logo

Mangalothsava at Kachur Durgaparameshwari Temple

News, Pics and Videos : Anand Kumar Barkur

ಬಾರಕೂರು ಕಚ್ಚೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ 11ನೇ ಪ್ರತಿಷ್ಟಾ ವರ್ಧಯಂತ್ಯುತ್ಸವ ದಿನಾಂಕ 30-01-2020 ರಿಂದ 2-02-2020 ರ ತನಕ ಬಹಳ ಸಂಭ್ರಮ ದಿಂದ ಜರುಗಿತು..ಭಜನಾ ಮಂಗಲೋತ್ಸವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಕಚ್ಚೂರು, ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಗಾಂಧಿ ನಗರ ಬೈಕಾಡಿ, ಶ್ರೀ ಕುಲಮಹಾಸ್ತ್ರೀ ಅಮ್ಮನವರ ಭಜನಾ ಮಂಡಳಿ ಬೆಣ್ಣೆಕುದ್ರು ಬಾರಕೂರು ಭಾಗವಹಿಸಿದ್ದರು..11ನೇ ಪ್ರತಿಷ್ಟಾ ವರ್ಧಯಂತ್ಯುತ್ಸವದ ಪ್ರಯುಕ್ತ ಕೋಟ ಶ್ರೀ ಕೃಷ್ಣ ಸೋಮಯಾಜಿ ಇವರ ನೇತೃತ್ವದಲ್ಲಿ ದುರ್ಗಾಯಾಗ, ಪೂರ್ಣಾಹುತಿ, ಕಲಶಾಭಿಷೇಕ, ಬ್ರಹ್ಮ ಕುಂಬಾಭಿಷೇಕ, ಹಾಗೂ ಅನ್ನ ಸಂತರ್ಪಣೆ ಸೇವೆ ಜರುಗಿತು...(ಅನ್ನ ಸಂತರ್ಪಣೆ ಸೇವಾ ಕರ್ತರು: ಶ್ರೀಮತಿ ಯಶೋಧ ಮತ್ತು ಮಕ್ಕಳು ಕಚ್ಚೂರು ಬಾರಕೂರು)

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಗಣೇಶ್ ರಾವ್ ಬಾರಕೂರು ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾಪರಮೇಶ್ವರಿ ಮಕ್ಕಳ ಯಕ್ಷಗಾನ ಮಂಡಳಿ ಕಚ್ಚೂರು -ಬಾರಕೂರು ಇವರಿಂದ ಯಕ್ಷಗುರು ಶ್ರೀ ಮಂಜುನಾಥ ಕುಲಾಲ್ ರವರ ನೇತೃತ್ವದಲ್ಲಿ ಹಾಗೂ ಬಾರಕೂರಿನ ಪ್ರಸಿದ್ಧ ಭಾಗವತರು ಪ್ರಸ್ತುತ ಗೋಳಿಗರಡಿ ಮೇಳದಲ್ಲಿ  ಪ್ರಧಾನ ಭಾಗವತರಾಗಿರುವ ಶ್ರೀ ಸುರೇಶ್ ರಾವ್ ಇವರ ಯಕ್ಷ ಸಾರಥ್ಯ ದಲ್ಲಿ ಮಕ್ಕಳ ಯಕ್ಷಗಾನ ವೀರಮಣಿ ಕಾಳಗ ಜರುಗಿತು.

ಮಧುಸೂಧನ್ ಕಚ್ಚೂರು ಅವರು ಬಹಳ ಪರಿಶ್ರಮ ಪಟ್ಟು ಕಚ್ಚೂರು ಸುತ್ತಮುತ್ತಲಿನ ಚಿಕ್ಕ ಮಕ್ಕಳನ್ನು ಒಗ್ಗೂಡಿಸಿ ಯಕ್ಷಗಾನ ತರಬೇತಿ ನೀಡಿ ಮಕ್ಕಳಿಗೆ ಕಲಿಕೆಯ ಜೊತೆಗೆ ಯಕ್ಷಗಾನ ಕಲೆಯತ್ತ ಒಲವುಮೂಡಿಸುತ್ತಿದ್ದಾರೆ.

Leave Your Comment