logo

Thulasi Naveen bags State Level Award

ತುಳಸೀ ನವೀನ್  ಅವರಿಗೆ ರಾಜ್ಯ ಮಟ್ಟದ " ಅಭಿರುಚಿ ಸಾಧನಾ ಶ್ರೀ" ಪ್ರಶಸ್ತಿ 

News n Pics Anand Kumar Barkur

ರಾಜ್ಯ ಮಟ್ಟದ " ಅಭಿರುಚಿ ಸಾಧನಾ ಶ್ರೀ" ಪ್ರಶಸ್ತಿ ಪಡೆದ ನಮ್ಮೂರು ಬಾರಕೂರಿನ ಹೆಮ್ಮೆಯ ಲೇಖಕಿ ಕವನಗಾರ್ತಿ ತುಳಸೀ ನವೀನ್ (ಸಿಂಧು ಬಾರ್ಗವ್ )ಅವರಿಗೆ ಅಭಿನಂದನೆಗಳು.

ಅಭಿರುಚಿ ಬಳಗ - ಅನುಭವಗಳ ಹಂಚಿಕೆ ವೇದಿಕೆ ಮೈಸೂರು ಇವರು ನಡೆಸಿದ ಕಲಾ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ "ಅಭಿರುಚಿ ಸಾಧನಾ ಶ್ರೀ "ಪ್ರಶಸ್ತಿ ನೀಡಿ ಗೌರವಿಸಲಾಯಿತು..

ಸ್ನೇಹಿತರಿಗೆ ತುಳಸೀ, ತವರೂರಿನಲ್ಲಿ ಮುದ್ದಿನ ರಾಧಿಕಾ, ಬರಹಗಾರ್ತಿಯಾಗಿ ಸಿಂಧು ಭಾರ್ಗವ್

ನಮ್ಮ ಬಾರಕೂರಿನ ಹೇರಾಡಿಯಲ್ಲಿ ಶ್ರೀಮತಿ ವಸಂತಿ ಭಟ್ ಹಾಗೂ ಬಾರಕೂರಿನ ಪ್ರಸಿದ್ಧ ಪಾಕತಜ್ಞರಾದ  ಚಂಡೆ ಶ್ರೀ ನರಸಿಂಹ ಭಟ್  ಅವರ ಎರಡನೇ ಪುತ್ರಿಯಾಗಿ ಜನಿಸಿದ ತುಳಸೀ ಭಟ್ ಅವರು ಪ್ರಾಥಮಿಕ ಶಿಕ್ಷಣವನ್ನುವನ್ನು ಹೇರಾಡಿಶಾಲೆಯಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣವನ್ನು N .J.C ಬಾರಕೂರಿನಲ್ಕಿ ಮುಗಿಸಿದರು..ನಂತರ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ &ಇಂಜಿನಿಯರಿಂಗ್ ಉಡುಪಿಯ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಡಿಯಾಳಿಯಲ್ಲಿ ಮುಗಿಸಿದರು..ಕಾಲೇಜು ಜೀವನವನ್ನು ಮುಗಿಸಿ ನವೀನ್ ಭಟ್ ಅವರನ್ನು ವಿವಾಹ ವಾಗಿ ಬೆಂಗಳೂರಿಗೆ ಬಂದು ನೆಲೆಸಿದರು..ಗ್ರಹಿಣಿಯಾದ ಇವರು ಬಿಡುವಿನ ಸಮಯದಲ್ಲಿ  ಬರೆಯುವುದನ್ನು ಹವ್ಯಾಸವಾಗಿ ಶುರುಮಾಡಿದರು.2012 ರಲ್ಲಿ ಅದಕ್ಕೆ ಪ್ರೇರಣೆ ಆಗಿದ್ದು  ಕನ್ನಡ ಬ್ಲಾಗ್ ಎನ್ನುವ ತಂಡ ಅದೊಂದು ಯುವ ಬರಹಗಾರರ ವೇದಿಕೆಯಾಗಿತ್ತು..ಕಳೆದ ಮೂರು ವರ್ಷಗಳಿಂದ ಯುಗಪುರುಷ ಕಿನ್ನಿಗೋಳಿ ಮಾಸ ಪತ್ರಿಕೆಯು ಇವರ ಲೇಖನಗಳನ್ನು ಕಥೆ ಗಳನ್ನು ಪ್ರಕಟಿಸುತ್ತಾ ಬಂದಿದೆ ಹಾಗೂ ಸಿಂಹನೋಟ  ಮಾಸ ಪತ್ರಿಕೆ ," ಸಂಪದ ಸಾಲು" ಮಾಸ ಪತ್ರಿಕೆಯಲ್ಲೂ ಪ್ರಕಟವಾಗಿವೆ ಹಾಗೂ ಕನ್ನಡ ಪ್ರಭ ದಲ್ಲಿ ವಿಶೇಷವಾಗಿ  ತಾಯಿ ಬಗ್ಗೆ ಬರೆದ ಲೇಖನ ಪ್ರಕಟಗೊಂಡಿತ್ತು..ಇನ್ನು ಆನ್ ಲೈನ್ ಪತ್ರಿಕೆ, ಬ್ಲಾಗ್ ಗಳಾದ ರೀಡೂಕನ್ನಡ ತಂಡ,ಪಂಜು ಪತ್ರಿಕೆಯಲ್ಲಿ ನೇಸರನ ಜಗಲಿಯಲ್ಲಿ ಬ್ಲಾಗ್ ಗಳಲ್ಲಿ ಲೇಖನಗಳು,ಕಾವ್ಯ-ಖಜಾನೆಯಲ್ಲಿ,ಹೊನಲು.ನೆಟ್ ನ್ಯೂಸ್ ಕನ್ನಡ ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.

ಇವರು ಬರೆದ "ಜೀವನದ ಸಂತೆಯಲಿ" ಎಂಬ ಕೃತಿಯು ಬಿಡುಗಡೆಯ ಹಂತದಲ್ಲಿದೆ.

ಮುಂದಿನ ದಿನಗಳಲ್ಲಿ ತುಳಸೀ ನವೀನ್ (ಸಿಂಧು ಭಾರ್ಗವ್) ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ..

ಅವರ ಕವನ ಓದಲು ಇಲ್ಲಿ ಕ್ಲಿಕ್ ಮಾಡಿ

Add comment