logo

New state of the art Gym at Barkur

A new fully equipped, state of the art Gymnasium, J.P.Gym, owned by Shri Manjappa Poojari will be inaugurated at Guru Complex, at Car Street Barkur. 

ಬಾರಕೂರು ಶ್ರೀಯುತ ಮಂಜಪ್ಪ ಪೂಜಾರಿ ಮಾಲೀಕತ್ವದ ಅತ್ಯಾಧುನಿಕ ಉಪಕರಣಗಳಿಂದ ಕೂಡಿದ ಸುಸಜ್ಜಿತ ಜೆ.ಪಿ (J P) ಜಿಮ್ ನಾಳೆ, 15.01.2020ರಂದು ಬಾರಕೂರು ರಥ ಬೀದಿಯಲ್ಲಿ ರುವ  ಗುರು ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಳ್ಳಲಿದೆ.

ವ್ಯಾಯಾಮ ಎಂದರೇನು? 

ಊಟ ನಿದ್ರೆ ವ್ಯಾಯಾಮ ಇವುಗಳಲ್ಲಿ ನಿಯಮ ಪಾಲಿಸದ ವ್ಯಕ್ತಿ ತನ್ನ ದೇಹವೆಂಬ ಸೌದವನ್ನು ನಿಭಾಯಿಸಲಾರ.

?ಯಾವುದೇ ವ್ಯಾಯಾಮ ಮತ್ತು ಕ್ರೀಡೆಗೆ ತೊಡಗುವ ಮುನ್ನ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅಗತ್ಯ, ಅದರಿಂದ ವ್ಯಾಯಾಮದ ಫಲವೂ ಲಭಿಸುತ್ತದೆ.ಇಲ್ಲವಾದರೆ ಕಸರತ್ತು ನೀರಿನಲ್ಲಿ ಹೋಮ ಮಾಡಿದಂತೆ.

?1).ಬೆಳಿಗ್ಗೆ ಎದ್ದ ತಕ್ಷಣ ಮಲ ಮೂತ್ರ ವಿಸರ್ಜನೆ ಮಾಡುವುದು.

?2).ಬಾಯಿಯನ್ನು ತೊಳೆಯದೇ ಅಥವ ಹಲ್ಲನ್ನು ಉಜ್ಜದೆಯೇ 2 ಲೋಟದಷ್ಟು ನೀರು ಕುಡಿಯುವುದು. ಇದರಿಂದ ನಿಮ್ಮ ಬಾಯಿಯಲ್ಲಿ ರಾತ್ರಿಯಿಂದ ಉತ್ಪತ್ತಿಯಾದ ಲಾಲಾರಸವು ನಿಮ್ಮ ಶರೀರದೊಳಗೆ ಸೆರುವುದರಿಂದ ನಿಮಗೆ ತಿಳಿಯದೆಯೇ ಹಲವಾರು ರೋಗಗಳು ಗುಣಮುಖವಾಗುವುದು.

?3).ನಂತರ ಬಾಯಿಯನ್ನು ಸ್ವಚ್ಚಗೊಳಿಸಿ,ಸೋಪಿನಿಂದ ಮುಖವನ್ನು ತೊಳೆಯುವುದರಿಂದ ವ್ಯಾಯಾಮ ಮಾಡಲು ಉತ್ಸಾಹ ಬರುತ್ತದೆ.

?4).ನೀರು ಕುಡಿದು ನಂತರ ವ್ಯಾಯಾಮ ಪ್ರಾರಂಭಿಸುವುದರಿಂದ ಅನ್ನನಾಳ,ಜಠರ ಮತ್ತು ಕರಳನ್ನು ಸ್ವಚ್ಚಗೊಳಿಸುತ್ತದೆ ಹಾಗೂ ಅಲ್ಲಿನ ಕಲ್ಮಷವನ್ನು ಹೊರಹಾಕಲು ಸಹಕರಿಸುತ್ತದೆ.

?5).ದೇಹಕ್ಕೆ ಬಿಸಿ ಮುಟ್ಟಿಸುವ ಚಟುವಟಿಕೆಗಳಾದ ಲಘು ವ್ಯಾಯಾಮವನ್ನು ಮಾಡದ ಹೊರತು ಭಾರವಾದ ವಸ್ತುವನ್ನು ಎತ್ತುವುದೋ, ವೇಗವಾಗಿ ಓಡುವುದೋ ಅಥವಾ ನೇರವಾಗಿ ಕ್ರೀಡೆಗಳಲ್ಲಿ ತೊಡಗಲು ಪ್ರಯತ್ನಿಸಬಾರದು.

?6).ಉಸಿರಾಟ ಸರಾಗವಾಗಿ ನಡೆಯುತ್ತಿರಬೇಕು.ಎಷ್ಟೇ ಕಷ್ಟವೆನಿಸಿದರೂ ಬಾಯಿಯಲ್ಲಿ ಉಸಿರಾಟ ನಡೆಸಬಾರದು.

?7).ವ್ಯಾಯಾಮ ಮುಗಿಸಿದ ಕೂಡಲೇ ಸ್ನಾನ ಮಾಡಬಾರದು.ತಣ್ಣೀರಿನ ಸ್ನಾನವಾದರೆ ಕನಿಷ್ಟ 45 ನಿಮಿಷ ಹಾಗು ಬಿಸಿ ನೀರಿನ ಸ್ನಾನವಾದರೆ ಕನಿಷ್ಟ 30 ನಿಮಿಷಗಳ ನಂತರ ಸ್ನಾನ ಮಾಡಬೇಕು.

?8).ಸ್ನಾನವಾದ ನಂತರ ವ್ಯಾಯಾಮ ಮಾಡುವ ರೂಡಿ ಇದ್ದವರು ದೇಹದ ಬಿಸಿ ಸಹಜ ಸ್ಥಿತಗೆ ಬಂದ ನಂತರ ಅಭ್ಯಾಸಕ್ಕೆ ತೊಡಗಬೇಕು.

?9).ಎರಡು ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ಸುತ್ತಾಡಿ ಬಂದು ಆಯಾಸದ ಸ್ಥಿತಿಯಲ್ಲಿ ವ್ಯಾಯಾಮ ಅಭ್ಯಾಸಕ್ಕೆ ತೊಡಗಬಾರದು.

?10).ಸಂಜೆಯ ಸಮಯದಲ್ಲಿ ವ್ಯಾಯಾಮ ಮಾಡುವವರು ಊಟವಾದ ಕನಿಷ್ಟ 3 ಗಂಟೆ ನಂತರ ವ್ಯಾಯಾಮ ಅಭ್ಯಾಸಕ್ಕೆ ತೊಡಗಬೇಕು.

?11).ಸಡಿಲ ಮತ್ತು ದೇಹಕ್ಕೆ ಹಿತವೆನಿಸುವ ಉಡುಪು ಧರಿಸಿದರೆ ಅಭ್ಯಾಸಕ್ಕೆ ಉತ್ತಮ.

?12).ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ನಿಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳಿ.

??ಭಾರತೀಯರೆಲ್ಲರೂ ವ್ಯಾಯಾಮ,ಯೋಗ,ಜಿಮ್,ವಾಕಿಂಗ್ ಅಥವಾ ಯಾವುದಾದರೊಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯವಂತರಾಗಿ ಬಾಳಬೇಕೆನ್ನುವುದು ನಮ್ಮ ಹೆಬ್ಬಯಕೆ.??

-ಆನಂದ್ ಕುಮಾರ್ ಬಾರಕೂರು.

Add comment