logo

ಆದರ್ಶ್ ಶಿಕ್ಷಕಾಂ..

Roshan D'Souza from Nagarmutt is famously known as Roshu Baba, Barkur in the Konkani Literary World with his distinct konkani poems. His collection of poems Kallja Udi ( ಕಾಳ್ಜಾಉಡಿ),The Heartbeat, is released recently by Aashawadi Publications in Mumbai. He works in Israel at present. Here at barkuronline.com we are happy to present 2 of his poems, one in Konkani and one in Kannada  on the occasion of Teacher's Day and wish all the Teachers from Barkur  and everywhere else who serve in this noble profession and say Thank you.

ಆದರ್ಶ್ ಶಿಕ್ಷಕಾಂ...

ಘರ್ಚೊ ಉಡಾಸ್ ಯೆತಾ ಮ್ಹಣ್ ರಡ್ಲ್ಯಾ ವೆಳಾರ್.

ಆಪ್ಲ್ಯಾ ತುವಾಲ್ಯಾಂತ್ ಮ್ಹಜಿಂ ದುಃಖಾಂ ಪುಸೊನ್.

ಆಜ್, ದುಸ್ರ್ಯಾಂಚಿ ದುಃಖಾಂ ಪುಸೊಂಕ್ ಶಿಕಯಿಲ್ಯಾ.

ತ್ಯಾ ಟೀಚೆರಿಕ್ ಕಾಳ್ಜಾಂತ್ ಥಾವ್ನ್ ಧಿನ್ವಾಸ್.....


ಮ್ಹಜಾ ಹಾತಾ ವಯ್ರ್ ತಿಚೊ ಹಾತ್ ದವರ್ನ್.

ಸ್ಲೇಟಿ ವಯ್ರ್ ಬಾರಿಕ್ ಕಡ್ಡಿ ಗಿಚವ್ನ್.

ಆಜ್, ಅಕ್ಷರಾಂಚಿ ಪೂರಾ ವಳೊಕ್ ಕರ್ನ್ ದಿಲ್ಯಾ.

ತ್ಯಾ ಟೀಚೆರಿಕ್ ಮ್ಹಜೊ ಖಾಲ್ತೊ ನಮಾನ್....


ಬುತಿ ಘರಾ ವಿಸ್ರೊನ್ ಆಯಿಲ್ಯಾ ತವಳ್.

ಆಪ್ಣಾನ್ ಹಾಡ್ ಲ್ಯಾಂತ್ಲೆಂ ಜೆವಾಣ್ ದಿಂವ್ನ್.

ಆಜ್, ವಾಂಟುನ್ ಜೆಂವ್ಚೆಂ ಕಶೆಂ ಮ್ಹಣ್ ಶಿಕಯಿಲ್ಯಾ.

ತ್ಯಾ ಟೀಚೆರಿಕ್ ಹಾಂವ್ ಸದಾಂ ಋಣಿಂ..


ಒತ್ತಾಯೆನ್ ತರಿಂ ಕ್ಲಾಸಿಂತ್ ಮುಕಾರ್ ರಾವವ್ನ್.

ಭಾಷಣಂ ಆನಿಂ ಪದಾಂ ಸಾಂಗವ್ನ್.

ಆಜ್, ಚಾರ್ ಜಣಾಂ ಮುಕಾರ್ ರಾವಂವ್ಕ್ ದೈರ್ ದಿಲ್ಯಾ.

ತ್ಯಾ ಟೀಚೆರಿಕ್ ಮುಜೆ ಮೊಗಾಚೆ ಪ್ರಣಾಮ್....


ಇಸ್ಕಾಲಾಂತ್ ಭುರ್ಗ್ಯಾಂ ಮದೆಂ ಜಗ್ಡೆಂ ಜಾತಾನಾಂ.

ಸಾಂಗಾತಾ ಆಪವ್ನ್ ಆಮ್ಕಾಂ ರಾಜಿ ಕರ್ನ್.

ಆಜ್, ಸಮಾಜೆಂತ್ ಕಶೆಂ ಮೊಗಾನ್ ಜಿಯೆಜಯ್ ಮ್ಹಣ್ ಶಿಕಯಿಲ್ಯಾ.

ತ್ಯಾ ಟೀಚೆರಿಕ್ ಮ್ಹಜೆ ಖಾಲ್ತೆ ವಂದನ್.


ಪಿಂಜ್ಕರ್ ವಸ್ತುರ್, ಬ್ಯಾಗ್ ಘಾಲ್ನ್ ಆಯಿಲ್ಯಾ ವೆಳಾರ್.

ನವೆಂ ಘೆಂವ್ಕ್ ಆಪ್ಲ್ಯಾ ಸಾಂಬಾಳಾಂತ್ಲೆ ಪೈಶೆ ದಿಂವ್ನ್.

ಆಜ್, ದುಸ್ರ್ಯಾಂಚ್ಯಾ ಗರ್ಜೆಕ್ ಕಶೆಂ ಪಾವಜಯ್ ಮ್ಹಣ್ ಶಿಕಯಿಲ್ಯಾ.

ತ್ಯಾ ಟೀಚೆರಿಕ್ ಹಾಂವ್ ಸದಾಂಚ್ ಅಭಾರ್....


ಮೆಟಾಂ  ಮೆಟಾಂನಿ ಪ್ರೊತ್ಸಾಹ್ ದಿಂವ್ನ್.

ಶಿಕ್ಪಾ ಸವೆಂ ನೈತಿಕ್ ಮೌಲ್ಯಾಂ ಶಿಕವ್ನ್.

ಆಜ್, ಮನಿಸ್ ಜಾಂವ್ನ್ ಮನ್ಶಾಂಬರಿ ಜಿಯೆಂವ್ಕ್ ಶಿಕಯಿಲ್ಯಾ.

ಸರ್ವ್ ಟೀಚರಾಂಕ್, ಶಿಕ್ಷಕಾಂಚಾ ದಿಸಾಚೆ ರಾಸ್ ರಾಸ್ ಉಲ್ಲಾಸ್........!.


"ಆದರ್ಶ ಶಿಕ್ಷಕರು."


ಅಂದು ಮನೆಯ ನೆನಪಾಗಿ ಅತ್ತಾಗ,

ತನ್ನ ಕರವಸ್ತ್ರದಿಂದ ಕಣ್ಣೀರ ಒರೆಸಿದ,

ಇಂದು, ಬೇರೆಯವರ ಕಣ್ಣೀರು ಹೇಗೆ ಒರೆಸಬೇಕೆಂದು ಹೇಳಿಕೊಟ್ಟ,

ಶಿಕ್ಷಕರೇ, ನಿಮಗಿದೋ ಪ್ರೀತಿಯ ವಂದನೆಗಳು.....


ನನ್ನ ಕೈಯ ಮೇಲೆ ತನ್ನ ಕೈಯನ್ನಿಟ್ಟು,

ಸ್ಲೇಟಿನಲ್ಲಿ ಬಳಪದಿಂದ ಅಕ್ಷರವ ಬರೆಸಿ,

ಇಂದು ಸಂಪೂರ್ಣ ಅಕ್ಷರ ಜ್ಞಾನ ಕಲಿಸಿಕೊಟ್ಟ,

ಶಿಕ್ಷಕರೇ, ನಿಮಗಿದೋ ಪ್ರೀತಿಯ ನಮನಗಳು....


ಬುತ್ತಿಯ ಮನೆಯಲ್ಲಿ ಮರೆತು ಬಂದಾಗ,

ತನ್ನ ಊಟವನ್ನು ನನ್ನೊಂದಿಗೆ ಹಂಚಿ,

ಇಂದು, ಹೇಗೆ ಹಂಚಿಕೂಂಡು ತಿನ್ನಬೇಕೆಂದು ಹೇಳಿಕೊಟ್ಟ,

ಶಿಕ್ಷಕರೇ, ನಿಮಗೆಂದಿಗೂ ನಾ ಸದಾ ಋಣಿ....


ಶಾಲೆಯಲ್ಲಿ ಸಣ್ಣಪುಟ್ಟ ಜಗಳಗಳಾದಗ,

ಹತ್ತಿರ ಕರೆದು ರಾಜಿ ಮಾಡಿಸಿ,

ಇಂದು ಸಮಾಜದಲ್ಲಿ ಸಹಬಾಳ್ವೆ ನಡೆಸಲು ಹೇಳಿಕೊಟ್ಟ,

ಶಿಕ್ಷಕರೇ, ನಿಮಗಿದೋ ಪ್ರೀತಿಯ ನಮಸ್ಕಾರಗಳು.....


ಹರಿದ ಬಟ್ಟೆಯ ಹಾಕಿ,  ಹರಿದ ಚೀಲ ತಂದಾಗ,

ತನ್ನರ್ಧ ಸಂಬಳ ನೀಡಿ ಹೊಸತು ತೆಗಿಸಿಕೊಟ್ಟ,

ಇಂದು, ಕಷ್ಟದಲ್ಲಿರುವವರಿಗೆ ಸಹಾಯವ ನೀಡಲು ಕಲಿಸಿಕೊಟ್ಟ, 

ಶಿಕ್ಷಕರೇ, ನಿಮಗಿದೋ ಹಾರ್ದಿಕ ಕೃತಜ್ಞತೆಗಳು....


ಹಿಂದೆ ಕುಳಿತಿರುತ್ತಿದ್ದ ನನ್ನ ಮುಂದೆ ಕರೆಸಿ,

ಗದ್ಯ-ಪದ್ಯವೆಲ್ಲ ಬಾಯಿಪಾಠ ಹೇಳಿಸಿ,

ಇಂದು ನಾಲ್ಕು ಜನರ ಮುಂದೆ ಧೈರ್ಯದಿ ನಿಲ್ಲಲು ಹೇಳಿಕೊಟ್ಟ,

ಶಿಕ್ಷಕರೇ, ನಿಮಗೆ ನಾನೆಂದಿಗೂ ಅಭಾರಿ....


ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹವ ನೀಡಿ,

ಶಿಕ್ಷಣದ ಜೊತೆ  ಜೊತೆಗೆ ನೈತಿಕ ಮೌಲ್ಯ ಕಲಿಸಿ,

ಇಂದು, ಮಾನವೀಯತೆಯೊಂದಿಗೆ ಸಹಬಾಳ್ವೆ ನಡೆಸಲು ಹೇಳಿಕೊಟ್ಟ,

ಎಲ್ಲಾ ಶಿಕ್ಷಕರೇ, ನಿಮಗಿದೋ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....


       ರೋಶು ಬಾಬಾ, ಬಾರ್ಕೂರು.


Add comment