logo

Second Anniversary of Shri Ekanatheshwari Temple

ದೇವಾಲಯಗಳ ನಾಡು ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ದ್ವಿತೀಯ  ವಾರ್ಷಿಕ ವರ್ಧಂತ್ಯುತ್ಸವ ಇದೆ ಬರುವ ಫೆಬ್ರವರಿ 16-2-2020 ರಿಂದ ಪ್ರಾರಂಭವಾಗಿ 19-2-2020 ವರೆಗೆ ನಡೆಯಲಿದೆ.

ದಿನಾಂಕ 17-02-2020 ಸೋಮವಾರ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಪ್ರತಿಭಾನ್ವಿತ ಕಲಾವಿದರಿಂದ  ಸ್ಯಾಕ್ಸೋಫೋನ್ ವಾದನ ಸೇವೆ.

ದಿನಾಂಕ 18-02-2020 ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ(ವಿವಿಧ ಭಜನಾ ತಂಡದವರಿಂದ)

ದಿನಾಂಕ 19-02-2020 ಬುಧವಾರ ಮಧ್ಯಾನ್ಹ 3.30 ರಿಂದ 6.30 ರ ತನಕ ತಾಮರಸ ಯಕ್ಷಗಾನ ಕೂಟ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಇವರಿಂದ ಪೌರಾಣಿಕ ಪ್ರಸಂಗ.

ದಿನಾಂಕ 19-2-2020ದಂದು ಬೆಳ್ಳಗೆ 10ರಿಂದ 12 ರತನಕ ಚಂಡಿಕಾಯಗ,  ತುಲಾಭಾರ ಸೇವೆ,  ವಧು ವರ ಅನ್ವೇಷಣೆ ಕಾರ್ಯಕ್ರಮ,  ಹಾಗೂ ವಿರಾಟ್ ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವಾಡಿಗ ಸಮಾಜ ಭಾಂಧವರನ್ನು ಗೌರವಿಸುವ ಕಾರ್ಯ ನಡೆಯಲಿದೆ.

ದಿನಾಂಕ 26-02-2020 ನೇ ಬುಧವಾರದಂದು ಬೆಳಿಗ್ಗೆ 8 ರಿಂದ ಶ್ರೀ ಏಕನಾಥೇಶ್ವರಿ ದೇವಿಯ ದ್ವಿತೀಯ ಪ್ರತಿಷ್ಟಾ ವರ್ಧಂತ್ಯುತ್ಸವದ ಅಂಗವಾಗಿ ನವೋತ್ತರ ಶತ (109) ಬ್ರಹ್ಮ ಕುಂಬಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ, ಮಹಾಪೂಜೆಯನ್ನು ತಂತ್ರಿಗಳಾದ ವೇದಮೂರ್ತಿ ಶ್ರೀ ರಮೇಶ್ ಭಟ್ ನಾಯರ್ ಬೆಟ್ಟು ಬಾರಕೂರು ಇವರ ಅಚಾರ್ಯತ್ವದಲ್ಲಿ ನೆರವೇರಲಿದೆ.

ಈ ಎಲ್ಲ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,  

ಅಧ್ಯಕ್ಶರು ಹಾಗೂ ವಿಶ್ವಸ್ಥರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರಕೂರು  

ಹಾಗೂ ಸಲಹಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಹಿಳಾ ಘಟಕ ಸದಸ್ಯರು, 

ಆಡಳಿತಾಧಿಕಾರಿ, ಅರ್ಚಕ ವೃಂದ, ಸಿಬ್ಬಂದಿ ವರ್ಗ  ಮತ್ತು ದೇವಾಡಿಗ ಸಮಾಜದ ಸರ್ವ ಸಂಘ ಸದಸ್ಯರು.

ಪೂಜೆ ಹಾಗೂ ವಿವರಗಳಿಗೆ ಸಂಪರ್ಕಿಸಿ - 0820-2587579

Add comment