ಸಂಗೀತ ಲೋಕದಲ್ಲಿ ರಾರಾಜಿಸುತ್ತಿರುವ - ಹರೀಶ್ ಹೆಬ್ಬಾರ್
-ಅಭಿಜಿತ್, ಪಾಂಡೇಶ್ವರ.
ಹರೀಶ್ ಹೆಬ್ಬಾರವರ ತಂದೆ ಉಪೇಂದ್ರ ಹೆಬ್ಬಾರ್ , ಕೂಡ ಅಪ್ಪಟ ಯಕ್ಷಗಾನದ ಕಲಾವಿದರಾಗಿ ಸಾಲಿಗ್ರಾಮ, ಹಾಗೂ ಕೋಟ ಅಮೃತ್ಗೇಶ್ವರಿ ಮೇಳದಲ್ಲಿ ಬದುಕನ್ನು ಕಂಡವರು. ತಾಯಿ ಶ್ರೀದೇವಿ ಹೆಬ್ಬಾರ್. ತಂದೆ ತಾಯಿಯ ಪ್ರೋತ್ಸಾಹ ಹರೀಶರಿಗೆ ಸಂಗೀತ ವಲಯದಲ್ಲಿ ಆಸಕ್ತಿ ಹುಟ್ಟಿಸಿತು.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿ.ಪ್ರಾ ಶಾಲೆ ಕಾವಡಿ, ಪ್ರೌಢ ಶಿಕ್ಷಣವನ್ನು NJC ಬಾರಕೂರಿನಲ್ಲಿ ಪಡೆದರು. ಶಾಲಾ ದಿನಗಳಲ್ಲೆ ಸಾಕಶ್ಟು ಕಾರ್ಯಕ್ರಮಗಳಲ್ಲಿ ತನ್ನ ಹಾಡಿನ ಮೂಲಕ ಗುರುತಿಸಿಕೊಂಡರು.
ಹಲವಾರು ಕ್ಷೇತ್ರಗಳಲ್ಲಿ ಹವಾರಲು ಹೆಬ್ಬಾರ್
ಹರೀಶ್ ಹೆಬ್ಬಾರ್ ಇವರ ಮೂಲ ಮನೆ ಕಾವಡಿಯ ಗ್ರಾಮದ ಹವಾರಾಲು. ಬ್ರಾಹ್ಮಣ ಕುಟುಂಬದಿಂದ ಬಂದ ಇವರು ಸಾಕಷ್ಟು ದೇವಾಲಯದ ಪೂಜಾ ಚಾಕರಿಯ ಹೊಣೆಗಾರಿಕೆ ಹೊತ್ತವರು.ಶ್ರೀ ಕ್ಷೇತ್ರ ಕಾರಣಿಕ ಮಹಾಲಿಂಗೇಶ್ವರ ಹವಾರಾಲು, ದೇವಸ್ಥಾನದಲ್ಲಿ ತನ್ನ ತಂದೆಯ ಜೊತೆಗೆ ಸಹಾಯಕರಾಗಿ ದುಡಿದರು. ಕೃಷಿ ಚಟುವಟಿಕೆಯಲ್ಲಿ, ನಾಟಕ , ಯಕ್ಷಗಾನ ತೊಡಗಿ ಸಿಕೊಂಡು, ತನ್ನ ಊರಿನ ಹೆಮ್ಮೆಯ ಮಹಾಲಿಂಗೇಶ್ವರ ಯಕ್ಷಗಾನದ ಸಂಸ್ಥೆಯಲ್ಲಿ ಬಣ್ಣ ಹಚ್ಚಿದ್ದಾರೆ, ಹಾಗೂ ಚೇತನ ಚಂಡೆ ಬಳಗ ಐರೋಡಿಯಲ್ಲಿ ಚಂಡೆ ವಾದಕರಾಗಿ, ಕುಣಿತ ಭಜನೆ , ಜಿಲ್ಲೆಯಲ್ಲಿ 15, 20ಕ್ಕೂ ಮಿಕ್ಕಿದ ದೇವಸ್ಥಾನದ ಜಾತ್ರೆಯ ಪಲ್ಲಕ್ಕಿ ಉತ್ಸವದಲ್ಲಿ ಹೆಗಲೂ ನೀಡಿದ್ದಾರೆ.
ಇವರ ಬಹುಮುಖ ಪ್ರತಿಭೆಯ ಸಾಧನೆಗೆ ಬೇಕಷ್ಟು ಪ್ರಶಸ್ತಿಗಳು ಲಭಿಸಿದೆ. 2018ರಲ್ಲಿ Voice of Barkur ಕಾರ್ಯಕ್ರಮ ದಲ್ಲಿ ಗುರುತಿಸಿಕೊಂಡಿರುವ ಹಾಡುಗಾರ.
ತದ ನಂತರ ಪಿ.ಕಾಳಿಂಗರಾವ್ ಇವರ ಮೊಮ್ಮಗ , ಸಾಕಷ್ಟು ಗ್ರಾಮೀಣ ಸಂಗೀತ ಹಾಡುಗಾರರಿಗೆ, ವೇದಿಕೆ, ತರಬೇತಿ ನೀಡುತ್ತಿರುವ ಶ್ರೀ ರಾಜೇಶ್ ಶ್ಯಾನ್ ಭೋಗರ ಗರಡಿಯಲ್ಲಿ ಗುರುತಿಸಿ ಕಂಡು, ನೂರಕ್ಕೂ ಹೆಚ್ಚು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿದವರು. ಜಿಲ್ಲಾ , ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಫೈನಲಿಸ್ಟ್ ಆಗಿ ಆಯ್ಕೆಯನ್ನು ಕಂಡವರು.ಕಾಣದ ಕಡಲಿಗೆ ಟಿ.ವಿ.ಮಾಧ್ಯಮ ಶೋಗಳಲ್ಲಿ ಪ್ರೇಕ್ಷಕರ ಮನ ಗೆದ್ದು, ಅಭಿಮತ ಮಾಧ್ಯಮದ ಕಾರ್ಯಕ್ರಮದಲ್ಲೂ ತನ್ನ ಹಾಡಿನಿಂದ ಸೈ ಅನಿಸಿಕೊಂಡರು. ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಕಾಣಸಿಗುತ್ತಾರೆ.
ಬಾರಕೂರು ITI ಯಲ್ಲಿ ದುಡಿಯುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಬೆಂಬಲಿಸಿ ಬೆನ್ನು ತಟ್ಟುವ ಮನೆಯವರಾದ, ಪತ್ನಿ ನಾಗರತ್ನ ಹಾಗೂ ಸಾನಿಧ್ಯ ಎನ್ನುವ ಮಗುವಿನೊಂದಿಗೆ ಸುಖಮಯ ಜೀವನ ನಡೆಸುತ್ತಿದ್ದಾರೆ. ಪತ್ನಿ ನಾಗರತ್ನ ಹೇರಾಡಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಹರೀಶ್ ಹೆಬ್ಬಾರ್ ಇನ್ನೂ ಎತ್ತರಕ್ಕೆ ಸಾಗಲಿ, ಅನೇಕ ಅನೇಕ ಪ್ರಶಸ್ತಿ ಪುರಸ್ಕಾರ ಸಿಗಲಿ, ಅವರಿಂದ ಜನತೆಗೆ ಒಳ್ಳೆಯದಾಗಲಿ...ಅವರ ಸಂಗೀತ ನಿರಂತರವಾಗಲಿ......