logo

Shri Swadeshi Ayurveda Barkur opens new outlet at Saligrama

-Anand  Kumar Barkur

ಕಳೆದ 5 ವರ್ಷಗಳಿಂದ ಬಾರ್ಕೂರು ರಥಬೀದಿಯಲ್ಲಿಯಲ್ಲಿರುವ ಶ್ರೀ ಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಗಣೇಶ್ ಶೆಟ್ಟಿ ಬಿ. ಇವರ ಮಾಲೀಕತ್ವದ ಶ್ರೀ ಸ್ವದೇಶಿ ಆಯುರ್ವೇದ ಬಾರ್ಕೂರು ಇದರ ನೂತನ ಶಾಖೆ ಶ್ರೀ ಸುರೇಶ್ ಶೆಟ್ಟಿ ಹಾಗೂ ಸುದರ್ಶನ್ ಇವರ ಪಾಲುದಾರಿಕೆಯಲ್ಲಿ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ಬಳಿ ದಿನಾಂಕ 25-08-2020 ಸೋಮವಾರದಂದು ಕಾರ್ಯಾರಂಭ ಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಬಿ.ಶಾಂತರಾಮ ಶೆಟ್ಟಿ ಬಾರ್ಕೂರು (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ಶ್ರೀ ಚಂದ್ರಶೇಖರ್ ಕಾರಂತ್(ಉದ್ಯಮಿಗಳು, ಶ್ರೀ ಏಕದಂತ ಎಂಟರ್ಪ್ರೈಸ್ ಸಾಲಿಗ್ರಾಮ), ಶ್ರೀ ಅನಂತ ಪದ್ಮನಾಭ ಐತಾಳ್ (ಆಡಳಿತ ಮುಕ್ತೇಸರರು ಶ್ರೀಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ), ಶ್ರೀ ವಸಂತ ಗಿಳಿಯಾರ್ (ಪತ್ರಕರ್ತರು), ಶ್ರೀ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ (ಮಾಜಿ ಅಧ್ಯಕ್ಷರು ಬಿಲ್ಲಾಡಿ ಗ್ರಾಮ ಪಂಚಾಯತ್), ಡಾ. ವಾಣಿಶ್ರೀ ಐತಾಳ್,  ಸಾಲಿಗ್ರಾಮ,  ಶ್ರೀ ಅಭಿಜಿತ್ ಪಾಂಡೇಶ್ವರ್,(ನಿರೂಪಕರು), ಶ್ರೀ ಗಣೇಶ್ ಶೆಟ್ಟಿ ಬಿ*(ಪ್ರೋ. ಶ್ರೀ ಸ್ವದೇಶಿ ಆಯುರ್ವೇದ ಬಾರ್ಕೂರು) ಹಾಗೂ ಪಾಲುದಾರರಾದ ಶ್ರೀ ಸುರೇಶ್ ಶೆಟ್ಟಿ, ಶ್ರೀ ಸುದರ್ಶನ್ ಉಪಸ್ಥಿತರಿದ್ದರು.

ಗ್ರಾಹಕರು ಎಂದಿನಂತೆ ಪ್ರೋತ್ಸಾಹ, ಸಹಕಾರ ನೀಡಬೇಕಾಗಿ ವಿನಂತಿಸುತ್ತೇವೆ.

ಶ್ರೀ ಸ್ವದೇಶಿ ಆಯುರ್ವೇದ ಸಾಲಿಗ್ರಾಮ.

ಸ್ವದೇಶಿ ಉತ್ಪನ್ನಗಳನ್ನು ಬಳಸಿ,ದೇಶದ ಆರ್ಥಿಕತೆಯನ್ನು   ಬಲಪಡಿಸಿ.

Add comment