logo

Achievers felicitated at the 165th Birthday Celebration of Shri Narayana Guru

Achievers felicitated at the 165th Birthday Celebration of Shri Narayana Guru at Barkur


ಬಾರಕೂರ ಬಿಲ್ಲವ ಸೇವಾ ಸಂಘ (ರಿ)ಶಿವಗಿರಿ  ಕ್ಷೇತ್ರ  ಬಾರಕೂರು ಇವರ ಆಶ್ರಯದಲ್ಲಿ ...ದಿನಾಂಕ 20-10-19 ಭಾನುವಾರ ದಂದು ಬಾರಕೂರು ಶಿವಗಿರಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆ ಹಾಗೂ ಸಾಧಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಜರುಗಿತು.

ಆಶೀರ್ವಚನ ನೀಡಿದ ಕಾರ್ಕಳ ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಕ್ಕಳನ್ನು ವಿದ್ಯಾವಂತರು ,ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿ ಹೆತ್ತವರ ಮೇಲಿದೆ ,ಹೆತ್ತವರನ್ನು ಗುರುಹಿರಿಯರನ್ನು ಸಮಾಜವನ್ನು ವಿದ್ಯಾಭ್ಯಾಸಕ್ಕೆ ಸಹಕರಿಸಿದವರನ್ನು ಎಂದಿಗೂ ಮರೆಯ ಬಾರದು..ಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತ ಮನುಕುಲದ ಉನ್ನತಿಗೆ ಪ್ರೇರಣೆಯಾಗಿದೆ,ಅವರ ಚಿಂತನೆಗಳು ಸುದೀರ್ಘ ಹಾಗೂ ಶಾಶ್ವತವಾದುದು ಎಂದು ಹೇಳಿದರು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಶ್ರೀ ಬಿ.ಎನ್.ಶಂಕರ ಪೂಜಾರಿ , ಉಡುಪಿ ತಾಲೂಕ್ ಪಂಚಾಯತ್ ಅಧ್ಯಕ್ಷೆ ನೀತಾಗುರುರಾಜ್ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀ ಕೊರಗ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಯೋಧರಾದ ಶ್ರೀ ಕೃಷ್ಣ ಪೂಜಾರಿ ,ಹಾಗೂ ದಿನಕರ ಪೂಜಾರಿ ಅವರನ್ನು ಗೌರವಿಸಲಾಯಿತು.

ಪ್ರತಿಭಾನ್ವಿತರಾದ ಸಂಚಿತ್  ಎಸ್.ಪೂಜಾರಿ ,ಪಲ್ಲವಿ ಪ್ರಕಾಶ್ ಪೂಜಾರಿ ಅವರನ್ನು ಪುರಸ್ಕರಿಸಲಾಯಿತು.

ಕಳೆದ 25 ವರ್ಷಗಳಿಂದ ಸಂಘದ ಎಲ್ಲಾ ಕಾರ್ಯಕ್ರಮಗಳ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕ ಶ್ರೀ ಬಿ.ಸುಧಾಕರ್ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಶ್ರೀ ಕುಷ್ಟು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು..ಗೌರವಾಧ್ಯಕ್ಷ ಶ್ರೀ ಗೋಪಾಲ್ ಪೂಜಾರಿ ಪ್ರಮುಖರಾದ ಶ್ರೀ ಸೋಮಪ್ಪ ಎ.ಸನಿಲ್ ,ಶ್ರೀ ಬಿ.ಎಂ.ಕೃಷ್ಣ ಪೂಜಾರಿ , ಶ್ರೀ ಗಣೇಶ್ ಪೂಜಾರಿ ಮೂಡುಹಿತ್ಲು , ಶ್ರೀ ಸುಬ್ರಹ್ಮಣ್ಯ ಎನ್ ಪೂಜಾರಿ ,ಗೀತಾ ಪೂಜಾರಿ, ಲಕ್ಷ್ಮೀ ಚಂದು ಪೂಜಾರಿ, ಗೌರಿ ವಿ.ಪೂಜಾರಿ,ಉಪಸ್ಥಿತರಿದ್ದರು.

ಜಯಾನಂದ ಎಂ.ಪೂಜಾರಿ ಸ್ವಾಗತಿಸಿ ,ಅಶೋಕ್ ಪೂಜಾರಿ ಹೊಸಾಳ ವಂದಿಸಿದರು...ಶ್ರೀ ಬಿ.ಸುಧಾಕರ್ ರಾವ್ ನಿರೂಪಿಸಿ ,ಶ್ರೀ ಅಶೋಕ್ ಸಿ.ಪೂಜಾರಿ ಸಹಕರಿಸಿದರು.

Leave Your Comment