-Anand Kumar Barkur
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೂರಾಡಿ ಇವರ ವತಿಯಿಂದ 8ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ, ಆಗಮಿಸಿದ ಭಕ್ತಾಧಿಗಳಿಗೆ ಗಿಡಗಳನ್ನು ನೀಡುವುದರ ಮೂಲಕ ಮಾದರಿಯಾಗಿ ಆಚರಿಸಲಾಯಿತು. ಹಾಗೆಯೇ ಅನಾಥ ಗೋವುಗಳ ರಕ್ಷಣೆ ಮಾಡುತ್ತಿರುವ ನೀಲಾವರ ಗೋಶಾಲೆಗೆ ಹಸಿಹುಲ್ಲನ್ನು ಕಟಾವುಮಾಡಿ ಪೇಜಾವರ ವಿಶ್ವಪ್ರಸನ್ನ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೂರಾಡಿ ಗಣೇಶೋತ್ಸವದ ಸ್ಥಾಪಕರಾದ ಪ್ರಥ್ವೀರಾಜ್ ಶೆಟ್ಟಿ, ಬಾರಕೂರು ತಾಲೂಕು ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ನಲ್ಕುದ್ರು, ಶೇಖರ್ ಹೆಗ್ಡೆ, ಗಣೇಶ್ ಭಟ್, ಸಂತೋಷ್ ಕುಮಾರ್ ಶೆಟ್ಟಿ ದೈಹಿಕ ಶಿಕ್ಷಕರು, ಸಂತೋಷ್ ಶೆಟ್ಟಿ ಕೂರಾಡಿ, ಉಲ್ಲಾಸ್ ಅಮೀನ್, ಸಂದೀಪ್ ಅಮೀನ್, ರಾಮದಾಸ್ ಕೂರಾಡಿ, ಪ್ರದೀಪ್ ಮರಕಾಲ, ಪ್ರಸಾದ್ ಆಚಾರ್ಯ, ಸುಧಾಕರ್ ಆಚಾರ್ಯ ಶಿಕ್ಷಕರು, ಪ್ರವೀಣ್ ಆಚಾರ್ಯ, ಕಿರಣ್ ಸಾಲ್ಯಾನ್, ರಾಜೇಶ್ ಶೆಟ್ಟಿ ಲಕ್ಷ್ಮೀ, ಸುರೇಶ್ ಶೆಟ್ಟಿ, ರಾಘು ಶೆಟ್ಟಿ ಕೂರಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕೂರಾಡಿಯ ಖ್ಯಾತ ವೈದ್ಯ ಡಾ.ಸುರೇಶ್ ಶೆಟ್ಟಿ 200 ಗಿಡಗಳನ್ನು ಗಣೇಶೋತ್ಸವ ಸಮಿತಿಗೆ ನೀಡಿದರು.