ಬಾರಕೂರಿನ ಈ ಪುರಾತನ ಪ್ರಸಿದ್ಧ ದೇವಸ್ಥಾನ ಮೂಲೆ ಗುಂಪಾಗಿರುತ್ತದೆ.
ಮಾರ್ಕಂಡೇಯ ಮುನಿಗಳು ಬಾರಕೂರಿನಲ್ಲಿ ಪ್ರತಿಷ್ಠಾಪಿಸಲು ಕಾಶಿ ಯಿಂದ ತಂದ ಪಂಚಲಿಂಗಗಳಲ್ಲಿ ಈ ಪಡಸಾಲೆ ವಿಶ್ವನಾಥ ದೇವರ ಲಿಂಗವು ಒಂದಾಗಿದೆ..ಈಗಿನ ಪಂಚಲಿಂಗೇಶ್ವರ ಕೇತ್ರ ದಲ್ಲಿ ಈ ಐದು ಲಿಂಗಗಳನ್ನು ಪ್ರತಿಷ್ಠಾಪಿಸ ಬೇಕಾಗಿತ್ತು. ಕಾರಣಾಂತರಗಳಿಂದ ಕಾಶಿಯಿಂದ ಲಿಂಗ ಬರುವುದು ತಡವಾಗುತ್ತದೆ,ಹಾಗೂ ಮುಹೂರ್ತ ಮೀರಿದ್ದರಿಂದ 5 ಕಲ್ಲುಗಳನ್ನೇ ಲಿಂಗಗಳನ್ನಾಗಿ ಕೆತ್ತಿ ಪಂಚ ಲಿಂಗ ಗಳ ರೂಪದಲ್ಲಿ ಪ್ರತಿಷ್ಠಾಸಲಾಗುತ್ತದೆ. ಹಾಗೂ ಪಂಚಲಿಂಗೇಶ್ವರ ಎಂಬ ನಾಮಧೇಯ ದಿಂದ ಬಾರಕೂರಿನ ಪ್ರಧಾನ ದೇಗುಲವಾಗಿ ಪ್ರಸಿದ್ದಿಯಾಗುತ್ತದೆ.
ತದನಂತರ ಕಾಶಿಯಿಂದ ಬಂದ ಈ ಐದು ಲಿಂಗಗಳನ್ನು ಬಾರಕೂರಿನ ವಿವಿಧ ಕಡೆ ಪ್ರತಿಷ್ಠಾಲಾಗುತ್ತದೆ..ಕಾಶಿಗೆ ಹೋದಷ್ಟೆ ಪುಣ್ಯ ನಮ್ಮ ಈ ಬಾರಕೂರಿನ ಶಿವ ದೇಗುಲಗಳ ದರ್ಶನದಿಂದ ಲಭಿಸುತ್ತದೆ.
ಸಂಪೂರ್ಣ ಹಾಳು ಬಿದ್ದ ಈ ದೇವಸ್ಥಾನ ಕ್ಕೆ ಹಲವು ವರ್ಷಗಳ ಹಿಂದೆ ಸಣ್ಣ ಗುಡಿಯನ್ನು ನಿರ್ಮಿಸಲಾಗಿತ್ತು. ಈ ಗುಡಿಯೊಳಗೆ ಸುಂದರ ಅತ್ಯದ್ಭುತ ಶಿವ ಲಿಂಗವನ್ನು ನೋಡ ಬಹುದು.
ಪ್ರಸ್ತುತ ಜೀರ್ಣಾವಸ್ಥೆಯಲ್ಲಿರುವ ಈ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಇಂದು ಸಂಜೆ ಪ್ರಾಯಶ್ಚಿತ್ತ ಹೋಮಾದಿಗಳನ್ನು ಮಾಡಿ,ನಾಳೆ ಬೆಳಿಗ್ಗೆ 10 ಗಂಟೆಗೆ ಮುಷ್ಠಿ ಕಾಣಿಕೆ ಸಮರ್ಪಿಸಲಾಗುವುದು.
ಸದ್ಭಕ್ತರು ಈ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ವಿಂತಿಸುತ್ತೇವೆ..
ಜೀರ್ಣೋದ್ಧಾರ ಸಮಿತಿ
ಶ್ರೀ ಪಡಸಾಲೆ ವಿಶ್ವನಾಥ ದೇವಸ್ಥಾನ ಬಾರಕೂರು.