logo

Green Barkur Initiative

*ರೋಟರಿ ಕ್ಲಬ್ ಬ್ರಹ್ಮಾವರ*

*ರೋಟರಿ ಕ್ಲಬ್ ಬಾರ್ಕೂರು*

*ನಮ್ಮೂರು ಬಾರ್ಕೂರು ಫೇಸ್ಬುಕ್ ಫ್ರೆಂಡ್ಸ್*

*ಶ್ರೀ ವೀರಮಾರುತಿ ಬಾರ್ಕೂರು*

ಇವರ ಜಂಟಿ ಆಶ್ರಯದಲ್ಲಿ 

*ಟೀಮ್ ಅಭಿಮತ*

ಇವರ ಸಹಯೋಗದೊಂದಿಗೆ

ಹಸಿರು ಬಾರ್ಕೂರು ಹಾಗೂ ಔಷಧೀಯ ವನ ನಿರ್ಮಾಣ


ದಿನಾಂಕ 15-08-2020ನೇ ಶನಿವಾರ ಬೆಳಿಗ್ಗೆ 10.30ಕ್ಕೆ,  ಹನೇಹಳ್ಳಿ ಶಾಲೆ ಬಳಿ,  ಬಾರ್ಕೂರು

ಔಷಧೀಯ ವನ  ನಿರ್ಮಾಣಕ್ಕಾಗಿ  ಸಂಕಮ್ಮ ಶಾಲೆಯ ನಂತರ ಹನೇಹಳ್ಳಿ ಶಾಲೆಯ ಹತ್ತಿರ  ರಸ್ತೆ  ಬದಿಯಲ್ಲಿ  ಜಾಗ ಗುರುತಿಸಲಾಗಿದೆ.

ಖ್ಯಾತ  ಔಷಧೀಯ ವನ  ನಿರ್ಮಾತ ಮಂಜುನಾಥ್ ಗೋಳಿಯವರು  ಸ್ಥಳಕ್ಕೆ  ಆಗಮಿಸಿ  ಸುಮಾರು  50 ಬೇರೆ ಬೇರೆ ಜಾತೀಯ ಔಷಧೀಯ ಗಿಡಗಳನ್ನು  ನಡುವ  ಬಗ್ಗೆ  ಮಾಹಿತಿ ನೀಡಿದ್ದಾರೆ.ಆದರೆ ಒಂದು ವರ್ಷದ ಮಟ್ಟಿಗೆ  ತಡೆಬೇಲಿ ಹಾಗೂ ನೀರಿನ ವ್ಯವಸ್ಥೆ ಮಾಡಲೇಬೇಕು  ಎಂದು ತಿಳಿಸಿರುತ್ತಾರೆ. ಮರದ ಕಂಬ ಹಾಗೂ ಬಲೆ ಬಳಸಿ  ಬೇಲಿ ಮಾಡುವುದಾಗಿ ಆಲೋಚಿಸಿದ್ದೇವೆ. ನೀರು ಬಿಡುವ  ಜವಾಬ್ದಾರಿ  ವೀರ ಮಾರುತಿ ಸ್ವಯಂ ಸೇವಕರು  ತೆಗೆದುಕೊಂಡಿದ್ದಾರೆ. ದಾನಿಗಳು ಸಹಕರಿಸಿದರೆ ಸ್ಥಳದಲ್ಲಿ  4 ಸಿಮೆಂಟ್ ಬೆಂಚುಗಳನ್ನು  ಹಾಕುವ ಆಲೋಚನೆ ಇದೆ.

ಆ  ದಿನದ   ಕಾರ್ಯಕ್ರಮದಲ್ಲಿ  ಔಷಧೀಯ ವನದ ಉದ್ಘಾಟನೆ ಹಾಗೂ  ಬಾರ್ಕೂರಿನ ಜನತೆಗೆ  ಸುಮಾರು 500 ಒಳ್ಳೆ ಜಾತಿಯ ಲಕ್ಷ್ಮಣ ಫಲದಂತಹ  ಗಿಡಗಳನ್ನು  ಹಂಚುವುದಾಗಿ ತೀರ್ಮಾನಿಸಿದ್ದೇವೆ. ಇದರಿಂದ  ಬಾರ್ಕೂರು ಪರಿಸರದಲ್ಲಿ ಸುಮಾರು  500 ಮರಗಳನ್ನು  ಬೆಳೆಸಿದಂತಾಗುತ್ತದೆ. ಈ ಕಾರ್ಯಕ್ರಮಕ್ಕೆ  ನಿಮ್ಮೆಲ್ಲರ  ಸಲಹೆ  ಸಹಕಾರ ನಿರೀಕ್ಷಿಸುತ್ತೇವೆ.

ಧನ್ಯವಾದಗಳು.

Add comment