logo

Chandramukhi Sooryasakhi Yakshagana at Barkur

Anand Kumar Barkur

ನಾಳೆ ದೇವಾಲಯಗಳ ನಾಡು ಬಾರಕೂರಿನಲ್ಲಿ ಯಕ್ಷಗಾನದ ಮಾರ್ದನಿ. ಸಾಲಿಗ್ರಾಮ ಮೇಳದವರಿಂದ ಈ ವರ್ಷ ಜಯಬೇರಿ ಬಾರಿಸಿದ ಕಥಾನಕ

ಚಂದ್ರಮುಖಿ- ಸೂರ್ಯಸಖಿ

ಗೆಜ್ಜೆಯ ನಾದಕ್ಕೆ ಹೆಜ್ಜೆಯನ್ನಿಡುವ ಯಕ್ಷ ವೈಭವಕ್ಕೆ ಸಾಕ್ಷಿಯಾಗಲಿದೆ ನಮ್ಮ ಬಾರ್ಕೂರು... ದೇವದಾಸರ ವರ್ಣಮಯ ಯಕ್ಷ ಮಾಯಾ ಕುಂಚದಿಂ ವಿರಚಿತಗೊಂಡ ಚಂದ್ರಮುಖಿ- ಸೂರ್ಯ ಸಖಿ ಎನ್ನುವ ಸಾಮಾಜಿಕ ಕಥಾ ಹಂದರದ ಯಕ್ಷರೂಪಕ ಪ್ರದರ್ಶನಗೊಳ್ಳಲಿರುವುದು ನಮ್ಮ ದೇವಾಲಯಗಳ ನಾಡು ಬಾರ್ಕೂರಿನಲ್ಲಿ. ಪಡುವಣದಿ ಆ‌ ಖಗನು ತಾ ಇಳಿಯಲು. ಚಂದ್ರಮನ ತಂಗಾಳಿಯ ಬೆಳಕಿನ ಅಡಿಯಲ್ಲಿ ನಾನಾ ರೀತಿಯ ಬೆಳಕಿನ ಅಲಂಕಾರ, ಪುಷ್ಪಗಳ ಸುಮಧುರ ಪರಿಮಳದ ಯಕ್ಷ ರಂಗದಲ್ಲಿ ರಾರಾಜಿಸುವ, ಶ್ರೀ ಗುರುವಿನ ಆಶೀರ್ವಾದದಿಂದ ಪ್ರದರ್ಶನಗೊಳ್ಳುವ  ಯಕ್ಷ ಕಾವ್ಯವೇ ಚಂದ್ರಮುಖಿ ಸೂರ್ಯಸಖಿ.

ತನ್ನದೇ ಆದ ಹಾವ-ಭಾವಗಳಿಗೆ ವಿಭಿನ್ನವಾಗಿ ಹೆಸರುವಾಸಿಯದ ಯಕ್ಷ ಲೋಕದ ದಿಗ್ಗಜರಾದ ವಾಗ್ಮಿ ಬಳ್ಕೂರು ಯಾಜಿಯವರು, ನೀಲ್ಕೋಡು, ಮಂಕಿ, ಇದಕ್ಕೆ ಪ್ರತಿಯಾಗಿ ಯಕ್ಷ ನಾಟ್ಯರಂಜಿನಿಯಾದ ಶಶಿಕಾಂತ ಶೆಟ್ಟಿ ಕಾರ್ಕಳ,‌ ನೀರ್ಜೆಡ್ಡು, ಹಾಗೂ ವಂಡಾರುರವರ ಸ್ತ್ರೀವೇಷ, ಹಾಸ್ಯ ಮಾಂತ್ರಿಕ ಕ್ಯಾದಿಗಿಯವರ ಜೊತೆಯಲ್ಲಿ ಹಾಸ್ಯದ  ಹೊನಲು ಜಾರ್ಕಳರು, ಅಷ್ಟೇಕೆ ಸ್ವರ ಸಾಮ್ರಾಟ್ ಹಿಲ್ಲೂರು, ಮೂಡುಬೆಳ್ಳೆ ಇವರ ಮಾಧುರ್ಯದ ಯಕ್ಷಸ್ವರ ವೈಭವ, ಚೆಂಡೆಯ ಮಾಂತ್ರಿಕ ಕೋಟರವರಿಗೆ ಮದ್ದಳೆಯ ನಾದಬ್ರಹ್ಮ ಕರ್ಕಿಯವರ ಸಾಥ್ ಹೀಗೆ  ಬಡಗುತಿಟ್ಟಿನಲ್ಲಿ ತನ್ನದೇ‌ ಆದ ಛಾಪು‌ ಮೂಡಿಸಿದ ಸಿಡಿಲಮರಿ ಪುಂಡು ವೇಷಗಳು, ನಾಟ್ಯದಿ ನಲಿದು ಪ್ರೇಕ್ಷಕರ ಮನಗೆದ್ದ ಸ್ತ್ರೀ ವೇಷ ಗಳು, ವಿಶೇಷ ವಿಸ್ಮಯ ಮಾಡಬಲ್ಲ ಹಿಮ್ಮೇಳಗಳ ಕಲರವಗಳ ಸಮ್ಮಿಶ್ರವೇ ನಮ್ಮ ಈ ಕಥಾ ಹಂದರ.

ಹಿರಿಯರಿಂದ-ಕಿರಿಯವರಿಗೆ ಕುಟುಂಬ ಸಮೇತರಾಗಿ ನೋಡಬಹುದಾದ ಈ ಯಕ್ಷಕಥಾ ಚಿತ್ರ, ಅತ್ಯದ್ಬುತ ಸಂಭಾಷಣೆ, ತಿರುವುಗಳು, ವಿಭಿನ್ನವಾದ ಕಥೆ, ನೋಡನೊಡುತ್ತಿದ್ಧಂತೆ ಕಲಾಪ್ರೇಮಿಗಳು ಮೂಖವಿಸ್ಮಿತರಾಗುವುದರಲ್ಲಿ ದ್ವಂದ್ವ ಮಾತಿಲ್ಲ. ಎಲ್ಲಾ ಕಲಾವಿದರ ನಟನಾ ಚಾತುರ್ಯ, ವಾಕ್ಚಾತುರ್ಯ ಎಲ್ಲವೂ ಪಾರದರ್ಶಕವಾಗಿ ಪ್ರದರ್ಶಿಸುವ ಈ ಪ್ರಸಂಗವು ತನ್ನದೇ ಆದ ಛಾಪುಮೂಡಿಸಿರುವುದು ವಿಶೇಷ. ಒಮ್ಮೆ ನೋಡಿದರೇ ಮತ್ತೊಮ್ಮೆ, ಮಗದೊಮ್ಮೆ ನೋಡಲೇಬೇಕು ಎಣಿಸುವ ಇಲ್ಲಿ ಇರುವ ಕಥಾವಸ್ತು ಅತ್ಯದ್ಬುತ. ಇದನ್ನೆಲ್ಲಾ ಒಮ್ಮೆಗೆ ನೋಡಬೇಕೆಂದರೆ ಮರೆಯದಿರಿ ಇದೇ 12-02-2020  ನಮ್ಮ ಬಾರ್ಕೂರಿನಲ್ಲಿ.

ಇದೀಗ ನಿಮ್ಮ ಮುಂದೆ ಚಂದ್ರಮುಖಿ ಸೂರ್ಯಸಖಿ....ಬನ್ನಿ- ನೋಡಿ- ಪ್ರೋತ್ಸಾಹಿಸಿ.......

ಹಿಮ್ಮೇಳ:-ಗಾನವಾಹಿನಿ ರಾಮಕ್ರಷ್ಣ ಹಿಲ್ಲೂರು, ಚಂದ್ರಕಾಂತ್ ಮೂಡುಬೆಳ್ಳೆ, ಗಾನಸಿರಿ ಸುದೀಪ ಚಂದ್ರ ಶೆಟ್ಟಿ

ಮದ್ದಳೆಯ ನಾದಬ್ರಹ್ಮ ಪರಮೇಶ್ವರ ಭಂಡಾರಿ ಕರ್ಕಿ, ನಾಗರಾಜ್ ಭಂಡಾರಿ ಹಿರೇಬೈಲು

ಚಂಡೆಯ ಗಂಡುಗಲಿ ಶಿವಾನಂದ ಕೋಟ, ರಾಕೇಶ್ ಮಲ್ಯ ಹಳ್ಳಾಡಿ.

ಮುಮ್ಮೇಳ:-ವಿದ್ಯಾವಾಚಸ್ಪತಿ ಕ್ರಷ್ಣಯಾಜಿ ಬಳ್ಕೂರು.

ಯಕ್ಷಪರಾಕ್ರಮ ಪುಂಗವ ಶಂಕರ್ ಹೆಗ್ಡೆ ನೀಲ್ಕೊಡು    

ಹಾಸ್ಯ ಮಿಶ್ರಿತ ಮಾತುಗಾರ ತುಂಬ್ರಿ ಭಾಸ್ಕರ 

ನಲಿದಾಡುವ ಶಬ್ಧಕೋಶ ಮಂಕಿ ಈಶ್ವರ್ ನಾಯ್ಕ್   

ಕಲಾಚಲುವ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

ಸರ್ವವೇಶ ಸಂಪನ್ನ ನರಸಿಂಹ ಗಾಂವ್ಕರ್ ಅಭಿನವ ಯಾಜಿ ನಾಗರಾಜ್ ಭಂಡಾರಿ ಕೋಲ್ಮಿಂಚು ರಾಜೇಶ್ ಭಂಡಾರಿ

ಸಿಡಿಲ ಮರಿ  ಚಂದ್ರಹಾಸ್ ಗೌಡ ಹೊಸಪಟ್ಟಣ   

ವಿನಯ್ ಭಟ್ ಬೆರೊಳ್ಳಿ

ದಿನೇಶ್ ಕನ್ನಾರು

ಗಣಪತಿ ಅಚವೆ.


ಸ್ತ್ರೀವೇಷ:-ನವರಸ ರಂಜನಿ ಶಶಿಕಾಂತ್ ಶೆಟ್ಟಿ ಕಾರ್ಕಳ

ಮೋಹಕ ಯಕ್ಷಾಭಿನೇತ್ರಿ ಗೋವಿಂದ ವಂಡಾರು

ಕಮನೀಯ ಕಲಾವತಿ ಷಣ್ಮುಕ ಗೌಡ ಮಂಜುನಾಥ್ ಕೆರವಳ್ಳಿ 

ಗುರುಪ್ರಸಾದ್ ನೀರ್ಜಡ್ಡು.


ಹಾಸ್ಯ:-ಬಡಗಿನ ಅಗ್ರಗಣ್ಯ ಹಾಸ್ಯಗಾರ ಕ್ಯಾದಿಗೆ ಮಹಾಬಲೇಶ್ವರ ಭಟ್, ಹಾಸ್ಯದ ಹೊನಲು ಅರುಣ್ ಜಾರ್ಕಳ

ಕಾರ್ಯಕ್ರಮ ದ ವ್ಯವಸ್ಥಾಪಕರು: ಪವನ್ & ಲಕ್ಷ್ಮೀಶ್ ಭಟ್


ಶುಭಾಶಯಗಳೊಂದಿಗೆ 

ಆನಂದ್ ಕುಮಾರ್ ಬಾರಕೂರು.

Leave Your Comment