logo

Bhaskar Friends Simhasanagudde baggs the Sunil Trophy 2021

Pics credit: Anand Kumar Barkur &Suresh subhanu Barkur

Drone Video and Pics: Akshay Acharya, Pandeshwara

ಭಾಸ್ಕರ್ ಪ್ರೆಂಡ್ಸ್ ಬಾರಕೂರು ಸಿಂಹಾಸನ ಗುಡ್ಡೆ ತಂಡದ ಮಡಿಲಿಗೆ ಸುನಿಲ್ ಟ್ರೋಪಿ 2021🏆


ಸಂತೆಗುಡ್ಡೆ  ಕ್ರೀಡಾಂಗಣದಲ್ಲಿ ಜರುಗಿದ ಸುನಿಲ್ ಟ್ರೋಪಿ 2021 ಪೈನಲ್ ಪಂದ್ಯದಲ್ಲಿ ಬಾಸ್ಕರ್ ಪ್ರೆಂಡ್ಸ್ ಸಿಂಹಾಸನ ಗುಡ್ಡೆ ತಂಡವು ಇಂಡಿಯನ್ ಆರ್ಮಿ ಸಪೋರ್ಟರ್ಸ್ ಬೆಣ್ಣೆಕುದ್ರು ತಂಡವನ್ನು ಸೋಲಿಸಿ ಸುನಿಲ್ ಟ್ರೋಪಿ -2021🏆 ತನ್ನದಾಗಿಸಿ ಕೊಂಡಿತು.

ಅಭಿನಂದನೆಗಳು ವಿನ್ನರ್ಸ್ ಭಾಸ್ಕರ್ ಪ್ರೆಂಡ್ಸ್  ಸಿಂಹಾಸನ ಗುಡ್ಡೆ ಹಾಗೂ ರನ್ನರ್ಸ್ ಇಂಡಿಯನ್ ಆರ್ಮಿ ಸಪೋರ್ಟರ್ಸ್ ಬೆಣ್ಣೆಕುದ್ರು.

ಸಮಾರೋಪ ಸಮಾರಂಭಕ್ಕೆ ಮಖ್ಯ ಅಥಿತಿಯಾಗಿ ಆಗಮಿಸಿದ ಖ್ಯಾತ ಚಲನಚಿತ್ರ ,ಕಿರು ತೆರೆ ನಟ ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿಯವರು ಎಲ್ಲಾ ಕ್ರಿಕೆಟ್ ಆಟಗಾರರಿಗೆ ಶುಭ ಹಾರೈಸಿದರು ಅವರನ್ನು ಸ್ನೇಹ ಸ್ಪೋರ್ಟ್ಸ್ ಕ್ಲಬ್ ಹಾಗೂ ಸಂತೆಗುಡ್ಡೆ ಕ್ರಿಕೆಟ್ ತಂಡದ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.

ಕ್ರಿಕೆಟಿನ ಜೊತೆ ಜೊತೆಗೆ ಸಾಧಕರನ್ನು, ಸಮಾಜಕ್ಕಾಗಿ, ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಕಾರ್ಯಕ್ರಮಕ್ಕೆ  ಕಳೆ ಕೊಟ್ಟಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ  ದಿನಕರ ಪೂಜಾರಿ ಮತ್ತು ಸತೀಶ್ ಅವರನ್ನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯರಾದ ಶ್ರೀಯುತ ಕೂಸ ಕುಂದರ್ ಅವರನ್ನು, ಕ್ರೀಡಾ ಕ್ಷೇತ್ರದಲ್ಲಿ ಈ ಹುಡುಗಿ ಇನ್ನೂ ಎತ್ತರಕ್ಕೆ ಏರಿ ಬಾರಕೂರಿನ ಹೆಸರನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಿದ  ಕುಮಾರಿ ಕರಿಷ್ಮಾ, ಹಾಗೂ ನಮ್ಮೂರು ಬಾರ್ಕೂರು ಫೇಸ್ ಬುಕ್ ಗ್ರೂಪಿನ ಕಾರ್ಯನಿರ್ವಾಹಕರಾದ ಹಾಗೂ ಬಾರ್ಕುರ್ ಒನ್ ಲಾಯ್ನ್ ಆನಂದ್ ಕುಮಾರ್ ಬಾರ್ಕುರ್  ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಗೋಪಾಲ್ ನಾಯಕ್ ಶಿರೂರು ಇವರನ್ನು ಕಂಬಳ ಕ್ರೀಡೆಯಲ್ಲಿನ ಸಾಧನೆಗಾಗಿ ಮತ್ತು  ಸ್ವಯಂ ಸೇವಕರಾದ ನವೀನ್ ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ.ಶಾಂತರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಮಂಗಳೂರು ಮಾಜಿ ಕಾರ್ಪೊರೇಟರ್ ಸಮಾಜದಲ್ಲಿ ನೊಂದವರಿಗೆ ಧ್ವನಿಯಾಗುವ ಶ್ರೀಮತಿ ಪ್ರತಿಭಾ ಕುಳಾಯಿ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ್ ಸಿ ಕುಂದರ್ ಕೋಟ, ಚಲನಚಿತ್ರ ನಟ ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ,  ಶ್ರೀ ರಾಜೇಶ್ ಶೆಟ್ಟಿ ಬಿರ್ತಿ (ನಿರ್ದೇಶಕರು ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘ) ಬೆಂಗಳೂರು ಬಂಟರ ಸಂಘದ ಖಜಾಂಚಿಗಳಾದ ಶ್ರೀ ದೀಪಕ್ ಶೆಟ್ಟಿ ಉದ್ದಾಲ್ ಗುಡ್ಡೆ ಬಾರಕೂರು,ಶ್ರೀ ನಿತಿನ್ ನಾಯಕ್ ಅಂಕೋಲಾ (ಮಾಹಿತಿ ಥಾಣ ಯೂ. ಟ್ಯೂಬ್  ಚಾನಲ್,)ಶ್ರೀ ಗೋಪಿನಾಥ್ ಕಾಮತ್ (ಮಾಲಕರು ಚಿತ್ತಾರ ಕ್ಯಾಶೂ ಪ್ಯಾಕ್ಟರಿ ರಂಗನಕೆರೆ) ಶ್ರೀ ಮಹೇಶ್ ಉಡುಪ (ಮಾಲಕರು ಶ್ರೀ ಲಕ್ಷ್ಮೀ ಪೀಡ್ಸ್ & ಫಾರ್ಮ್ಸ್ ಮಂದಾರ್ತಿ) ಸ್ನೇಹ ಸ್ಪೋರ್ಟ್ಸ್  ಕ್ಲಬ್ ಪದಾಧಿಕಾರಿಗಳಾದ ಶ್ರೀ ದೇವದಾಸ್ ಹೊಸ್ಕೆರೆ, ಶ್ರೀ ಬಿ.ರಾಮಚಂದ್ರ ಕಾಮತ್ ಬಾರಕೂರು, ಶ್ರೀ ಪ್ರವೀಣ್ ಗಡಿಯಾರ್ ಬಾರಕೂರು, ಸಂತೆಗುಡ್ಡೆ ಕ್ರಿಕೆಟ್ ತಂಡದ ಅಧ್ಯಕ್ಷ ರಾದ ಶ್ರೀ ಆತ್ಮಜ್ ಶೆಟ್ಟಿ ಬಾರಕೂರು, ಶ್ರೀಪ್ರಶಾಂತ್ ಸುವರ್ಣ ಬಾರಕೂರು ಉಪಸ್ಥಿತರಿದ್ದರು)

Leave Your Comment