logo

Shri Brahma Baidarkala Garadi, Hosala Barkur

-Anand Kumar Barkur.


ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೊಸಾಳ ಬಾರಕೂರು

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೊಸಾಳ ಬಾರಕೂರು ಇದರ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಇಂದು ಬೆಳಿಗ್ಗೆ 7 ಗಂಟೆಗೆ ವೇದಮೂರ್ತಿ ಶ್ರೀ ರಮೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಎಲ್ಲಾ ದೇವರುಗಳ ಕಲಾ ಸಂಕಚ ಮಾಡಿ ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.. ಜೀರ್ಣೋದ್ಧಾರ ಕಾರ್ಯಗಳನ್ನು ಒಂದು ವರ್ಷದ ಅವಧಿಯೊಳಗೆ ಪೂರೈಸಲು ಸಾಮೂಹಿಕವಾಗಿ ಪ್ರಾರ್ಥಿಸಿ ಶ್ರೀದೇವರ ಅನುಮತಿ ಪಡೆಯಲಾಯಿತು. ಈ ಅವಧಿಯೊಳಗೆ ಜೀರ್ಣೋದ್ಧಾರ ಕಾರ್ಯ ಪೂರ್ಣ ಗೊಳಿಸಿ ಪುನರ್ ಪ್ರತಿಷ್ಠಾಪಿಸಬೇಕಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಾಲಾಲಯಲದಲ್ಲಿ ಇರುವ ದೇವರ ವಿಗ್ರಹಗಳಿಗೆ ನಿತ್ಯಪೂಜೆ,ಹಣ್ಣು ಕಾಯಿ ಸೇವೆ ಮಾತ್ರ ನಡೆಯುತ್ತದೆ. ಯಾವುದೇ ವಿಶೇಷ ಪೂಜೆ, ದರ್ಶನ ಸೇವೆ, ಕೋಳಿ ಕೊಯ್ಯುವುದು ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ.

ಜೀರ್ಣೋದ್ಧಾರ ಕಾರ್ಯಕ್ಕೆ ಧನ ಸಹಾಯ ಮಾಡಲಿಚ್ಛಿಸುವವರು ಜೀರ್ಣೋದ್ಧಾರ ಸಮಿತಿಯ ಕೆನರಾ ಬ್ಯಾಂಕ್ ಬಾರಕೂರು ಶಾಖೆಯ ಖಾತೆ ಸಂಖ್ಯೆ A/c No. 3747214000002

IFSC No: CNRB 0003747 ಕ್ಕೆ ಕಳುಹಿಸಬಹುದು ಅಥವಾ ಸಮಿತಿಯ ಪದಾಧಿಕಾರಿಗಳಲ್ಲಿ ನೀಡಿ ರಶೀದಿ ಪಡೆದುಕೊಳ್ಳಬಹುದು.

Add comment