logo

ಸಹಸ್ರ ಕುಂಕುಮಾರ್ಚನೆ ಸೇವೆ, ರಂಗಪೂಜೆ, ಹೂವಿನ ಪೂಜೆ at Panchalingeshwara Temple

ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಇಂದು ಸಾಮೂಹಿಕ ಸಹಸ್ರ ಕುಂಕುಮಾರ್ಚನೆ ಸೇವೆ, ರಂಗಪೂಜೆ, ಹೂವಿನ ಪೂಜೆ ಸೇವೆ ಜರುಗಿತು.ಪ್ರಧಾನ ಅರ್ಚಕರಾದ ಶ್ರೀ ವೆಂಕಟರಮಣ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ಆಡಳಿತ ಮೊಕ್ತೇಸರರಾದ ಶ್ರೀ ಮಂಜುನಾಥ ರಾವ್, ಕೋಶಾಧಿಕಾರಿ ಶ್ರೀ ಬಿ.ರಾಮಚಂದ್ರ ಕಾಮತ್, ಸದಸ್ಯರಾದ ಶ್ರೀ ಗಣೇಶ್ ಕುಂದರ್, ಶಂಕರ್ ಪ್ರಭು, ಕೂಸ.ಎಲ್.ಕುಂದರ್, ಅಶೋಕ್ ಮಾಸ್ತರ್ ಉಪಸ್ಥಿತರಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇವಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು..

ಶ್ರೀ ಪಂಚಲಿಂಗೇಶ್ವರ ದೇವರು, ಶ್ರೀ ಮಹಾಲಿಂಗೇಶ್ವರ, ಶ್ರೀ ಭುವನೇಶ್ವರಿ ದೇವಿ,ಹಾಗೂ ಪರಿವಾರ ದೇವತೆಗಳು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

Leave Your Comment