logo

Invitation for Shivarathri at Panchalingeshwara Temple

-Anand Kumar Barkur

ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು. 

ಮಹಾಶಿವರಾತ್ರಿ ಉತ್ಸವದ ಆಮಂತ್ರಣ

ಶ್ರೀ ಕ್ಷೇತ್ರದಲ್ಲಿ ವಾಡಿಕೆಯಂತೆ ಜರಗುವ ಮಹಾ ಶಿವರಾತ್ರಿ ಉತ್ಸವವು ದಿನಾಂಕ 21-02-2020 ಶುಕ್ರವಾರ ದಂದು ಜರಗಲಿರುವುದು.ಭಕ್ತಾಧಿಗಳು ಈ ಪರ್ವ ದಿನದಂದು ಶ್ರೀ ದೇವರ ದರ್ಶನ ಪಡೆದು ಯಥಾ ಶಕ್ತಿ ಸೇವೆಗಳನ್ನು ಸಲ್ಲಿಸಿ ಶಿವಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ.

ಕಾರ್ಯಕ್ರಮಗಳು: ಬೆಳಿಗ್ಗೆ 9.30ರಿಂದ ಪಂಚಾ ಮೃತ ಪೂರ್ವಕ ಶತರುದ್ರಾಭಿಷೇಕ-ಮಹಪೂಜೆ-ಬಲಿ-ಪ್ರಸಾದ ವಿತರಣೆ (ಸೇವಕರ್ತರು: ದಿ. ಚೌಳಿ ಕೇರಿ ನಾರಾಯಣ ಶೇರಿಗಾರರ ಸ್ಮರಣಾರ್ಥ ಮಗಳು ಶ್ರೀಮತಿ ಕಲ್ಯಾಣಿ ದೇವಾಡಿಗ)

11.30 ರಿಂದ ಶ್ರೀ ಲಲಿತಾ ಸಹಸ್ರನಾಮ ಪಠಣ (ಶ್ರೀ ಭುವನೇಶ್ವರಿ ಮಹಿಳಾ ಬಳಗದವರಿಂದ..

ಸಂಜೆ 5 ರಿಂದ ಭಜನೆ: ಶ್ರೀ ಭುವನೇಶ್ವರಿ ಮಹಿಳಾ ಭಜನಾ ಮಂಡಳಿ, 

ಶ್ರೀ ಕುಲಮಹಾಸ್ತ್ರೀ ಅಮ್ಮನವರ ಭಜನಾ ಮಂಡಳಿ ಬೆಣ್ಣೆಕುದ್ರು.("ರಾತ್ರಿ 8 ರಿಂದ 9.30) ಮತ್ತು ಸಾರ್ವಜನಿಕ ರಿಂದ (ಸೇವೆ : ಶ್ರೀ ಧನಂಜಯ ಕಚ್ಚೂರು).

7 ಗಂಟೆಗೆ ಪ್ರದೋಷ ಪೂಜೆ

8 ಗಂಟೆಗೆ ನಗರೋತ್ಸವ- ಕಲ್ಲುಚಪ್ಪರದಲ್ಲಿ ಕಟ್ಟೆ ಪೂಜೆ

ರಾತ್ರಿ 10 ಗಂಟೆಗೆ ರಂಗ ಪೂಜೆ-ಬಲಿ-ಪ್ರಸಾದ ವಿತರಣೆ(ಶ್ರೀ ಧನಂಜಯ ಮತ್ತು ಮನೆಯವರು ಕಚ್ಚೂರು ಬಾರಕೂರು)

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ರಿಂದ ರಾಜೇಶ್ ಶಾನ್ ಭಾಗ್ ನೇತೃತ್ವದ ಪಿ.ಕಾಳಿಂಗ ರಾವ್ ಸ್ಮತಿ ಮೆಲೋಡಿಸ್ ತಂಡದವರಿಂದ ಭಕ್ತಿ,ಭಾವ,ಜಾನಪದ ಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ಪ್ರಾಯೋಜಕರು: ಶ್ರೀಮಹಾಗಣಪತಿ ಸೇವಾ ಸಮಿತಿ ಹೊಸ್ಕೆರೆ ಬಾರಕೂರು..

ವಿದ್ಯುದ್ವಿಪಾಲಂಕರ ಸೇವೆ: ಶ್ರೀ ಪ್ರಶಾಂತ್ ಕಚ್ಚೂರು (ಶ್ರೀ ಮಹಾಗಣಪತಿ ಸೌಂಡ್ಸ್ &ಲೈಟ್ಸ್ ಬಾರಕೂರು)

ದಿನಾಂಕ 23-02-2020 ಆದಿತ್ಯವಾರದಂದು ಶ್ರೀ ಭುವನೇಶ್ವರಿ ಮಹಿಳಾ ಭಜನಾ ಮಂಡಳಿಯ 16ನೇ ವಾರ್ಷಿಕೋತ್ಸವದ ಪ್ರಯುಕ್ತ

*ಉದಯಾಸ್ತಮಾನ ಭಜನಾ * ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ 

ಪಿ.ಕಾಳಿಂಗರಾವ್ ಸ್ಮ್ರತಿ ಮೆಲೋಡೀಸ್ ರಿ ತಂಡದಿಂದ ಹನ್ನೆರಡು ಹೊಸ ಹಾಡುಗಾರರು ಮಹಾಶಿವರಾತ್ರಿ ಹಬ್ಬದ ವೇದಿಕೆಯಲ್ಲಿ ತಮ್ಮ ಸುಮಧುರ ಕಂಠದಿಂದ ನಿಮ್ಮ ಮನರಂಜಿಸಲು,  ಗುರುಗಳಾದ ರಾಜೇಶ್ ಶ್ಯಾನುಭೋಗ್ ಮತ್ತು ಸಹನಾ ನಾಯಕ್ ಅವರ ಮಾರ್ಗದರ್ಶನದಲ್ಲಿ .ಎಲ್ಲರಿಗು ಸ್ವಾಗತ .ಬನ್ನಿ ಹೊಸಪ್ರತಿಭಗಳಿಗೆ ಮತ್ತು ಅನುಭವಿ ಕಲಾವಿದರಿಗೆ ಪ್ರೋತ್ಸಾಹ ನೀಡಿ 

ಪ್ರತಿಭೆಗಳು 

ತನುಷಾ ಕುಂದರ್ ಬ್ರಹ್ಮಾವರ

ಮಂಜುಳಾ ಶೆಟ್ಟಿ ಯೆಡ್ತಾಡಿ

ಶ್ರಾವ್ಯ ಮಂದಾರ್ತಿ

ಅನನ್ಯಾ ಬಾರ್ಕೂರು

ತ್ರಿಷಾ ಬಾರ್ಕೂರು

ಪ್ರಭಾ ಬ್ರಹ್ಮಾವರ 

ಸ್ಮಿತಾ ಬಾರ್ಕೂರು

ಸಾಗರಿಕಾ ಬ್ರಹ್ಮಾವರ

ಜ್ನಾನೇಶ ಚೌಳಿಕೆರೆ

ಆತ್ಮಿಕಾ ಕೊಕ್ಕರ್ಣೆ

ಶ್ರೇಷ್ಠ ಬಾರ್ಕೂರು 

ನಿಹಾರಿಕಾ ಬಾರ್ಕೂರು 


Add comment