logo

Sunil Trophy 2021 commencing today at Barkur

ಬಾರಕೂರು ಸಂತೆಗುಡ್ಡೆ ಕ್ರೀಡಾಂಗಣದಲ್ಲಿ ಇಂದು ಮತ್ತೆ ನಾಳೆ  ಕ್ರಿಕೆಟ್ ಹಬ್ಬ

ಸ್ನೇಹ ಸ್ಪೋರ್ಟ್ಸ್ ಕ್ಲಬ್ ಬಾರಕೂರು ಹಾಗೂ ಸಂತೆಗುಡ್ಡೆ ಕ್ರಿಕೆಟರ್ಸ್ ಬಾರಕೂರು ಇವರ ಆಶ್ರಯದಲ್ಲಿ ಚಲನ ಚಿತ್ರ ನಟ ದಿ.ಸುನಿಲ್ ಸ್ಮರಣಾರ್ಥ  40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ

ಸುನಿಲ್ ಟ್ರೋಪಿ-2021

ಪ್ರಥಮ ಬಹುಮಾನ: 35,555 ಹಾಗೂ ಶಾಶ್ವತ ಫಲಕ

ದ್ವಿತೀಯ ಬಹುಮಾನ: 25,555 ಹಾಗೂ ಶಾಶ್ವತ ಫಲಕ


ಹುಟ್ಟು ಬಂಧುಗಳಿಗೆ ಮಾತ್ರ ಗೊತ್ತಾದ್ರೆ ಸಾಕು ಆದರೆ ಸಾವು ಪ್ರಪಂಚಕ್ಕೆ ಗೊತ್ತಾಗಬೇಕು ಎನ್ನುವ ಮಾತಿದೆ.  ಪ್ರತಿಯೊಬ್ಬರು ತಾಯಿಯ ಗರ್ಭದಿಂದ ಹೊರಬಂದು ದೊಡ್ಡವರಾಗುತ್ತ ವಿದ್ಯಾಭ್ಯಾಸ,  ಕೆಲಸ, ಮದುವೆ, ಮಕ್ಕಳು ಕೊನೆಗೊಂದು ದಿನ ಕಾಲನ ಕರೆಗೆ ಓಗೊಟ್ಟು ಹೋಗುತ್ತಾರೆ.  ಇದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತದ್ದು.  ಹಾಗೂ ಇವು ಅವರ ಮನೆಯವರಿಗೆ, ಬಂಧುಗಳಿಗೆ ಹೆಚ್ಚೆಂದರೆ ಅವರ ಊರಿನವರಿಗೆ ತಿಳಿಯುವಂತದ್ದು.  ಆದರೆ ಈ ಹುಟ್ಟು, ಸಾವು ಮತ್ತು ಅದರ ನಡುವಿನ ಬಾಳು ಊರಿಗೂ ಹಾಗೂ ಅದರಾಚೆಗೂ ತಿಳಿಯಬೇಕೆಂದರೆ ಅದಕ್ಕೆ ಕಾರಣವಾಗುವುದು ಅವರ ಸಾಧನೆ ಮಾತ್ರ. ಅದನ್ನು ಕೆಲವರು ಮಾತ್ರ ಸಾಧ್ಯವಾಗಿಸುತ್ತಾರೆ.  ಅದಕ್ಕೆ ಕಾಣುವ ಕನಸಿನ ಜೊತೆಗೆ, ಆ ಕನಸನ್ನು ನನಸಾಗಿ ಮಾಡುವ ಛಲ,  ಪರಿಶ್ರಮ ಹಾಗೂ ಶೃದ್ಧೆ ಬೇಕು. 

90 ರ ದಶಕದಲ್ಲಿ ಬಣ್ಣ ಬಣ್ಣದ ಟೀ ಶರ್ಟ್ ಹಾಕಿಕೊಂಡು ಬೆಳ್ಳಿ ತೆರೆಯ ಮೇಲೆ ಬಂದರೆ ಯುವಕರು ಆ ನಟನ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುತ್ತಿದ್ದರು

90 ರ ದಶಕದ ಕನ್ನಡ ಚಿತ್ರರಂಗದ ಭರವಸೆಯ ನಾಯಕ  ನಟನಾಗಿದ್ದರು ನನ್ನೂರು ಬಾರ್ಕೂರಿನ ಸುನೀಲ್.  ಅಭಿನಯದಲ್ಲಿ ಕೂಡ ಸೈ ಅನ್ನಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೊ. 

ಆದರೇ ವಿಧಿಗೂ ಕೂಡ ಹೊಟ್ಟೆಕಿಚ್ಚು. ಇನ್ನೂ ಸಾಧಿಸುವ ಹಾದಿಯಲ್ಲಿರುವಾಗಲೇ ಆ ಕಾಲನಿಗೂ ಕೂಡ ಇವರ ಮೇಲೆ ಪ್ರೀತಿ ಜಾಸ್ತಿ ಆಗಿ ತನ್ನ ಬಳಿಗೆ ಕರೆಸಿಕೊಂಡ.  ರಸ್ತೆ ಅಪಘಾತದಲ್ಲಿ ಸುನೀಲ್ ಇನ್ನಿಲ್ಲವಾದರು.  ಸುಂದರವಾಗಿ ಅರಳುತ್ತಿದ್ದ ಹೂವೊಂದು ಬಾಡಿತು.  ಸರಿ ಸುಮಾರು ಇಪ್ಪತ್ತೇಳು ವರುಷಗಳು ಉರುಳಿದರೂ ಸುನೀಲ್ ನೆನಪು ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಚಿರಸ್ಥಾಯಿ ಆಗಿದೆ. 

ಸಾಧಿಸಿದ್ದಾರೆ, ಆದ್ದರಿಂದ ಜನರ ಮನದಲ್ಲಿ ಮನೆ ಮಾಡಿದ್ದಾರೆ. 

ದಿವಂಗತ ಸುನೀಲ್ ಸ್ಮರಣಾರ್ಥ ಮಾರ್ಚ್ 20 ಮತ್ತು 21 ರಂದು ಬಾರ್ಕೂರಿನ ಸಂತೆಗುಡ್ಡೆಯ ಮೈದಾನದಲ್ಲಿ ಸ್ನೇಹ ಸ್ಫೋರ್ಟ್ ಕ್ಲಬ್ ಬಾರ್ಕೂರು ಮತ್ತು ಸಂತೆಗುಡ್ಡೆ ಕ್ರಿಕೆಟರ್ಸ್ ಬಾರ್ಕೂರು ಇವರ ವತಿಯಿಂದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.  ಕ್ರಿಕೆಟ್ ಪ್ರೇಮಿಗಳ ಕಣ್ಣುಗಳಿಗೆ ರಸದೌತಣ.  ಕ್ರೀಡೆ ಎನ್ನುವುದು ಜಾತಿ, ಧರ್ಮವನ್ನೆಲ್ಲ ಬದಿಗೊತ್ತಿ ನಾವೆಲ್ಲರೂ ಮಾನವರು ಎಂದು ಎಲ್ಲರನ್ನೂ ಒಟ್ಟುಗೂಡಿಸುತ್ತದೆ.  ದಿವಂಗತ ಸುನೀಲ್ ಅವರಿಗೆ ಕ್ರೀಡೆಯ ಮೂಲಕ ಒಂದು ಅರ್ಥಪೂರ್ಣ ನಮನ. 

ಸ್ನೇಹ ಸ್ಫೋರ್ಟ್ ಕ್ಲಬ್ ಒಂದು ಕಾಲದಲ್ಲಿ ಹಲವಾರು ಪಂದ್ಯಾಟಗಳನ್ನು ಗೆಲ್ಲುವ ಮುಖಾಂತರ ತನ್ನದೇ ಒಂದು ಹೆಸರನ್ನು ಹೊಂದಿದೆ.  ಇನ್ನು ಸಂತೆಗುಡ್ಡೆ ಕ್ರಿಕೆಟರ್ಸ್ ಹಲವಾರು ಗೆಲುವಿನ ಗರಿಗಳಿಂದ ತನ್ನ ಕಿರೀಟವನ್ನು ಅಲಂಕರಿಸಿಕೊಂಡ ತಂಡ.  ಈ ಎರಡು ಕ್ಲಬ್ ಗಳು ಈ ಒಂದು ಅರ್ಥಪೂರ್ಣ ಪಂದ್ಯಾಟವನ್ನು ಆಯೋಜಿಸಿರುವುದು ಸಂತಸದ ವಿಷಯ .

ಕ್ರಿಕೆಟಿನ ಜೊತೆ ಜೊತೆಗೆ ಸಾಧಕರನ್ನು, ಸಮಾಜಕ್ಕಾಗಿ, ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಕಾರ್ಯಕ್ರಮಕ್ಕೆ  ಇನ್ನಷ್ಟು ತೂಕ ಹೆಚ್ಚಿಸಿದೆ.  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಗೆಳೆಯ ದಿನಕರ ಪೂಜಾರಿ ಮತ್ತು ಸತೀಶ್ ಅವರನ್ನು ಸನ್ಮಾನಿಸಲಾಗುವುದು.  ಇದು ತುಂಬಾ ಹೆಮ್ಮೆ  ಪಡುವಂತಹ ಆಯ್ಕೆ.  ಇನ್ನೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯರಾದ ಶ್ರೀಯುತ ಕೂಸ ಕುಂದರ್ ಅವರನ್ನು ಸನ್ಮಾನಿಸುತ್ತಿರುವುದು ಖುಷಿಯ ವಿಷಯ.  ಕುಮಾರಿ ಕರಿಷ್ಮ ಯೋಗ್ಯವಾದ ಆಯ್ಕೆ ಸನ್ಮಾನಕ್ಕೆ.  ಕ್ರೀಡಾ ಕ್ಷೇತ್ರದಲ್ಲಿ ಈ ಹುಡುಗಿ ಇನ್ನೂ ಎತ್ತರಕ್ಕೆ ಏರಿ ನನ್ನೂರಿನ ಹೆಸರನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಲಿ. 

ನಮ್ಮೂರು ಬಾರ್ಕೂರು " ಫೇಸ್ ಬುಕ್ ಗ್ರೂಪಿನ ಕಾರ್ಯನಿರ್ವಾಹಕರಾದ ಆನಂದ್ ಕುಮಾರ್ ಅವರನ್ನು ಸನ್ಮಾನಿಸುತ್ತಿರುವುದು  ಆನಂದದ ವಿಷಯ. 

ಗೋಪಾಲ್ ನಾಯಕ್ ಶಿರೂರು ಇವರನ್ನು ಕಂಬಳ ಕ್ರೀಡೆಯಲ್ಲಿನ ಸಾಧನೆಗಾಗಿ ಸನ್ಮಾನಿಸಲಾಗುವುದು. 

ಸ್ವಯಂ ಸೇವಕರಾದ ನವೀನ್ ಅಮೀನ್ ಅವರನ್ನು ಸನ್ಮಾನಿಸಲಾಗುವುದು. 

ಇನ್ನೂ ಕಾರ್ಯಕ್ರಮದ ಉದ್ಧಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಯುತ ಶಾಂತರಾಮ ಶೆಟ್ಟಿಯವರು ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀಯುತ ಹಾಲಾಡಿ ಶ್ರೀನಿವಾಸ ಶೆಟ್ಟಿ ಇನ್ನೀತರರು ಭಾಗವಹಿಸಲಿದ್ದಾರೆ .

ಸಮಾರೋಪ ಸಮಾರಂಭದಲ್ಲಿ ಘನ ಕರ್ನಾಟಕ ಸರಕಾರದ ಸಚಿವರಾದ ಶ್ರೀಯುತ ಕೋಟ  ಶ್ರೀನಿವಾಸ ಪೂಜಾರಿಯವರು ಭಾಗವಹಿಸುತ್ತಾರೆ.  

ಉದ್ಧಾಟನ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವ ಎಲ್ಲರ ಹೆಸರನ್ನು ನಮೂದಿಸಲು ಸಾಧ್ಯವಾಗಿಲ್ಲ.  ಕ್ಷಮೆ ಇರಲಿ. 

ಕೊನೆಯದಾಗಿ ಸಮಾರೋಪ ಸಮಾರಂಭದಲ್ಲಿ ಶೈನ್ ಆಗಲಿದ್ದಾರೆ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ.  

ಬಾರ್ಕೂರ್ ಕೂಡ ಶೈನ್ ಆಗಲಿ.  ಹೊನಲು ಬೆಳಕಿನ ತರಹ ಕಾರ್ಯಕ್ರಮ ಕೂಡ ಹೊಳೆಯಲಿ. 

ಇತಿಹಾಸ ಪ್ರಸಿದ್ಧ ಬಾರ್ಕೂರು ಹೊಳೆಯಲಿ. 


✍️ಅರುಣ್  ವಿ

ಸೇಮಿ ಫೈನಲ್ ಹಾಗೂ ಫೈನಲ್ ಪಂದ್ಯದ ಟಾಸ್ ಗೆ ಬೆಳ್ಳಿ ಹಾಗೂ ಚಿನ್ನ ಲೇಪಿತ ನಾಣ್ಯದ ಕೊಡುಗೆ ಶ್ರೀಕಾಂತ್ ಆಚಾರ್ಯ ಬಾರಕೂರು





Add comment