logo

BTrendz 4th Anniversary


ಅಮೋದ್ ಇನ್ಫೊ ಮೀಡಿಯಾ, ರಾಜಾಜಿನಗರ, ಬೆಂಗಳೂರು ಇದರ ವತಿಯಿಂದ ಶ್ರೀ ಅರುಣ್ ವಿ. ಬಾರ್ಕೂರ್ ರವರ ಪ್ರೋತ್ಸಾಹದಿಂದ 2016 ರಲ್ಲಿ ಪ್ರಾರಂಭವಾದ "ಬಿ ಟ್ರೆಂಡ್ಸ್" (B Trendz) ಮಾಸಪತ್ರಿಕೆ ಇದರ ೪ ನೆಯ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ, ದಿನಾಂಕ 15.09.2019, ರವಿವಾರ ಬೆಳಿಗ್ಗೆ ಘಂಟೆ 11  ಕ್ಕೆ ಹೋಟೆಲ್ ಗೋಕುಲ್ ವೆಜ್,  ಡಿ.ವಿ.ಜಿ. ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರಿನಲ್ಲಿ ನಡೆಯಿತು.

4 ನೆಯ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಯನ್ನು ಹಿರಿಯ ಲೇಖಕಿ,  ಕನ್ನಡ ಕಥಾಗುಚ್ಛದ ಸಂಸ್ಥಾಪಕಿ  ಮತ್ತು ಮುಖ್ಯ ನಿರ್ವಾಹಕಿ  ಶ್ರೀಮತಿ ಲತಾ ಜೋಶಿ , ಬ್ಯಾಡಿಗಿ ಯವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಂಘಟಕ ಹಾಗೂ ಬಂಟರ ಸಂಘ, ವಿಜಯನಗರ, ಬೆಂಗಳೂರು ಇದರ  ಖಜಾಂಚಿಯಾದ ಶ್ರೀ ದೀಪಕ್ ಶೆಟ್ಟಿ ಬಾರ್ಕೂರ್ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಯಂತಿ ಜಗನ್ನಾಥ್ (ಸಂಚಾಲಕಿ, ಉದಯಭಾನು ಕಲಾಸಂಘ ಮಹಿಳಾ ವಿಭಾಗ, ಬೆಂಗಳೂರು), ಶ್ರೀಮತಿ ಸವಿತಾ ಫುರ್ಟಾಡೊ , ಬಾರ್ಕೂರು,(ಉದ್ಯಮಿ, ಜಯನಗರ ಹಾಗೂ ಕೋಶಾಧಿಕಾರಿ, ಕೊಂಕಣಿ ಸಮುದಾಯ್, ಜಯನಗರ, ಬೆಂಗಳೂರು) ಮತ್ತು ಶ್ರೀ ಅನಿಲ್ ಕುಮಾರ್, ಉದ್ಯಮಿ, ಬಿ.ಎ.ಕೆ. ಗ್ರೂಪ್, ವಿಜಯನಗರ, ಬೆಂಗಳೂರು) ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ   ಶ್ರೀಮತಿ  ಲತಾ ಜೋಶಿ , ಬ್ಯಾಡಿಗಿ ಯವರನ್ನು "ಬಿ ಟ್ರೆಂಡ್ಸ್" ವತಿಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ವಿಶೇಷ ಕೊಡುಗೆಗಾಗಿ ಸನ್ಮಾನಿಸಲಾಯಿತು. ಕನ್ನಡ ಕಥಾಗುಚ್ಛವೆಂಬ ಸಾಹಿತ್ಯಿಕ ಬಳಗವನ್ನು ಸಮಾಜಕ್ಕೆ ಪರಿಚಯಿಸಿ, ಸಮಾನ ಮನಸ್ಕ ನಿರ್ವಾಹಕಿಯರ ತಂಡದ ದಕ್ಷ ಸಹಕಾರದಿಂದ ಕನ್ನಡ ಸಾಹಿತ್ಯವನ್ನು ಸಾಹಿತಿಗಳನ್ನೂ ಬೆಳೆಸಿ ಪೋಷಿಸುತ್ತಿರುವ ಶ್ರೀಮತಿ ಲತಾ ಜೋಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ವಿಶೇಷ ಸಂಚಿಕೆಗೆ ಬರಹಗಳನ್ನು ನೀಡಿದ ಬರಹಗಾರರನ್ನು "ಬಿ ಟ್ರೆಂಡ್ಸ್" ವತಿಯಿಂದ ಸ್ನರಣಿಕೆ ನೀಡಿ ಗೌರವಿಸಲಾಯಿತು. ಸುಮರು 90 ಜನ ಸಾಹಿತ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave Your Comment