logo

ಸಾಧಕರಿಗೆ ಸನ್ಮಾನ


ಫೋಟೋ ಕೃಪೆ: ಶ್ರೀ ಸುರೇಶ್ ಎಂ.ಸುಭಾನು ಸ್ಟುಡಿಯೋ ಬಾರಕೂರು

ಬಾರಕೂರು ರಂಗನಕೆರೆ ಶ್ರೀ ಶೆಟ್ಟಿಗಾರ್ ಇಂಡಸ್ಟ್ರೀಸ್ ನಲ್ಲಿ ಜರುಗಿದ 14 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಬಾರಕೂರಿನ ಪ್ರಮುಖರನ್ನು ಗುರುತಿಸಿ ಸನ್ಮಾನಿಸಲಾಯಿತು.ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಜಗನ್ನಾಥ ನಾಯಕ್ , ಟೆಲಿಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ವೆಂಕಟ್ ನಾಯಕ್ ,ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಗಣಪತಿ ನಾಯಕ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಹಾಗೂ ವೇದ ಬ್ರಹ್ಮ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಸಂತೆಗುಡ್ಡೆ ಶ್ರೀ ಹೃಷಿಕೇಶ್ ಬಾಯರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಶೇಷವಾಗಿ 50 ವರ್ಷಗಳ ಸುಮಧುರ ದಾಂಪತ್ಯ ಜೀವನ ನಡೆಸಿದ ಬಾರಕೂರಿನ 5 ಜೋಡಿ ದಂಪತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಬಿ.ಶಾಂತಾರಾಮ್ ಶೆಟ್ಟಿ ಬಾರಕೂರು, ಶೆಟ್ಟಿಗಾರ್ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ , ಶೆಟ್ಟಿಗಾರ್ ಇಂಡಸ್ಟ್ರೀಸ್ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಉಮೇಶ್ ಆಚಾರ್ಯ ಮೂಡುಕೇರಿ ಬಾರಕೂರು, ಶ್ರೀ ರಮೇಶ್ ಭಟ್ ನಾಯರ್ ಬೆಟ್ಟು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


Leave Your Comment