logo

Mahashivaraatri celebrations at Barkur

-Anand Kumar Barkur 

ಬಾರಕೂರು ಹನೆಹಳ್ಳಿ ಶಿಕ್ಷಕ ದಂಪತಿಗಳಾದ ಹಿಮಕರ ಶೆಟ್ಟಿ ಹಾಗೂ ವನಜ ಶೆಟ್ಟಿ ಅವರ ಸುಪುತ್ರ ದೀಪಕ್ ಶೆಟ್ಟಿ ಅವರು ಇಂದು ಬಾರಕೂರು ಶ್ರೀ ಬಟ್ಟೆ ವಿನಾಯಕ  ದೇವಸ್ಥಾನದ ಗರ್ಭ ಗುಡಿ ಪ್ರವೇಶಿಸಿಸುವ ಮೆಟ್ಟಿಲು ಹಾಗೂ ಆನೆ ಕಲ್ಲುಗಳಿಗೆ ಹಿತ್ತಾಳೆ ಹೊದಿಕೆ ಸಮರ್ಪಣೆ ಜೊತೆಗೆ 3 ಮೂಡುಗಣಪತಿ ಪೂಜೆ ಸೇವೆ ಸಲ್ಲಿಸಿದರು.

ಈ ಹಿತ್ತಾಳೆ ಹೊದಿಕೆಯನ್ನು ಪಾರಂಪರಿಕ ಆಭರಣ ತಯಾರಿಕೆಯಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿರುವ ಶ್ರೀಕಾಂತ್ ಆಚಾರ್  ಬಾರಕೂರು ಅವರು ನಿರ್ಮಿಸಿರುತ್ತಾರೆ..

ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷಾಲಂಕಾರಗೊಂಡಿರುವ ಪುರಾಣ ಪ್ರಸಿದ್ಧ  ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಪಂಚಲಿಂಗೇಶ್ವರ ,ಶ್ರೀ ಭುವನೇಶ್ವರಿ ದೇವಿ,ಶ್ರೀ ಮಹಾಲಿಂಗೇಶ್ವರ ದೇವರು.

ಹೊಸ್ಕೆರೆ ಶ್ರೀ ಮಹಾಗಣಪತಿ ಸೇವಾ ಸಂಘದವರ ಪ್ರಾಯೋಜಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಹಾ ಶಿವರಾತ್ರಿ ಯ ಸಂದರ್ಭದಲ್ಲಿ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬಂದಿರುವ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಇವರ ಪ್ರಾಯೋಜಕತ್ವದಲ್ಲಿ ಇಂದು ಭಕ್ತಿ, ಭಾವ, ಜಾನಪದ ಗೀತೆಯನ್ನು ಹಾಡಿ ನೆರೆದ ಅಪಾರ ಸಂಖ್ಯೆಯ ಪ್ರೇಕ್ಷಕರ ಮನರಂಜಿಸಿದ ರಾಜೇಶ್ ಶಾನ್ ಭಾಗ್ ಬಾರಕೂರು ನೇತೃತ್ವದ ಪಿ.ಕಾಳಿಂಗ ರಾವ್ ಸ್ಮತಿ ಮೇಲೋಡಿಸ್ ತಂಡದ ರಾಜೇಶ್ ಶಾನ್ ಭಾಗ್ ಹಾಗೂ ಸಹನಾ ನಾಯಕ್ ಕೊಕ್ಕರ್ಣೇ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯವತಿಯಿಂದ ಗೌರವಿಸಲಾಯಿತು.ಇಂದು ರಾಜೇಶ್ ಶಾನ್ ಭಾಗ್ ಬಾರಕೂರು ಅವರು 12 ಹೊಸ ಪ್ರತಿಭೆಗಳಿಗೆ ತರಭೇತಿ ನೀಡಿ ಇಂದಿನ ವೇದಿಕೆಯಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ.12 ಉದಯೋನ್ಮುಖ ಗಾಯಕರು ಬಹಳ ಉತ್ತಮವಾಗಿ ಹಾಡಿ  ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜೇಶ್ ಶಾನ್ ಭಾಗ್ ಹಾಗೂ ಸಹನಾ ನಾಯಕ್ ಕೊಕ್ಕರ್ಣೇ ಅವರ ತರಬೇತಿಯಲ್ಲಿ ಇನ್ನಷ್ಟು ಸಂಗೀತ ಪ್ರತಿಭೆಗಳು ಮೂಡಿ ಬರಲಿ ಎಂದು ಹಾರೈಸುತ್ತೇವೆ.

ಹಾಗೂ ಕಳೆದ ಹಲವಾರು ವರ್ಷಗಳಿಂದ ಮಹಾಶಿವರಾತ್ರಿ ಹಾಗೂ ಬಾರಕೂರು ರಥೋತ್ಸವದ ಸಂದರ್ಭದಲ್ಲಿ  ಯಾವುದೇ ಫಲಾಪೇಕ್ಷೆ ಇಲ್ಲದೆ ಕಣ್ಮನ   ಸೆಳೆಯುವ ವಿದ್ಯುದ್ವಿಪಾಲಂಕರ ಮಾಡುತ್ತಿರುವ ನಮ್ಮೂರು ಬಾರಕೂರಿನ ದೀಪಾಲಂಕಾರ ರತ್ನ  ಶ್ರೀಮಹಾಗಣಪತಿ ಸೌಂಡ್ಸ್ & ಲೈಟಿಂಗ್ಸ್ ನ ಪ್ರಶಾಂತ್ ಪೂಜಾರಿ ಕಚ್ಚೂರು ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಹಾಗೂ ಇಂದು ಭಜನೆ ಸೇವೆಯನ್ನು ನೀಡಿದ ಬೆಣ್ಣೆಕುದ್ರು ಶ್ರೀಕುಲಮಹಾಸ್ತ್ರೀ ಅಮ್ಮನವರ ಭಜನಾ ತಂಡವನ್ನು ಗೌರವಿಸಲಾಯಿತು..

Add comment