logo

Vishwa Kundapra Kannada day celebrations at Barkur

ವಿಶ್ವ ಕುಂದಾಪ್ರ ಕನ್ನಡ ದಿನ 2019 ಪ್ರಯುಕ್ತ ಬಾರಕೂರುಬಿಲ್ಲವ ಸೇವಾ ಸಂಘ (ರಿ) ಶಿವಗಿರಿ ಕ್ಷೇತ್ರ ಬಾರಕೂರು ಇವರ ಸಾರಥ್ಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಹೊಯ್ಕ್- ಬರ್ಕ್- ಕಾಣ್ಕ್ (ಹಾಡು ಹರಟೆಯ ವಿಚಾರ ಸಂಕೀರ್ಣ) ಬಾರಕೂರು ಶಿವಗಿರಿ ಕ್ಷೇತ್ರದ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷರಾದ ಅಶೋಕ್ ಪೂಜಾರಿ ಎಲ್ಲರನ್ನು ಆತ್ಮೀಯ ವಾಗಿ ಸ್ವಾಗತಿಸಿದರು. ಅಧ್ಯಕ್ಷರಾದ ಶ್ರೀ ಬಾಬು ಶಿವಪೂಜಾರಿ (ಹಿರಿಯ ಜಾನಪದ ಸಂಶೋಧಕರು) ಇವರು ಪ್ರಾಸ್ತಾವಿಕ ಮಾತನಾಡಿ ಕುಂದಾಪುರ ಕನ್ನಡ ಭಾಷೆಯ ಶ್ರೀಮಂತಿಕೆ ಹಾಗೂ ಇತಿಹಾಸ ಹಾಗೂ ಯಾಕೆ ಕೇವಲ ಭಾಷೆಯಲ್ಲ ಬದುಕು ಅಂತ ರಸವತ್ತಾಗಿ ವಿವರಿಸಿದರು. 

ನಂತರ  ಶ್ರೀ ಪಂಜು ಗಂಗೊಳ್ಳಿ (ಹಿರಿಯ ಸಾಹಿತಿಗಳು) ಇವರು ದೀಪ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಿ ಕುಂದಾಪ್ರ ಕನ್ನಡ ಪದಗಳ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು. ಸಭಿ ಗುರ್ಕಾರರಾಗಿ ಶ್ರೀ ಐರೋಡಿ ಗೋವಿಂದಪ್ಪ (ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು) ಹಾಜರಿದ್ದರು. 

ನಂತರ ಕುಂದಾಪ್ರ ಭಾಷಿಯಲ್ಲಿ ಹರಟೆ ಕಾರ್ಯಕ್ರಮ ದಲ್ಲಿ ಮೊದಲು  ಶ್ರೀ ರಘು ಪಾಂಡೇಶ್ವರ್ (ಹಾಸ್ಯ ಕಲಾವಿದರು, ಕಿರುತೆರೆನಟರು) ಇವರು ನೆರೆದ ಎಲ್ಲಾ ಪ್ರೇಕ್ಷಕರನ್ನು ತಮ್ಮ ನಾಟಕ ಜೀವನದ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದರು. ಶ್ರೀ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರು ಕುಂದಾಪ್ರ ಕನ್ನಡದ ಶ್ರೀಮಂತಿಕೆ ಹಾಗೂ ಅದರ ಶಬ್ದ ಬಂಡಾರದ ಬಗ್ಗೆ ರಸವತ್ತಾಗಿ ವರ್ಣಿಸಿದರು. 

ನಂತರ ಶ್ರೀ ಅಲ್ವಿನ್ ಅಂದ್ರಾದೆ ಹಾಸ್ಯ ನಾಟಕ ಕಲಾವಿದರು ಮತ್ತು ನಿರ್ದೇಶಕರು ಕುಂದಾಪ್ರ ಕನ್ನಡ ನಾಟಕಗಳು ಎಂಬ ವಿಚಾರದಲ್ಲಿ ಹರಟೆಯ ಮೂಲಕ ನೆರೆದ ಪ್ರೇಕ್ಷಕರ ಮನರಂಜಿಸಿದರು. ಶ್ರೀ ಬಿ.ಸೀತಾರಾಮ್ ಶೆಟ್ಟಿ  : ನಿವೃತ್ತ ಪ್ರಾಂಶುಪಾಲರು ಬಾರಕೂರು, ಶ್ರೀ ಸತೀಶ್ ಅಮೀನ್, ರೋಟರಿ ಅಧ್ಯಕ್ಷ ರಾದ ಸುಧಾಕರ್ ರಾವ್ ಮುಂತಾದವರು ಹಾಜರಿದ್ದರು. ಶ್ರೀ ಲಿಯಾಕತ್ ಆಲಿಬಾರಕೂರು ನಾಟಕ ಮತ್ತು ನ್ರತ್ಯ ನಿರ್ದೇಶಕರು ಇವರು ಕೂಡ ಜನಸಾಮಾನ್ಯರ ಕುಂದಾಪುರ ಕನ್ನಡದ ಭಾಷೆಯ ಬಳಕೆ ಹಾಗೂ ಅದರ ಆತ್ಮೀಯತೆ ಬಗ್ಗೆ ರಸವತ್ತಾಗಿ ವರ್ಣಿಸಿದರು.

ಕಾರ್ಯಕ್ರಮ ದ ನಡುವಿನಲ್ಲಿ ಕುಂದಾಪ್ರ ಕನ್ನಡ ಪದ್ಯಗಳನ್ನು ಹೆಸರಾಂತ ಗಾಯಕ  :ಶ್ರೀ ಸುರೇಶ್ ಕಾರ್ಕಡ ಇವರು ಹಾಡಿ ಮನರಂಜಿಸಿದರು. ಶ್ರೀ ನಾಗೇಶ್ ಶ್ಯಾನುಭೋಗ್ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರು ಕುಂದಾಪುರ ಕನ್ನಡ ದ ಬತ್ತಕುಟ್ಟುವ ಹಾಡುಗಳನ್ನು ಹಾಡಿದರು.  ಶ್ರೀ ಕೂಸ ಪೂಜಾರಿ ಮೂಡುತೋಟ (ಹಿರಿಯ ಶೋಭಾನೆ ಹಾಡುಗಾರರು)ಇವರನ್ನು ಸನ್ಮಾನಿಸಲಾಯಿತು.

ಈ ಇಡೀ ಕಾರ್ಯಕ್ರಮ ವನ್ನು ಬಹಳ ಲವಲವಿಕೆಯಿಂದ ಎಲ್ಲಾ ಪ್ರೇಕ್ಶಕರನ್ನು ಹಿಡಿದಿಟ್ಟು ಕೊಂಡು ಶ್ರೀ ನರೇಂದ್ರ ಕುಮಾರ್ ಕೋಟ ಇವರು ನಡೆಸಿದರು. ಶ್ರೀ ಸತೀಶ್ ಇವರು ಧನ್ಯವಾದ ಸಮರ್ಪಿಸಿದರುಈ ಸಂಘದ ಪದಾಧಿಕಾರಿಗಳು ಸದಸ್ಯರು ಬಾರಕೂರು ಬಿಲ್ಲವ ಸೇವಾ ಸಂಘ ಬಾರಕೂರು ಹಾಗೂ ಬಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಕೂಡ ಆಗಮಿಸಿದ್ದರು. ಈ ಕಾರ್ಯಕ್ರಮ ಒಂದು ಅತ್ಯುತ್ತಮ ಜನಮಾನಸದಲ್ಲಿ ಉಳಿಯುವಂತಹ ಕಾರ್ಯವಾಗಿ ಮೂಡಿಬಂತು..

News and Pics by Abhi Pandeshwara

Add comment