logo

Updates on Shri Brahma Baidarkala Garadi, Hosala Barkur

-Anand Kumar Barkur

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮತ್ತು ಶ್ರೀ ಶಿವರಾಯ ಕ್ಷೇತ್ರ ಹೊಸಾಳ ಬಾರಕೂರು

ಜೀರ್ಣೋದ್ಧಾರ ಸಮಿತಿ ,ಹಾಗೂ ಆಡಳಿತ ಮಂಡಳಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೊಸಾಳ, ಬಾರಕೂರು

ಕರೋನಾ ಪಿಡುಗಿನ  ಅಡೆ ತಡೆಯ ನಡುವೆ ಗರಡಿಯ ಗರ್ಭಗುಡಿಯ ಕಾಮಗಾರಿ ಪ್ರಗತಿಯಲ್ಲಿದ್ದು ಕೆಂಪು ಕಲ್ಲಿನ ಅತ್ಯಾಕರ್ಷಕ ಕೆತ್ತನೆಯುಳ್ಳ ಗರ್ಭಗುಡಿ ಗೋಡೆಗಳು ಪೂರ್ಣಗೊಂಡಿದ್ದು, ಮತ್ತೊಂದೆಡೆ ಗರ್ಭ ಗುಡಿಯ ಮರದ ಕೆಲಸಗಳು ಪ್ರಗತಿಯಲ್ಲಿವೆ.

ಮುಂದಿನ ಮಕರ ಸಂಕ್ರಾಂತಿಯ ನಂತರದ ಉತ್ತರಾಯಣದ ಪರ್ವಕಾಲದ ಶುಭ ಮುಹೂರ್ತದಲ್ಲಿ ನೂತನ ಗರ್ಭಗುಡಿಯಲ್ಲಿ ಶ್ರೀದೇವರ ಪ್ರತಿಷ್ಠಾಪನೆ ಮಾಡುವ ಆಶಯವನ್ನು ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಮಂಡಳಿ ಹೊಂದಿರುತ್ತಾರೆ.

ಬಾರಕೂರು ಹೊಸಾಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಸಮಗ್ರ ಜೀರ್ಣೋದ್ಧಾರದ ಬಗ್ಗೆ ದಿನಾಂಕ 15-06-2020 ಸೋಮವಾರ ಮಿಥುನ ಸಂಕ್ರಮಣ ದ ಶುಭ ಮುಹೂರ್ತದಲ್ಲಿ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಊರ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಗರಡಿಯ ಪ್ರಧಾನ ಪಾತ್ರಿಗಳಾದ ಶ್ರೀ ರಘು   ಪಾತ್ರಿಗಳು ಶಿಲಾ ಮುಹೂರ್ತ ನೆರವೇರಿಸಿದ್ದರು.

ತುಳು ನಾಡಿನ ವೀರ ಪುರುಷರಾದ  ಕೋಟಿ ಚೆನ್ನಯ್ಯರು ವೀರ ಗತಿ ಹೊಂದಿದ ನಂತರ, ತುಳುನಾಡಿನ ಉದ್ದಗಲಕ್ಕೂ ಬ್ರಹ್ಮ ಬೈದರ್ಕಳರಾಗಿ ಆರಾಧ್ಯ ಶಕ್ತಿಗಳಾಗಿ ಪೂಜಿಸಲ್ಪಡುತ್ತಿದ್ದಾರೆ.

ಈ ಹಿಂದೆ ಬಾರಕೂರಿನಲ್ಲಿ 5 ಗರಡಿಗಳಿದ್ದವು, ಆದರೆ ಇದೀಗ ಹೊಸಾಳ ಗರಡಿ ಮಾತ್ರ ಪ್ರಮುಖ ಗರಡಿಯಾಗಿ ನೆಲೆ ನಿಂತಿದೆ. ಪ್ರಸ್ತುತ ಹೊಸಾಳ ಗರಡಿಯು ಸಹಸ್ರಾರು ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.ಶ್ರೀ ಬ್ರಹ್ಮ ಬಂಟ , ಶಿವರಾಯ , ಮತ್ತು ಪರಿವಾರ ದೇವರನ್ನು ಆರಾಧಿಸಿ ಕೊಂಡು ಬರಲಾಗುತ್ತಿದೆ. ಕಾಲ ಕಾಲಕ್ಕೆ ಅನುಗುಣವಾಗಿ ನೇಮೋತ್ಸವ, ಹಾಲು ಹಬ್ಬ, ಅಗಲು ಸೇವೆ, ಮಾರಿಪೂಜೆ, ನವರಾತ್ರಿ , ಚೌತಿ, ಅಷ್ಟಮಿ, ಸಂಕ್ರಾಂತಿ ಪೂಜೆ ಸೇರಿದಂತೆ  ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ.

ಬಾರಕೂರು ಹೊಸಾಳ ಗರಡಿಯು ಹೊಸಾಳ, ಕಚ್ಚೂರು, ಹನೆಹಳ್ಳಿ, ಹೇರಾಡಿ, ಕಾರ್ಕಡ , ಸಾಲಿಗ್ರಾಮ, ಕೋಟ ಮಣೂರು, ರಾಮನಕುದ್ರು (ನೀಲಾವರ) ಈ ಎಲ್ಲಾ ಗ್ರಾಮಗಳ ವ್ಯಾಪ್ತಿಯ ಭಕ್ತಾದಿಗಳಿಗೆ ಸಂಬಂಧ ಪಟ್ಟದಾಗಿರುತ್ತದೆ. ಪ್ರಸ್ತುತ ಹೊಸಾಳ ಗರಡಿಯು ಶಿಥಿಲಾವಸ್ಥೆಯಲ್ಲಿದ್ದು , ಈ ಬಗ್ಗೆ ನಂಬಿದ ಗ್ರಾಮಸ್ಥರು ಹಾಗೂ ಊರ ಹತ್ತು ಸಮಸ್ತರು ಚಿಂತನೆ ಮಾಡಿ ಅಷ್ಟಮಂಗಲ ಪ್ರಶ್ನೆಯನಿಟ್ಟು ಮಾರ್ಗದರ್ಶನ ಪಡೆಯಲಾಯಿತು.

ಅಷ್ಟ ಮಂಗಳ ಪ್ರಶ್ನೆಯಲ್ಲಿ ತಿಳಿಸಿದಂತೆ ಗರಡಿಯ ಸಮಗ್ರ ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿ ಕೆಲಸ ಜಾರಿಯಲ್ಲಿದೆ.

ಗರ್ಭ ಗುಡಿ, ಪರಿವಾರ ದೈವಗಳ ಸಾನಿಧ್ಯ, ಎಲ್ಲ ದೇವರ ಬಿಂಬಗಳಿಗೆ ವರ್ಣಾಚ್ಚಾದನೆ, ಹೊರಗೆ ಶಾಶ್ವತ ಚಪ್ಪರ, ಕಲ್ಲುಕುಟಿಗ ಗುಡಿ, ನಾಗ ಬನ, ಪ್ರವೇಶದ್ವಾರ, ಪ್ರಾಕಾರ ಗೋಡೆ, ಪುಷ್ಕರಣಿ(ಕೆರೆ) ಈ ಎಲ್ಲಾ ಕಾರ್ಯಗಳಿಗೆ ಅಂದಾಜು ರೂ 1ಕೋಟಿ 50 ಲಕ್ಷ ರೂಪಾಯಿ ಬೇಕಾಗುತ್ತದೆ.

ಮುಂದಿನ ಉತ್ತರಾಯಣದ ಒಳಗಡೆ ಗರ್ಭಗುಡಿಯ ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿರುವುದರಿಂದ, ಈ ಪುಣ್ಯ ಕಾರ್ಯಕ್ಕೆ ಭಕ್ತಾಭಿಮಾನಿಗಳಾದ ತಾವೆಲ್ಲರೂ ಅತೀ ಹೆಚ್ಚಿನ ದೇಣಿಗೆಯನ್ನು ನೀಡಿ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವೀಗೊಳಿಸಿ, ಶ್ರೀ ಬ್ರಹ್ಮ ಬೈದರ್ಕಳ, ಶಿವರಾಯ, ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,

ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೊಸಾಳ ಬಾರಕೂರು

ಜೀರ್ಣೋದ್ಧಾರ ಕಾರ್ಯಕ್ಕೆ ಧನ ಸಹಾಯ ಮಾಡಲಿಚ್ಛಿಸುವವರು, ಜೀರ್ಣೋದ್ಧಾರ ಸಮಿತಿಯ ಕೆನರಾ ಬ್ಯಾಂಕ್ ಬಾರಕೂರು ಶಾಖೆಯ ಖಾತೆ ಸಂಖ್ಯೆ A/c No3747214000002 IFSC Code: CNRB 0003747ಕ್ಕೆ ಕಳುಹಿಸಬಹುದು ಅಥವಾ ಸಮಿತಿಯ ಪದಾಧಿಕಾರಿಗಳಲ್ಲಿ ನೀಡಿ ರಶೀದಿ ಪಡೆದುಕೊಳ್ಳಬಹುದು.

Add comment